ಹೊಸಕೋಟೆ (ಬೆಂಗಳೂರು ಗ್ರಾಮಾಂತರ):ಚೀಟಿ ಹೆಸರಿನಲ್ಲಿ ಲಕ್ಷಾಂತರ ರೂ. ಹಣ ಕಳೆದುಕೊಂಡಿದ್ದೇವೆ ಎಂದು ಆರೋಪಿಸಿ ನೂರಾರು ಜನರು ಇಂದು ನಗರದ ಕೆಇಬಿ ಕಪ್ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಿದರು. ನಗರದಲ್ಲಿ ಕಳೆದ ಹಲವು ವರ್ಷಗಳಿಂದ ಶಿವಕುಮಾರ್ ಎಂಬುವರು ಚೀಟಿ ವ್ಯವಹಾರ ನಡೆಸುತ್ತಿದ್ದರು. ಇವರನ್ನು ನಂಬಿ ನೂರಾರು ಜನ ಚೀಟಿ ಹಾಕಿದ್ದರು. ಆದರೆ ಕಳೆದ ಆಗಸ್ಟ್ನಲ್ಲಿ ಶಿವಕುಮಾರ್ ಅನಾರೋಗ್ಯದಿಂದ ಸಾವನ್ನಪ್ಪಿದ್ದು, ಹಣದೊಂದಿಗೆ ಅವರ ಕುಟುಂಬಸ್ಥರು ಪರಾರಿಯಾಗಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಕೂಲಿ-ನಾಲಿ ಮಾಡಿ, ಹೂ ಮಾರಾಟ ಮಾಡಿ, ಮಗಳ ಮದುವೆ ಹಾಗೂ ವಿದ್ಯಾಭ್ಯಾಸಕ್ಕೆಂದು ಕೂಡಿಟ್ಟಿದ್ದ ಹಣವನ್ನು ಚೀಟಿ ಹಾಕಿದ್ದೆವು. ಆದರೆ ಮೋಸ ಮಾಡಿ ಹಣದೊಂದಿಗೆ ಕುಟುಂಬ ಎಸ್ಕೇಪ್ ಆಗಿದೆ. 300ಕ್ಕೂ ಅಧಿಕ ಮಂದಿ ವಂಚನೆಗೆ ಒಳಗಾಗಿದ್ದಾರೆ. ಸಚಿವರು, ಶಾಸಕರು ನಮಗೆ ಸಹಾಯ ಮಾಡಬೇಕು. ಪರಾರಿಯಾಗಿರುವ ಕುಟುಂಬದಿಂದ ನಮ್ಮ ಹಣವನ್ನು ಕೊಡಿಸಿ ಎಂದು ಮಹಿಳೆಯರು ಕಣ್ಣೀರಿಡುತ್ತಾ ರಸ್ತೆಯಲ್ಲಿ ಧರಣಿ ನಡೆಸಿದರು.
ದೂರು ನೀಡಿದರೂ ನೋ ರೆಸ್ಪಾನ್ಸ್: