ಬೆಂಗಳೂರು :ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ ತಮ್ಮ ಮಗು ಹೂಳಲು ಹಣವಿಲ್ಲದೇ ಕೆರೆಯ ಪಕ್ಕದಲ್ಲಿಯೇ ಹೂತು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಅಯ್ಯೋ ದುರ್ವಿಧಿಯೇ.... ಮೃತ ಮಗನ ಹೂಳಲು ಹಣವಿಲ್ಲದೇ ಕೆರೆಂಗಳದಲ್ಲಿಯೇ ಸಮಾಧಿ ಮಾಡಿದ ಹೆತ್ತವರು! - ಕೆರೆಯ ಹತ್ತಿರ ಸಮಾಧಿ
ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ ತಮ್ಮ ಮಗುವನ್ನು ಹೂಳಲು ಹಣವಿಲ್ಲದೇ ಕೆರೆಯ ಪಕ್ಕದಲ್ಲಿಯೇ ಹೂತು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಚಂದಾಪುರ - ದೊಮ್ಮಸಂದ್ರ ರಸ್ತೆಯ ನಾರಾಯಣಘಟ್ಟ ಗ್ರಾಮದ ಕೆರೆಯಂಗಳದಲ್ಲಿ ಈ ಘಟನೆ ನಡೆದಿದೆ. ಆ ಮಗುವಿನ ತಂದೆ ತಾಯಿ ಉತ್ತರ ಭಾರತದ ಮೂಲದವರಾಗಿದ್ದು, ಕೂಲಿ ಕೆಲಸಕ್ಕೆ ಬೆಂಗಳೂರಿಗೆ ಬಂದಿದ್ದರು ಎಂದು ಹೇಳಲಾಗ್ತಿದೆ.
ಮಣ್ಣಲ್ಲಿ ಹೂತಿರುವ ಮಗುವನ್ನು ಹೊರ ತೆಗೆದ ಸೂರ್ಯಸಿಟಿ ಪೊಲೀಸರು ಆ ಮಗು 11 ರಿಂದ 12 ವರ್ಷದ ಬಾಲಕ ಎಂದು ಗುರುತಿಸಿದ್ದಾರೆ.ಇನ್ನು ಆನೇಕಲ್ ತಹಶೀಲ್ದಾರ್ ಮಹದೇವಯ್ಯ ನೇತೃತ್ವದಲ್ಲಿ ಸೂರ್ಯಸಿಟಿ ಪೊಲೀಸರು ಹಾಗೂ ಖಾಸಗಿ ವೈದ್ಯರ ಸಹಕಾರದಿಂದ ನಾರಾಯಣಘಟ್ಟ ಕೆರೆಯಂಗಳಕ್ಕೆ ತೆರಳಿದ ತಂಡ ಕಾರ್ಯಾಚರಣೆ ನಡೆಸಿ ಮೃತ ಬಾಲಕನ ಶವವನ್ನು ಹೊರ ತೆಗೆದಿದೆ.