ಕರ್ನಾಟಕ

karnataka

ETV Bharat / state

ವಿಷಯುಕ್ತ ತ್ಯಾಜ್ಯ ನೀರು ಕೆರೆಗೆ ಬಿಟ್ಟರೆ ಮ್ಯಾನ್ ಹೋಲ್ ಬಂದ್.. ಗ್ರಾಮಸ್ಥರ ಎಚ್ಚರಿಕೆ - ಮ್ಯಾನ್ ಹೋಲ್ ಬಂದ್ ಮಾಡುವ ಎಚ್ಚರಿಕೆ ನೀಡಿದ ದೊಡ್ಡಬಳ್ಳಾಪುರ ಗ್ರಾಮಸ್ಥರು

ನಗರದ ಒಳಚರಂಡಿ ನೀರು ಶುದ್ಧೀಕರಣಕ್ಕೆ ಚಿಕ್ಕ ತುಮಕೂರು ಕೆರೆಯಂಗಳದಲ್ಲಿ ದೊಡ್ಡಬಳ್ಳಾಪುರ ನಗರಸಭೆ STP ಘಟಕ ಸ್ಥಾಪನೆ ಮಾಡಿದೆ. ಆದರೆ ಅವೈಜ್ಞಾನಿಕ STP ಘಟಕದಿಂದ ವಿಷಯುಕ್ತ ನೀರು ನೇರವಾಗಿ ಕೆರೆಗಳಿಗೆ ಸೇರುತ್ತಿದೆ. ಅಲ್ಲದೇ, ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಿಂದ ಬರುವ ನೀರು ಎಸ್​ಟಿಪಿ ಘಟಕದಲ್ಲಿ ಶುದ್ಧೀಕರಣವಾಗದೆ ನೇರವಾಗಿ ಕೆರೆಯನ್ನ ಸೇರುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

people-outrage-against-poisonous-waste-water-in-doddaballapura
ವಿಷಯುಕ್ತ ತ್ಯಾಜ್ಯ ನೀರು ಕೆರೆಗೆ ಸೇರ್ಪಡೆ

By

Published : Feb 3, 2022, 5:35 PM IST

ದೊಡ್ಡಬಳ್ಳಾಪುರ: ಅರ್ಕಾವತಿ ನದಿ ಪಾತ್ರದಲ್ಲಿ ಬರುವ ಕೆರೆಗಳಿಗೆ ದೊಡ್ಡಬಳ್ಳಾಪುರ ನಗರ ಮತ್ತು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ವಿಷಯುಕ್ತ ನೀರು ಸೇರುತ್ತಿದೆ. ಈ ನೀರನ್ನು ನಿಲ್ಲಿಸದಿದ್ದರೆ ಮ್ಯಾನ್ ಹೋಲ್​ಗಳಿಗೆ ಕಾಂಕ್ರೀಟ್ ಸುರಿದು ಬಂದ್ ಮಾಡುವ ಎಚ್ಚರಿಕೆಯನ್ನ ಗ್ರಾಮಸ್ಥರು ನೀಡಿದ್ದಾರೆ.

ಅರ್ಕಾವತಿ ನದಿ ಪಾತ್ರದಲ್ಲಿ ಬರುವ ಕೆರೆಗಳಾದ ತಿಪ್ಪಾಪುರ, ಚಿಕ್ಕ ತುಮಕೂರು, ದೊಡ್ಡತುಮಕೂರು, ಮಜರಾಹೊಸಹಳ್ಳಿ ಕೆರೆಗಳಿಗೆ ವಿಷಯುಕ್ತ ನೀರು ಸೇರುತ್ತಿರುವ ಹಿನ್ನಲೆ ಇಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಮತ್ತು ಶಾಸಕರಾದ ಟಿ. ವೆಂಕಟರಮಣಯ್ಯ ಕೆರೆಗಳು ಮತ್ತು ನಗರಸಭೆಯ STP ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಜಿಲ್ಲಾಧಿಕಾರಿಗಳ ಭೇಟಿ ವೇಳೆ ಸ್ಥಳದಲ್ಲಿದ್ದ ಸುತ್ತಮುತ್ತಲಿನ ಗ್ಥಾಮಸ್ಥರ ವಿಷಯುಕ್ತ ನೀರಿನಿಂದ ಅನುಭವಿಸುತ್ತಿರುವ ಸಮಸ್ಯೆಗಳನ್ನ ಮನವರಿಕೆ ಮಾಡಿಕೊಟ್ಟರು.

ನಗರದ ಒಳಚರಂಡಿ ನೀರು ಶುದ್ಧೀಕರಣಕ್ಕೆ ಚಿಕ್ಕ ತುಮಕೂರು ಕೆರೆಯಂಗಳದಲ್ಲಿ ದೊಡ್ಡಬಳ್ಳಾಪುರ ನಗರಸಭೆ STP ಘಟಕ ಸ್ಥಾಪನೆ ಮಾಡಿದೆ. ಆದರೆ ಅವೈಜ್ಞಾನಿಕ STP ಘಟಕದಿಂದ ವಿಷಯುಕ್ತ ನೀರು ನೇರವಾಗಿ ಕೆರೆಗಳಿಗೆ ಸೇರುತ್ತಿದೆ. ಅಲ್ಲದೇ, ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಿಂದ ಬರುವ ನೀರು ಎಸ್​ಟಿಪಿ ಘಟಕದಲ್ಲಿ ಶುದ್ಧೀಕರಣವಾಗದೆ ನೇರವಾಗಿ ಕೆರೆಯನ್ನ ಸೇರುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ಕೈಗಾರಿಕಾ ಮತ್ತು ನಗರದ ತ್ಯಾಜ್ಯ ನೀರಿನಿಂದ ಅರ್ಕಾವತಿ ನದಿ ಪಾತ್ರ ಕೆರೆಗಳು ವಿಷವಾಗಿವೆ. ಕೆರೆ ನೀರು ಕುಡಿದು ನೂರಾರು ಮೇಕೆ, ಕುರಿಗಳು ಸಾವನ್ನಪ್ಪಿವೆ. ಜಾನುವಾರುಗಳು ಅನಾರೋಗ್ಯಕ್ಕೆ ತುತ್ತಾಗಿವೆ. ಜನರು ಮುಟ್ಟಲು ಹೆದರುವ ಪರಿಸ್ಥಿತಿ ಇದೆ. ದೊಡ್ಡಬಳ್ಳಾಪುರ ನಗರಸಭೆ ಮತ್ತು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತ್​ ವರ್ತನೆಯಿಂದ ಬೇಸತ್ತು ಹೋಗಿರುವ ಗ್ರಾಮಸ್ಥರು ಮತ್ತೆ ವಿಷಯುಕ್ತ ನೀರು ಕೆರೆಗೆ ಬಿಟ್ಟರೆ ನಗರಸಭೆಯ ಮ್ಯಾನ್ ಹೋಲ್​ಗಳಿಗೆ ಕಾಂಕ್ರೀಟ್ ಸುರಿಯಲಾಗುವುದು ಮತ್ತು ಕಾಲುವೆಗಳನ್ನ ಬಂದ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಓದಿ:ಶಿವಮೊಗ್ಗ: ಚಲಿಸುತ್ತಿದ್ದ ಬಸ್​ನ್ನು ಹತ್ತಲು ಮುಂದಾದ ವಿದ್ಯಾರ್ಥಿ: ಆಮೇಲೇನಾಯ್ತು ನೋಡಿ

For All Latest Updates

TAGGED:

ABOUT THE AUTHOR

...view details