ನೆಲಮಂಗಲ : ಹೊಸ ವರ್ಷದ ಹಿನ್ನೆಲೆ ಶಿವಗಂಗೆ ಬೆಟ್ಟಕ್ಕೆ ಆಗಮಿಸಿದ್ದ ವ್ಯಕ್ತಿ ಬೆಟ್ಟದಿಂದ ಬಿದ್ದು ಸಾವನ್ನಪ್ಪಿದ್ದು, ಮತ್ತೋರ್ವ ವ್ಯಕ್ತಿ ಕಾಲು ಮುರಿದುಕೊಂಡಿರುವ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ರಾಮಕೃಷ್ಣ (26) ಎಂದು ಗುರುತಿಸಲಾಗಿದೆ.
ಶಿವಗಂಗೆ ಬೆಟ್ಟದಿಂದ ಬಿದ್ದು ವ್ಯಕ್ತಿ ಸಾವು.. ಮತ್ತೋರ್ವನಿಗೆ ಕಾಲು ಮುರಿತ - ಈಟಿವಿ ಭಾರತ ಕನ್ನಡ
ಹೊಸ ವರ್ಷ ಹಿನ್ನೆಲೆ- ಶಿವಗಂಗೆ ಬೆಟ್ಟಕ್ಕೆ ಬಂದಿದ್ದ ವ್ಯಕ್ತಿ ಬೆಟ್ಟದಿಂದ ಬಿದ್ದು ಸಾವು - ಮತ್ತೋರ್ವನಿಗೆ ಕಾಲು ಮುರಿತ
![ಶಿವಗಂಗೆ ಬೆಟ್ಟದಿಂದ ಬಿದ್ದು ವ್ಯಕ್ತಿ ಸಾವು.. ಮತ್ತೋರ್ವನಿಗೆ ಕಾಲು ಮುರಿತ Etv person-died-after-falling-from-shivaganga-hill-nelamangala](https://etvbharatimages.akamaized.net/etvbharat/prod-images/768-512-17369693-thumbnail-3x2-yyy.jpg)
ಶಿವಗಂಗೆ ಬೆಟ್ಟದಿಂದ ಬಿದ್ದು ವ್ಯಕ್ತಿ ಸಾವು : ಮತ್ತೋರ್ವನಿಗೆ ಕಾಲು ಮುರಿತ
ಹೊಸ ವರ್ಷ ಹಿನ್ನೆಲೆ ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟಕ್ಕೆ ಸುಮಾರು 25 ಸಾವಿರಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದರು. ಈ ವೇಳೆ ಬೆಟ್ಟ ಹತ್ತುತ್ತಿದ್ದ ರಾಮಕೃಷ್ಣ ಕಾಲು ಜಾರಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಜೊತೆಗೆ ಮತ್ತೋರ್ವ ವ್ಯಕ್ತಿ ಕಾಲು ಮುರಿದುಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಡಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ :ಬಂಟ್ವಾಳದ ನಾವೂರಿನಲ್ಲಿ ತೆಂಗಿನಕಾಯಿ ಕೀಳುವ ವೇಳೆ ಆಯತಪ್ಪಿ ಬಿದ್ದು ವ್ಯಕ್ತಿ ಸಾವು