ನೆಲಮಂಗಲ:ಶಸ್ತ್ರಚಿಕಿತ್ಸೆಗಾಗಿ ಕಷ್ಟಪಟ್ಟು ಹಣ ಕೂಡಿಟ್ಟುಕೊಂಡು ಮಹಿಳೆ ಆಸ್ಪತ್ರೆಗೆ ಬಂದರೆ ಆ ಹಣವನ್ನು ಕ್ಷಣ ಮಾತ್ರದಲ್ಲಿ ಕಳ್ಳರು ಕದ್ದೊಯ್ದ ಘಟನೆ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.
ನೆಲಮಂಗಲ: ಗರ್ಭಕೋಶದ ಆಪರೇಷನ್ಗಾಗಿ ತಂದಿದ್ದ ಹಣ ಕದ್ದೊಯ್ದ ಕಳ್ಳರು - theft in nelamangala government hospital
ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗಾಗಿ ಬಂದಿದ್ದ ಮಹಿಳೆಯ ಹಣವನ್ನು ಕದ್ದೊಯ್ದ ಘಟನೆ ನಡೆದಿದೆ. ಕಳ್ಳತನದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ನೆಲಮಂಗಲ ತಾಲೂಕಿನ ಅಪ್ಪೇಗೌಡನಪಾಳ್ಯದ ವನಜಾಕ್ಷಿ ಎಂಬುವರು ಗರ್ಭಕೋಶದ ಕಾಯಿಲೆಗೆ ತುತ್ತಾಗಿದ್ದರು. ಶಸ್ತ್ರಚಿಕಿತ್ಸೆಗಾಗಿ ಹಣವನ್ನು ವ್ಯಾನಿಟಿ ಬ್ಯಾಗ್ನಲ್ಲಿ ಇಟ್ಟುಕೊಂಡು ತಂದಿದ್ದರು. ವ್ಯಾನಿಟಿ ಬ್ಯಾಗ್ ಅನ್ನು ಹೊರಗಿಟ್ಟು ಒಳಗೆ ಹೋಗಿದ್ದಾರೆ. ಹೊರಗೆ ಬರುವ ಹೊತ್ತಿಗೆ ಕ್ಷಣ ಮಾತ್ರದಲ್ಲಿ ವ್ಯಾನಿಟಿ ಬ್ಯಾಗ್ ಎಗರಿಸಿದ ಬುರ್ಕಾಧಾರಿ ಮಹಿಳೆ ಪರಾರಿಯಾಗಿದ್ದಾರೆ. ಕಳ್ಳತನದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವ್ಯಾನಿಟಿ ಬ್ಯಾಗ್ನಲ್ಲಿ ಶಸ್ತ್ರಚಿಕಿತ್ಸೆಗಾಗಿ ಕೂಡಿಟ್ಟ 15 ಸಾವಿರ ನಗದು ಹಣ, ಎರಡು ಮೊಬೈಲ್ ಮತ್ತು ಮನೆಯ ಕೀ ಸಮೇತ ವ್ಯಾನಿಟಿ ಬ್ಯಾಗ್ ಅನ್ನು ಬುರ್ಕಾಧಾರಿ ಮಹಿಳೆ ಕದ್ದೊಯ್ದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೆಲಮಂಗಲ ಟೌನ್ ಸ್ಟೇಷನ್ನಲ್ಲಿ ಪ್ರಕರಣ ದಾಖಲಾಗಿದೆ.