ದೇವನಹಳ್ಳಿ (ಬೆಂಗಳೂರು ಗ್ರಾಂ.):ರಟ್ಟಿನ ಪೆಟ್ಟಿಗೆಯೊಳಗೆ ಮರೆಮಾಚಿ ಹೆರಾಯಿನ್ ಸಾಗಿಸುತ್ತಿದ್ದ ಪ್ರಯಾಣಿಕನನ್ನು ಬಂಧಿಸಿರುವ ಕಸ್ಟಮ್ಸ್ ಅಧಿಕಾರಿಗಳು 1,926 ಗ್ರಾಂ ಮಾದಕ ದ್ರವ್ಯ ಜಪ್ತಿ ಮಾಡಿದ್ದಾರೆ. ನವೆಂಬರ್ 18 ರಂದು ಅಡಿಸ್ ಅಬಾಬಾದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕ ಮಾದಕ ದ್ರವ್ಯ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ್ದರು. ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ದೇವನಹಳ್ಳಿ: ಹೆರಾಯಿನ್ ಸಾಗಾಣಿಕೆ, ಸಿಕ್ಕಿಬಿದ್ದ ಪ್ರಯಾಣಿಕ - passenger who got caught by customs
ರಟ್ಟಿನ ಪೆಟ್ಟಿಗೆಯೊಳಗೆ ಮರೆಮಾಚಿ ಮಾದಕ ದ್ರವ್ಯ ಹೆರಾಯಿನ್ ಸಾಗಿಸಲು ಪ್ರಯತ್ನಿಸಿದ ಪ್ರಯಾಣಿಕನೊಬ್ಬ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ.
![ದೇವನಹಳ್ಳಿ: ಹೆರಾಯಿನ್ ಸಾಗಾಣಿಕೆ, ಸಿಕ್ಕಿಬಿದ್ದ ಪ್ರಯಾಣಿಕ Transporting the drug heroin concealed inside a cardboard box](https://etvbharatimages.akamaized.net/etvbharat/prod-images/768-512-16978859-thumbnail-3x2-mh23.jpg)
ರಟ್ಟಿನ ಪೆಟ್ಟಿಗೆಯೊಳಗೆ ಮರೆಮಾಚಿ ಮಾದಕ ದ್ರವ್ಯ ಹೆರಾಯಿನ್ ಸಾಗಣಿಕೆ
Last Updated : Nov 20, 2022, 10:02 AM IST