ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ಸಿಕ್ಕ ಕೇರಳ ವ್ಯಕ್ತಿಯ ಅಂಕಪಟ್ಟಿ, ಪಾಸ್​ಪೋರ್ಟ್: ಮರಳಿಸಲು ಕೆಎಸ್​ಆರ್​ಟಿಸಿ ಸಿಬ್ಬಂದಿ ಹರಸಾಹಸ - degree marks card

ನಿದ್ದೆ ಮಂಪರಿನಲ್ಲಿ ಅಂಕಪಟ್ಟಿ ಬಿಟ್ಟು ಹೋದ ಪದವೀಧರ - ಆತನ ಪತ್ತೆಗಾಗಿ ನಿದ್ದೆಗೆಟ್ಟು ಹುಡುಕುತ್ತಿರುವ ಕೆಎಸ್​ಆರ್​ಟಿಸಿ ಸಿಬ್ಬಂದಿ..!

ಕೇರಳ ವ್ಯಕ್ತಿಯ ಪದವಿ ಅಂಕಪಟ್ಟಿ ಸೇರಿದಂತೆ ಪಾಸ್​ಪೋರ್ಟ್ ಮಿಸ್ಸಿಂಗ್​

By

Published : Jun 12, 2019, 6:14 PM IST

ದೊಡ್ಡಬಳ್ಳಾಪುರ: ಕೇರಳದ ವ್ಯಕ್ತಿಯೊಬ್ಬನ ಪದವಿ ಅಂಕಪಟ್ಟಿ ಸೇರಿದಂತೆ ಪಾಸ್​ಪೋರ್ಟ್ ಸಿಕ್ಕಿರುವ ಘಟನೆ ನಗರದಲ್ಲಿ ನಡೆದಿದ್ದು, ಇಲ್ಲಿನ ಕೆಎಸ್​ಆರ್​ಟಿಸಿ ಸಿಬ್ಬಂದಿ ಈ ಪತ್ರಗಳನ್ನು ಕಳೆದುಕೊಂಡಾತನಿಗೆ ಮರಳಿಸಲು ಹರಸಾಹಸಪಡುತ್ತಿದ್ದಾರೆ.

ವಾರದ ಹಿಂದೆ ಹಿಂದೂಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಕೇರಳ ಮೂಲದ ರಿಬಿನ್ ಬೇಬಿ ಎಂಬಾತನ ಎಂಜಿನಿಯರಿಂಗ್​​ ಪದವಿಗೆ ಸಂಬಂಧಿಸಿದ ಎಲ್ಲಾ ವರ್ಷದ ಅಂಕಪಟ್ಟಿ ಹಾಗೂ ಪಾಸ್​ಪೋರ್ಟ್ ಮೆಜೆಸ್ಟಿಕ್​ ಬಸ್ ನಿಲ್ದಾಣದಲ್ಲಿ ದೊರಕಿದ್ದು, ಇವುಗಳನ್ನು ಮರಳಿಸಲು ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.

ಅಂದು ಎಲ್ಲಾ ಪ್ರಯಾಣಿಕರು ಬಸ್​ನಿಂದ ಇಳಿದ ಮೇಲೆ ನಿರ್ವಾಹಕನ ಕಣ್ಣಿಗೆ ಇವುಗಳು ಕಂಡಿದ್ದವು. ಈ ವೇಳೆ ಬಸ್​ ನಿರ್ವಾಹಕ, ಚಾಲಕ ಈಶ್ವರ್ ನಾಯಕ್ ಎಂಬುವರ ಗಮನಕ್ಕೆ ತಂದಿದ್ದರು. ಇದೀಗ ಈ ಸಂಬಂಧ ಎಲ್ಲಾ ಅಂಕಪಟ್ಟಿಗಳನ್ನು ದೊಡ್ಡಬಳ್ಳಾಪುರ ಡಿಪೋ ವ್ಯವಸ್ಥಾಪಕ ಎಂ.ಬಿ.ಆನಂದ್​ಗೆ ಒಪ್ಪಿಸಿದ್ದಾರೆ.

