ದೊಡ್ಡಬಳ್ಳಾಪುರ :ವೃದ್ಧಾಪ್ಯ ವೇತನ ಪಡೆಯಲು ಅಂಚೆ ಕಚೇರಿಗೆ ಹೋಗಿ ಬರುತ್ತಿದ್ದ ವೃದ್ಧೆಗೆ ಬೈಕ್ ಗುದ್ದಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ವೃದ್ಧಾಪ್ಯ ವೇತನ ಪಡೆಯಲು ಹೋದ ವೃದ್ಧೆ ರಸ್ತೆ ಅಪಘಾತದಲ್ಲಿ ಸಾವು! - ದೊಡ್ಡಬಳ್ಳಾಪುರ ಅಪಘಾತ ಸುದ್ದಿ
ವೃದ್ಧಾಪ್ಯ ವೇತನ ಪಡೆದು ಅಂಚೆ ಕಚೇರಿಯಿಂದ ಮನೆಗೆ ಬರುವಾಗ ರಸ್ತೆ ದಾಟುವ ಸಮಯದಲ್ಲಿ, ಅತಿವೇಗವಾಗಿ ಬಂದ ಬೈಕ್ ವೃದ್ಧೆಗೆ ಗುದ್ದಿದೆ. ಬೈಕ್ ಗುದ್ದಿದ ರಭಸಕ್ಕೆ ವೃದ್ಧೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ವೃದ್ಧೆ ಸಾವು
ದೊಡ್ಡಬಳ್ಳಾಪುರ ತಾಲೂಕಿನ ಕಂಟನಕುಂಟೆ ಬಳಿ ಘಟನೆ ನಡೆದಿದ್ದು, ಹಸನಘಟ್ಟದ ನಿವಾಸಿ ಸತ್ಯಮ್ಮ (80) ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ವೃದ್ಧಾಪ್ಯ ವೇತನ ಪಡೆಯುವ ಸಲುವಾಗಿ ಅಂಚೆ ಕಚೇರಿಗೆ ಹೋಗಿ ಬರುತ್ತಿದ್ದ ಸಂದರ್ಭ, ರಸ್ತೆ ದಾಟುವ ಸಮಯದಲ್ಲಿ ಅತಿವೇಗವಾಗಿ ಬಂದ ಬೈಕ್ ವೃದ್ಧೆಗೆ ಗುದ್ದಿದೆ. ಬೈಕ್ ಗುದ್ದಿದ ರಭಸಕ್ಕೆ ವೃದ್ಧೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬೈಕ್ ಸವಾರರು ಗಾಂಜಾ ಮತ್ತಿನಲ್ಲಿದ್ದರೆಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.