ಆನೇಕಲ್: ಜೂನ್ 13 ರಂದು ಮೊದಲ ಕೊರೊನಾ ಪ್ರಕರಣ ಕಂಡ ಬಂದ ಪಟ್ಟಣದಲ್ಲಿ ಇದೀಗ ದಿನಕ್ಕೊಂದರಂತೆ ರೋಗಿಗಳ ಸಂಖ್ಯೆ ಏರುತ್ತಿದೆ. ದೆಹಲಿಯಿಂದ ರೈಲಿನ ಮೂಲಕ ಬೆಂಗಳೂರಿಗೆ ಬಂದು ಅಲ್ಲಿಂದ ಹೆಬ್ಬಗೋಡಿಯ 10 ನೇ ವಾರ್ಡಿನ ಅನಂತನಗರಕ್ಕೆ ಆಟೋ ಮೂಲಕ ಆಗಮಿಸಿದ್ದ ಯೋಧನ ಸಂಬಂಧಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಆನೇಕಲ್ನಲ್ಲಿ ಹೆಚ್ಚುತ್ತಿದೆ ಕೊರೊನಾ ಸೋಂಕಿತರ ಸಂಖ್ಯೆ - anekal news
ದೆಹಲಿಯಿಂದ ರೈಲಿನ ಮೂಲಕ ಬೆಂಗಳೂರಿಗೆ ಬಂದು, ಅಲ್ಲಿಂದ ಹೆಬ್ಬಗೋಡಿಯ 10ನೇ ವಾರ್ಡಿನ ಅನಂತನಗರಕ್ಕೆ ಆಟೋ ಮೂಲಕ ಆಗಮಿಸಿದ್ದ ಯೋಧನ ಸಂಬಂಧಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಆನೇಕಲ್ನಲ್ಲಿ ಹೆಚ್ಚುತ್ತಿದೆ ಕೊರೊನಾಸುರನ ಅಟ್ಟಹಾಸ
ಬೆಂಗಳೂರಿಗೆ ಬಂದ ತಕ್ಷಣ ಅವರನ್ನು ತಾಲ್ಲೂಕಿನ ಬೊಮ್ಮಸಂದ್ರ ಬಳಿಯಿರುವ ನಾರಾಯಣ ಹೃದಯಾಲಯದಲ್ಲಿ ಕೊರೊನಾ ಟೆಸ್ಟ್ಗೆ ಒಳಪಡಿಸಲಾಗಿದೆ. ಇದೀಗ ಸೋಂಕು ದೃಢವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಈಗ ಸೋಂಕಿತ ವ್ಯಕ್ತಿಯನ್ನು ಕರೆತಂದ ಆಟೋ ಚಾಲಕನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಈತ ಆಗಮಿಸಿದ ವಾರ್ಡ್ಗೆ ಕೂಡ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗಿದ್ದು, ಓಡಾಡಿದ ಜಾಗ, ಸಂಪರ್ಕಿಸಿದ್ದ ವ್ಯಕ್ತಿಗಳ ಮಾಹಿತಿ ಕಲೆ ಹಾಕಲಾಗುತ್ತಿದೆ.