ಕರ್ನಾಟಕ

karnataka

ETV Bharat / state

ರಾಜ್ಯದ 60 ಲಕ್ಷ ಕುರುಬರು ಒಂದಾಗಿದ್ದಾರೆ, ಎಸ್​ಟಿಗೆ ಸೇರುವವರೆಗೂ ಹೋರಾಟ ನಡೆಯುತ್ತೆ: ಕೆಎಸ್ ಈಶ್ವರಪ್ಪ - Kurubas fight for included in ST group

ಕುರುಬರ ಎಸ್​ಟಿ ಹೋರಾಟ ಸಮಿತಿಯ ಸಮಾರೋಪ ಸಮಾರಂಭ ತುಮಕೂರು ರಸ್ತೆಯ ಮಾದವಾರ ಬಳಿಯ ಬಿಐಇಸಿ ಮೈದಾನದಲ್ಲಿ ಫೆಬ್ರವರಿ 7 ರಂದು ನಡೆಯಲಿದ್ದು. ಸಮಾರಂಭದ ಸಿದ್ದತೆಯನ್ನು ಪರಿಶೀಲನೆ ನಡೆಸಿದ ನಂತರ ಈಶ್ವರಪ್ಪ ಮಾಧ್ಯಮದ ಜೊತೆ ಮಾತನಾಡಿದರು.

ಕುರುಬರ ಎಸ್​ಟಿ ಹೋರಾಟ ಸಮಿತಿಯ ಸಮಾರೋಪ ಸಮಾರಂಭ
ಕುರುಬರ ಎಸ್​ಟಿ ಹೋರಾಟ ಸಮಿತಿಯ ಸಮಾರೋಪ ಸಮಾರಂಭ

By

Published : Feb 6, 2021, 1:33 AM IST

ನೆಲಮಂಗಲ: ಕುರುಬರ ಎಸ್​ಟಿ ಹೋರಾಟದಲ್ಲಿ ರಾಜ್ಯದ 60 ಲಕ್ಷ ಕುರುಬರು ಕೈ ಜೋಡಿಸಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್​ ಈಶ್ವರಪ್ಪ ತಿಳಿಸಿದ್ದಾರೆ.

ಕುರುಬರ ಎಸ್​ಟಿ ಹೋರಾಟ ಸಮಿತಿಯ ಸಮಾರೋಪ ಸಮಾರಂಭ ತುಮಕೂರು ರಸ್ತೆಯ ಮಾದವಾರ ಬಳಿಯ ಬಿಐಇಸಿ ಮೈದಾನದಲ್ಲಿ ಫೆಬ್ರವರಿ 7 ರಂದು ನಡೆಯಲಿದ್ದು. ಸಮಾರಂಭದ ಸಿದ್ದತೆಯನ್ನು ಪರಿಶೀಲನೆ ನಡೆಸಿದ ನಂತರ ಈಶ್ವರಪ್ಪ ಮಾಧ್ಯಮದ ಜೊತೆ ಮಾತನಾಡಿದರು.

ಕುರುಬರ ಎಸ್​ಟಿ ಹೋರಾಟ ಸಮಿತಿಯ ಸಮಾರೋಪ ಸಮಾರಂಭ

ಕುರುಬರನ್ನು ಎಸ್​ಟಿಗೆ ಸೇರಿಸಬೇಕೆನ್ನುವ ಬೇಡಿಕೆ ಸ್ವಾತಂತ್ರ್ಯ ಬಂದಾಗಿನಿಂದಲು ಇದೆ. ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಕುರುಬರ ಎಸ್​ಟಿ ಹೋರಾಟ ನಾಗಲೋಟದಲ್ಲಿ ಓಡುತ್ತಿದೆ. ಇಡೀ ರಾಜ್ಯದ ಕುರುಬರು ಒಟ್ಟಾಗುತ್ತಾರೆಂಬ ಕಲ್ಪನೆ ಯಾರಿಗೂ ಇರಲಿಲ್ಲ. ಅನಕ್ಷರಸ್ಥನಿಂದ ಐಎಎಸ್ ಆಫೀಸರ್, ಬಡವರಿಂದ ಶ್ರೀಮಂತರು, ಬೆಂಗಳೂರಿನಿಂದ ರಾಜ್ಯದ ಎಲ್ಲಾ ಕುರುಬರು ಒಟ್ಟಾಗಿದ್ದಾರೆ. ಕುರುಬರಿಗೆ ಎಸ್​ಟಿ ಸಿಕ್ಕ ನಂತರವೇ ಹೋರಾಟ ಮುಗಿಯುವುದು ಅಲ್ಲಿಯವರೆಗೂ ರಾಜ್ಯದ 60 ಲಕ್ಷ ಕುರುಬರು ಒಂದಾಗಿರುತ್ತಾರೆ.

ಸಮಾವೇಶಕ್ಕೆ ದುಡ್ಡು ಎಲ್ಲಿಂದ ಬರುತ್ತೆ ಎಂದು ಕೇಳುತ್ತಾರೆ, ಹಳ್ಳಿಯಲ್ಲಿ ಕುರಿ ಕಾಯುವರು ಕುರಿ ಮಾರಿ ಸ್ವಾಮೀಜಿಯವರೀಗೆ ಹಣ ನೀಡಿದ್ದಾರೆ. ಅವರ ಭಕ್ತಿ ಮತ್ತು ಆಸಕ್ತಿ ನೋಡಿದ್ರೆ ಖಂಡಿತಾ ಕುರುಬ ಸಮುದಾಯ ಎಸ್​ಟಿಗೆ ಸೇರುತ್ತದೆ ಎಂದರು.

ABOUT THE AUTHOR

...view details