ನೆಲಮಂಗಲ: ಇತ್ತೀಚೆಗಷ್ಟೇ ನಗರಸಭೆಗೆ ಸೇರ್ಪಡೆಯಾದ ವಾಜರಹಳ್ಳಿ ಗ್ರಾಮ ಪಂಚಾಯಿತಿಯ ಹಾಲಿ ಸದಸ್ಯೆ ಹಾಗೂ ಅರಿಶಿನಕುಂಟೆ ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷೆ ಭಾಗ್ಯ ಕೆಂಪರಾಜು ತಮ್ಮ 26 ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಸರಳವಾಗಿ ಆಚರಿಸಿಕೊಂಡರು.
ದಿನಸಿ ಕಿಟ್ ವಿತರಿಸಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಪಂಚಾಯಿತಿ ಸದಸ್ಯೆ - Panchayat Member Marriage Anniversary
ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷೆ ಭಾಗ್ಯ ಕೆಂಪರಾಜು ತಮ್ಮ 26 ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಗ್ರಾಮ ಪಂಚಾಯತ್ ಕಚೇರಿಯಲ್ಲಿ ದಿನಸಿ ಕಿಟ್ಗಳ ವಿತರಣೆ ಮಾಡುವ ಮೂಲಕ ಸರಳವಾಗಿ ಆಚರಿಸಿಕೊಂಡರು.

ವಿವಾಹ ವಾರ್ಷಿಕೋತ್ಸವದ ಅಂಗವಾಗಿ 250 ಕ್ಕೂ ಹೆಚ್ಚು ದಿನಸಿ ಕಿಟ್ಗಳ ವಿತರಣೆ ಮತ್ತು ವಾರ್ಡ್ನ ಹಿರಿಯ ನಾಗರಿಕರಿಗೆ ಔಷಧಿ ಕಿಟ್ಗಳ ವಿತರಣೆ ಹಾಗೂ ಸ್ಯಾನಿಟೈಸರ್ ವಿತರಣೆ ಮಾಡಿದರು.
ದಿನಸಿ ಕಿಟ್ ವಿತರಣೆಯ ಮೂಲಕ ಸರಳ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಮಾಜಿ ಉಪಾಧ್ಯಕ್ಷೆ ಭಾಗ್ಯ ಕೆಂಪರಾಜು
ನಂತರ ಮಾತನಾಡಿ ಕೊರೊನಾ ಭೀತಿಯಿಂದಾಗಿ ಇಡೀ ದೇಶವೇ ಲಾಕ್ಡೌನ್ ಆದ ಪರಿಣಾಮ ಜನ ಸಾಮಾನ್ಯರು ಪರದಾಡುವಂತಾಗಿದೆ. ಈಗಾಗಲೇ ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವಾರು ಗ್ರಾಮಗಳಲ್ಲಿ ಆಹಾರದ ಅಗತ್ಯತೆ ಇರುವವರನ್ನು ಗುರುತಿಸಿ ದಿನಸಿ ಕಿಟ್ಗಳ ವಿತರಣೆ ಮಾಡಲಾಗಿದೆ ಎಂದರು.