ದೊಡ್ಡಬಳ್ಳಾಪುರ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಹೆಸರಿನಲ್ಲಿ ಕರೆ ಮಾಡಿದ ವ್ಯಕ್ತಿಯೋರ್ವ ಕ್ರೆಡಿಟ್ ಕಾರ್ಡ್ ಸಾಲದ ಮಿತಿ ಹೆಚ್ಚಿಸುವುದಾಗಿ ಹೇಳಿ ವ್ಯಕ್ತಿಯೊಬ್ಬರ ಎರಡು ಬ್ಯಾಂಕ್ ಖಾತೆಗಳಿಂದ 58 ಸಾವಿರ ರೂ ಎಗರಿಸಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ನಗರದ ಬಸವೇಶ್ವರನಗರದ ನಿವಾಸಿಯಾದ ರಾಕೇಶ್‌ಗೆ ಕಳೆದ ಸೋಮವಾರ ಫೋನ್ ಕರೆ ಬಂದಿತ್ತು. ಎಸ್ಬಿಐ ಹೆಸರಿನಲ್ಲಿ ಕರೆ ಮಾಡಿದ ವ್ಯಕ್ತಿ, ಕ್ರೆಡಿಟ್ ಕಾರ್ಡ್‌ನ ಸಾಲದ ಮೊತ್ತದ ಮಿತಿ ಹೆಚ್ಚು ಮಾಡುತ್ತೇವೆ ಎಂದು ಹೇಳಿದ್ದಾನೆ. ಎಸ್ಬಿಐ ಬ್ಯಾಂಕ್‌ನವರೇ ಫೋನ್ ಮಾಡಿದ್ದಾರೆ ಎಂದು ನಂಬಿದ ರಾಕೇಶ್, ಕರೆ ಮಾಡಿದ ವ್ಯಕ್ತಿಗೆ ಆಧಾರ್ ಕಾರ್ಡ್, ಖಾತೆಯ ಮಾಹಿತಿಯೊಂದಿಗೆ ಒಟಿಪಿ ನಂಬರ್ ಕೂಡಾ ಕೊಟ್ಟಿದ್ದಾರೆ. ಇದಾದ ಬಳಿಕ ಇವರ ಎಸ್ಬಿಐ ಖಾತೆಯಲ್ಲಿದ್ದ 32 ಸಾವಿರ ರೂಪಾಯಿ ಮಾಯವಾಗಿದೆ.