ದೊಡ್ಡಬಳ್ಳಾಪುರ:ವಿಶ್ವ ಪರಿಸರ ದಿನದಂದು ಗಿಡ ನೆಡುವುದು ಮಾಮೂಲಿ, ಆದರೆ ಗಾಳಿಗೆ ನೆಲಕ್ಕುರುಳಿದ ಬೇವಿನ ಮರವನ್ನು ನಿಲ್ಲಿಸುವ ಮೂಲಕ ಇಲ್ಲಿನ ಯುವಕರು ಪರಿಸರ ಪ್ರೇಮ ಮೆರೆದಿದ್ದಾರೆ.
ವಿಶ್ವ ಪರಿಸರ ದಿನದಂದು ಗಾಳಿಗೆ ಉರುಳಿದ ಮರಕ್ಕೆ ಮರುಜೀವ ನೀಡಿದ ಪರಿಸರ ಪ್ರೇಮಿಗಳು - ದೊಡ್ಡಬಳ್ಳಾಪುರ ನಗರದ ಸ್ಕೌಟ್ಸ್ ಕ್ಯಾಂಪ್ ರಸ್ತೆ
ನಿನ್ನೆ ಸುರಿದ ಗಾಳಿ ಮಳೆಗೆ ಬೇವಿನ ಮರ ಬುಡ ಸಮೇತ ಉರುಳಿ ಬಿದ್ದಿತ್ತು. ಬಡಾವಣೆ ನಿವಾಸಿಗಳು ಉರುಳಿ ಬಿದ್ದ ಮರವನ್ನು ನಿಲ್ಲಿಸಿಬೇವಿನ ಮರಕ್ಕೆ ಮರು ಜೀವ ನೀಡಿದ್ದಾರೆ.
tree
ದೊಡ್ಡಬಳ್ಳಾಪುರ ನಗರದ ಸ್ಕೌಟ್ಸ್ ಕ್ಯಾಂಪ್ ರಸ್ತೆಯ ಬಿ.ಪ್ರಕಾಶ್ ಬಡಾವಣೆಯ ಪಾರ್ಕ್ನಲ್ಲಿ ನಿನ್ನೆ ಸುರಿದ ಗಾಳಿ ಮಳೆಗೆ ಬೇವಿನ ಮರ ಬುಡ ಸಮೇತ ಉರುಳಿ ಬಿದ್ದಿತ್ತು. ಬಡಾವಣೆ ನಿವಾಸಿಗಳು ಉರುಳಿ ಬಿದ್ದ ಮರವನ್ನು ನಿಲ್ಲಿಸಿ ಬೇವಿನ ಮರಕ್ಕೆ ಮರು ಜೀವ ನೀಡಿದ್ದಾರೆ.
ವಿಶ್ವ ಪರಿಸರ ದಿನ ಗಿಡ ನೆಡುವುದು ಮಾಮೂಲಿ ಆದರೆ ನೆಲಕ್ಕುರುಳಿದ ಬೇವಿನ ಮರವನ್ನು ಮತ್ತೆ ನಿಲ್ಲಿಸಿದ ಬಡಾವಣೆ ನಿವಾಸಿಗಳ ಪರಿಸರ ಪ್ರೇಮಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.