ಡಿಪೋ ವ್ಯವಸ್ಥಾಪಕರ ಪ್ರಾಮಾಣಿಕ ಪ್ರಯತ್ನ:

ಎಂಜಿನಿಯರ್​ ಪದವಿ ಪೂರ್ಣಗೊಳಿಸಲು ಕಠಿಣ ಪರಿಶ್ರಮ ಅಗತ್ಯ. ಈ ರೀತಿ ಶ್ರಮ ಪಟ್ಟು ಪದವಿ ಪೂರ್ಣಗೊಳಿಸಿರುವ ವ್ಯಕ್ತಿ ಬಸ್​ನಲ್ಲಿ ತನ್ನೆಲ್ಲಾ ಅಂಕಪಟ್ಟಿಗಳನ್ನು ಕಳೆದುಕೊಂಡಿರುವುದಕ್ಕೆ ಡಿಪೋ ವ್ಯವಸ್ಥಾಪಕ ಆನಂದ್​ ಬೇಸರ ವ್ಯಕ್ತಪಡಿಸಿದ್ದಾರೆ.

ಕೇರಳ ವ್ಯಕ್ತಿಯ ಪದವಿ ಅಂಕಪಟ್ಟಿ ಸೇರಿದಂತೆ ಪಾಸ್​ಪೋರ್ಟ್ ಮಿಸ್ಸಿಂಗ್​

ಪಾಸ್​​ಪೋರ್ಟ್​ನಲ್ಲಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ ನಾಟ್ ರೀಚಬಲ್​ ಆಗಿದೆ. ಏನೆಲ್ಲಾ ಮಾಡಬೇಕೋ ಅದನ್ನೆಲ್ಲಾ ಮಾಡಿದ್ದೇನೆ. ಆದರೆ, ದಾಖಲೆಗಳನ್ನು ತಲುಪಿಸುವುದು ಹೇಗೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಅಂತಿಮವಾಗಿ ಮಾಧ್ಯಮದ ಮೂಲಕ ಅಂಕಪಟ್ಟಿ ಸೇರಿದಂತೆ ಪಾಸ್​​ಪೋರ್ಟ್​ನ್ನು ಕಳೆದುಕೊಂಡಾತನಿಗೆ ತಲುಪಿಸಲು ಮುಂದಾಗಿರುವುದಾಗಿ ತಿಳಿಸಿದರು. ಅಲ್ಲದೇ, ದಾಖಲೆಗಳನ್ನು ತಂದುಕೊಟ್ಟ ಚಾಲಕ ಸೇರಿದಂತೆ ನಿರ್ವಾಹಕರ ಕಾರ್ಯಕ್ಕೆ ಮೆಚ್ಚುಗೆ ಸಹ ವ್ಯಕ್ತಪಡಿಸಿದರು.

ಕರೆ ಮಾಡಿ:

ದೊಡ್ಡಬಳ್ಳಾಪುರ ಡಿಪೋ ವ್ಯವಸ್ಥಾಪಕ ಎಂ.ಬಿ.ಆನಂದ್ 7760990367 ಸಂಖ್ಯೆಗೆ ಕರೆ ಮಾಡಿ ದಾಖಲೆಗಳನ್ನು ಪಡೆಯಬಹುದಾಗಿದೆ.
ಇಲ್ಲಿಗೆ ಸಂಪರ್ಕಿಸಿ: ದೊಡ್ಡಬಳ್ಳಾಪುರ ಕೆಎಸ್​ಆರ್​ಟಿಸಿ ಡಿಪೋ, ಸರ್ಕಾರಿ ಜೂನಿಯರ್ ಕಾಲೇಜು ಮುಂಭಾಗ, ದೊಡ್ಡಬಳ್ಳಾಪುರ.

ABOUT THE AUTHOR

...view details