ನೆಲಮಂಗಲ :ಪಾರ್ಕ್ಗಾಗಿ ಮೀಸಲಿಟ್ಟ ಜಾಗವನ್ನ ನಕಲಿ ದಾಖಲೆ ಸೃಷ್ಠಿಸಿ ಖಾಸಗಿ ವ್ಯಕ್ತಿಗೆ ಪುರಸಭಾ ಸದಸ್ಯ ಮಾರಾಟ ನಡೆಸಿದ್ದರು ಎನ್ನಲಾಗಿತ್ತು. ಇದೀಗ ಲೋಕಾಯುಕ್ತರ ಆದೇಶದ ಮೇರೆಗೆ ಒತ್ತುವರಿ ಜಾಗವನ್ನ ಹಿಂಪಡೆಯಲಾಗಿದೆ.
ಪುರಸಭಾ ಸದಸ್ಯನಿಂದ ಪಾರ್ಕ್ ಜಾಗ ಒತ್ತುವರಿ... ಲೋಕಾಯುಕ್ತರ ಆದೇಶದ ಮೇರೆಗೆ ತೆರವು! - ಲೋಕಾಯುಕ್ತರ ಆದೇಶದ ಮೇರೆಗೆ ತೆರವು
ನೆಲಮಂಗಲ ಪುರಸಭಾ ಸದಸ್ಯನಿಂದ ಪಾರ್ಕ್ ಜಾಗ ಒತ್ತುವರಿ ಮಾಡಲಾಗಿದ್ದು, ಇದೀಗ ಜಿಲ್ಲಾಧಿಕಾರಿ ಹಾಗೂ ಯೋಜನಾ ನಿರ್ದೇಶಕರ ಆದೇಶದ ಮೇರೆಗೆ ಒತ್ತುವರಿ ಜಾಗ ತೆರವುಗೊಳಿಸಲಾಗಿದೆ.
![ಪುರಸಭಾ ಸದಸ್ಯನಿಂದ ಪಾರ್ಕ್ ಜಾಗ ಒತ್ತುವರಿ... ಲೋಕಾಯುಕ್ತರ ಆದೇಶದ ಮೇರೆಗೆ ತೆರವು! park-space-is-looted-by-a-member-of-the-nalamangala-municipality](https://etvbharatimages.akamaized.net/etvbharat/prod-images/768-512-5220873-thumbnail-3x2-sanju.jpg)
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪಟ್ಟಣದ ಕುಣಿಗಲ್ ಬೈಪಾಸ್ ರಸ್ತೆಯ ವಾರ್ಡ್ ನಂ.1 ಕಂದಸ್ವಾಮಿ ಬಡಾವಣೆಯಲ್ಲಿ ಪಾರ್ಕ್ ನಿರ್ಮಾಣಕ್ಕೆಂದು ಜಾಗವನ್ನು ಮೀಸಲಿಡಲಾಗಿತ್ತು. ಆದರೆ ಈ ಪಾರ್ಕ್ ಜಾಗವನ್ನು ಕಬಳಿಸಲು ಪುರಸಭಾ ಸದಸ್ಯ ಸುಳ್ಳು ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಯೊಬ್ಬರ ಹೆಸರಲ್ಲಿ ಅಕ್ರಮ ಖಾತೆ ಮಾಡಿಕೊಟ್ಟಿದ್ದ. ಈ ಜಾಗವನ್ನು ಬಾಡಿಗೆ ಕೊಟ್ಟು ಹಣ ಸಂಪಾದನೆ ಮಾಡುತ್ತಿದ್ದ .ಈ ಸಂಬಂಧ ಲೋಕಾಯುಕ್ತ ಕಛೇರಿಗೆ ಆರ್ ಟಿಐ ಕಾರ್ಯಕರ್ತರೊಬ್ಬರು ದೂರನ್ನು ನೀಡಿದ್ದರು. ಹೀಗಾಗಿ ಲೋಕಾಯುಕ್ತರು ಒತ್ತುವರಿ ಜಾಗವನ್ನು ತೆರವುಗೊಳಿಸುವಂತೆ ಆದೇಶ ನೀಡಿದ್ದರು.
ಜಿಲ್ಲಾಧಿಕಾರಿ ಹಾಗೂ ಯೋಜನಾ ನಿರ್ದೇಶಕರ ಆದೇಶದ ಮೇರೆಗೆ ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಜಯಪ್ಪ ನೇತೃತ್ವದಲ್ಲಿ ಒತ್ತುವರಿ ಪಾರ್ಕ್ ಜಾಗ ತೆರವುಗೊಳಿಸಿದ್ದು, ಕೋಟ್ಯಾಂತರ ಮೌಲ್ಯದ ಸರ್ಕಾರಿ ಜಾಗವನ್ನು ಪುರಸಭೆ ವಶಕ್ಕೆ ಪಡೆದಿದೆ. .