ದೊಡ್ಡಬಳ್ಳಾಪುರ: ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ರೇಷನ್ ಅಂಗಡಿಯಲ್ಲೂ ಸಾಮಾಜಿಕ ಅಂತರ ಅನ್ವಯವಾಗಿದೆ. ತಾಲೂಕಿನ ಕನಸವಾಡಿ ಗ್ರಾಮದಲ್ಲಿ ಇಂದಿನಿಂದ ರೇಷನ್ ಕೊಡಲಾಗುತ್ತಿದೆ. ಹೀಗಾಗಿ ಸುತ್ತಮುತ್ತಲಿನ ಗ್ರಾಮಗಳ ಪಡಿತರರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ.
ಇದೆಲ್ಲ ಹೊಟ್ಟೆಗಾಗಿ... ಸುಡುಬಿಸಿಲನ್ನೂ ಲೆಕ್ಕಿಸದೆ ಕಿ.ಮೀ ಗಟ್ಟಲೇ ಸರದಿಯಲ್ಲಿ ನಿಂತ ಜನ - ಪಡಿತರ ಪಡೆಯಲು ಸಾಮಾಜಿಕ ಅಂತರ ವ್ಯವಸ್ಥೆ
ದೊಡ್ಡಬಳ್ಳಾಪುರ ತಾಲೂಕಿನ ಕನಸವಾಡಿ ಗ್ರಾಮದಲ್ಲಿ ಪಡಿತರ ಪಡೆಯಲು ಸಾಮಾಜಿಕ ಅಂತರ ವ್ಯವಸ್ಥೆ ಮಾಡಿದ್ದು, ಜನ ಕಿ.ಮೀ ಗಟ್ಟಲೇ ಬಿಸಿಲಿನ ನಡುವೆಯೂ ಸರತಿಯಲ್ಲೇ ನಿಂತು ತಮ್ಮ ಪಾಲಿನ ದವಸ ಪಡೆದ ದೃಶ್ಯ ಕಂಡು ಬಂತು.

ಸುಡುಬಿಸಿಲನ್ನೂ ಲೆಕ್ಕಿಸದೆ ಕಿ.ಮೀ ಗಟ್ಟಲೇ ಸರದಿಯಲ್ಲಿ ನಿಂತ ಜನ
ಸುಡುಬಿಸಿಲನ್ನೂ ಲೆಕ್ಕಿಸದೆ ಕಿ.ಮೀ ಗಟ್ಟಲೇ ಸರದಿಯಲ್ಲಿ ನಿಂತ ಜನ.
ಪಡಿತರ ಪಡೆಯಲು ಸಾಮಾಜಿಕ ಅಂತರ ವ್ಯವಸ್ಥೆ ಮಾಡಿದ್ದು. ಜನ ಕಿ.ಮೀ ಗಟ್ಟಲೇ ಬಿಸಿಲಲ್ಲೇ ಸರದಿಯಲ್ಲೇ ನಿಂತು ತಮ್ಮ ಪಾಲಿನ ದವಸ ಪಡೆಯುತ್ತಿದ್ದಾರೆ. ಸ್ಥಳದಲ್ಲಿ ನೆರಳಿನ ವ್ಯವಸ್ಥೆ ಸಹ ಇಲ್ಲದೇ, ಸುಡು ಬಿಸಿಲಲ್ಲಿಯೇ ಜನ ಸರದಿಯಲ್ಲಿ ನಿಂತು ರೇಷನ್ ತೆಗೆದುಕೊಳ್ಳುತ್ತಿದ್ದಾರೆ.
ರೇಷನ್ ಪಡೆಯಲು ಒಂದೇ ದಿನ ಎಲ್ಲರೂ ಜಮಾಯಿಸಿರೊದರಿಂದ ಕಿ.ಮೀಗಟ್ಟಲೇ ಸರದಿಯನ್ನ ಉಂಟು ಮಾಡಿದೆ. ಮೊದಲೇ ಗೊಂದಲ್ಲಿರುವ ಜನರು ನಾಳೆ ದವಸ ಕೊಡ್ತಾರೋ ಇಲ್ವೊ ಅನ್ನೊ ಭಯದಲ್ಲಿ ಸುಡು ಬಿಸಿಲನ್ನು ಲೆಕ್ಕಿಸದೇ ಗಂಟೆ ಗಟ್ಟಲೆ ಸರದಿಯಲ್ಲಿ ನಿಂತು ಪಡಿತರ ಪಡೆಯುತ್ತಿದ್ದಾರೆ.