ಕರ್ನಾಟಕ

karnataka

ETV Bharat / state

ರಾತ್ರೋರಾತ್ರಿ ನಿಧಿ ಶೋಧಕ್ಕೆ ಹೋದ ಖದೀಮರು: ಮಂಟಪ ಕುಸಿದು ಓರ್ವ ಸಾವು, ಮೂವರ ಸ್ಥಿತಿ ಗಂಭೀರ - ನಿಧಿ ಶೋಧ

ಸುಮಾರು ಸಾವಿರ ವರ್ಷಗಳ ಪುರಾತನ ಆಂಜನೇಯ ಸ್ವಾಮಿ ದೇವಾಲಯದಲ್ಲಿ ನಿಧಿ ಶೋಧಿಸಲು 8 ಜನರ ತಂಡ ಮುಂದಾಗಿತ್ತು, ಈ ವೇಳೆ ಮಂಟಪ ಕುಸಿದು ಓರ್ವ ಸಾವನ್ನಪ್ಪಿದ್ದಾನೆ. ಹೊಸಕೋಟೆ ತಾಲೂಕಲ್ಲಿ ಘಟನೆ ನಡೆದಿದೆ.

one person died while seraching tressure in Hosakote
ದುರ್ಘಟನೆ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿರುವ ಪೊಲೀಸರು

By

Published : Aug 7, 2020, 1:31 PM IST

ಹೊಸಕೋಟೆ:ನಿಧಿ ಶೋಧ ಮಾಡುತ್ತಿದ್ದ ವೇಳೆ ಪುರಾತನ ಕಾಲದ ಮಂಟಪ ಕುಸಿದು ಓರ್ವ ಸ್ಥಳದಲ್ಲೇ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ತಾಲೂಕಿನ ಹಿಂಡಿಗನಾಳ ಗ್ರಾಮದ ಹೆದ್ದಾರಿ ಬಳಿಯಿರುವ ಸುಮಾರು ಸಾವಿರ ವರ್ಷಗಳ ಪುರಾತನ ಆಂಜನೇಯ ಸ್ವಾಮಿ ದೇವಾಲಯದಲ್ಲಿ ನಿಧಿ ಶೋಧಿಸಲು 8 ಜನರ ತಂಡ ಮುಂದಾಗಿತ್ತು, ಈ ವೇಳೆ ಮಂಟಪ ಕುಸಿದಿದೆ. ಪರಿಣಾಮ ಮಂಟಪದ ಅಡಿಯಲ್ಲಿ ಸಿಲುಕಿ ಹಿಂಡಿಗಾನಾಳದ ಸುರೇಶ್ (23) ಮೃತಪಟ್ಟಿದ್ದಾನೆ. ಕೆಂಬಡಿಗಾನಹಳ್ಳಿಯ ಶ್ರೀನಿವಾಸ್, ಮಂಜುನಾಥ್ ಹಾಗೂ ಯಲಹಂಕದ ಸಬಾಸಿನ್ ಎಂಬವರಿಗೆ ಗಂಭೀರ ಗಾಯಗಳಾಗಿವೆ. ಘಟನೆ ನಡೆದ ತಕ್ಷಣ ಇನ್ನುಳಿದವರು ಪರಾರಿಯಾಗಿದ್ದಾರೆ.

ದುರ್ಘಟನೆ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿರುವ ಪೊಲೀಸರು

ಮಧ್ಯರಾತ್ರಿ 12 ಗಂಟೆಯ ಸಮಯದಲ್ಲಿ ಈ ಈ ತಂಡದವರು ದೇವಾಲಯದಲ್ಲಿ ನಿಧಿ ಶೋಧಿಸಲು ಮುಂದಾದ ವೇಳೆ ಈ ದುರ್ಘಟನೆ ಸಂಭವಿಸಿದೆ. ಘಟನೆ ನಡೆದಾಗ ಮಂಟಪದ ಅಡಿಯಲ್ಲಿ ಸಿಲುಕಿಕೊಂಡವರನ್ನು ರಕ್ಷಿಸಲು ನಿಧಿಗಳ್ಳರು 108 ಆ್ಯಂಬ್ಯುಲೆನ್ಸ್​ಗೆ ಕರೆ ಮಾಡಿ ತಿಳಿಸಿದ್ದಾರೆ. ಆ್ಯಂಬುಲೆನ್ಸ್​ ಚಾಲಕ ಸ್ಥಳಕ್ಕೆ ಬಂದು ವಿಚಾರಿಸಿದಾಗ ಅನುಮಾನ ಬಂದು ಸ್ಥಳೀಯ ನಂದಗುಡಿ ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮಂಟಪದ ಅಡಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿ ವಶಕ್ಕೆ ಪಡೆದಿದ್ದಾರೆ.

ಉಳಿದವರು ಸ್ಥಳಕ್ಕೆ ಪೊಲೀಸರು ಬರುತ್ತಿದ್ದಂತೆ ಅಲ್ಲಿಂದ ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details