ನೆಲಮಂಗಲ: ತ್ಯಾಮಗೊಂಡ್ಲು ಹೊಬಳಿಯ ಕಳಲುಘಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿದಲೂರು ಗ್ರಾಮದ ಹೊರಭಾಗದಲ್ಲಿರು ಓವರ್ ಹೆಡ್ ಟ್ಯಾಂಕ್ ಬೆಳಗಿನ ಜಾವ ನೆಲಕ್ಕುರುಳಿದ್ದು, ಇದಕ್ಕೆ ಕಳಪೆ ಕಾಮಗಾರಿ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕುಸಿದು ಬಿದ್ದ ಓವರ್ ಹೆಡ್ ಟ್ಯಾಂಕ್ : ಗುತ್ತಿಗೆದಾರನ ವಿರುದ್ಧ ಗ್ರಾಮಸ್ಥರ ಆಕ್ರೋಶ - nelamangala news
ತ್ಯಾಮಗೊಂಡ್ಲು ಹೊಬಳಿಯ ಕಳಲುಘಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿದಲೂರು ಗ್ರಾಮದ ಹೊರಭಾಗದಲ್ಲಿರು ಓವರ್ ಹೆಡ್ ಟ್ಯಾಂಕ್ ಬೆಳಗಿನ ಜಾವ ನೆಲಕ್ಕುರುಳಿದೆ.
2013-14 ನೇ ಸಾಲಿನಲ್ಲಿ ಪಂಚಾಯತ್ ರಾಜ್ ಇಲಾಖೆ ಅಡಿಯಲ್ಲಿ ರಾಷ್ಟ್ರೀಯ ಶುದ್ಧ ಕುಡಿಯುವ ನೀರಿನ ಯೋಜನೆಯಡಿ ನಿರ್ಮಾಣವಾದ ಟ್ಯಾಂಕ್ ಇದಾಗಿದೆ. ಕಳೆದ ಕೆಲ ದಿನಗಳಿಂದ ಟ್ಯಾಂಕ್ ಬಿರುಕುಬಿಟ್ಟು ಅಲುಗಾಡುತ್ತಿತ್ತು, ವಾಟರ್ ಮ್ಯಾನ್ ನೀರು ಹಾಯಿಸಲು ಭಯಪಡುತ್ತಿದ್ದ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಬಿದಲೂರು ಗ್ರಾಮದ ಗ್ರಾಮ ಪಂಚಾಯತಿ ಸದಸ್ಯ ಹಾಗೂ ಗುತ್ತಿಗೆದಾರ ರವಿಕುಮಾರ್ ಎಂಬುವರು ಗುತ್ತಿಗೆ ಪಡೆದುಕೊಂಡು ಈ ಕಾಮಗಾರಿ ನಡೆಸಿದ್ದರು ಎನ್ನಲಾಗಿದೆ. ಇನ್ನು ಕಳಪೆ ಕಾಮಗಾರಿ ಮಾಡಿದವರ ವಿರುದ್ಧ ಕ್ರಮ ಜರುಗಿಸಿ ಶೀಘ್ರದಲ್ಲಿ ನೀರಿನ ವ್ಯವಸ್ಥೆ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹ ಮಾಡಿದ್ದಾರೆ.