ಕರ್ನಾಟಕ

karnataka

ETV Bharat / state

ವಸತಿ ಶಾಲೆಯಲ್ಲಿ ವಿದೇಶಿಗರ ಕ್ವಾರಂಟೈನ್​: ಬೇಲಿ ಹಾಕಿ ಗ್ರಾಮಸ್ಥರ ಅಕ್ರೋಶ - Residential School

ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ವಿದೇಶಿಗರನ್ನು ಕ್ವಾರಂಟೈನ್​​ ಮಾಡಬಾರದೆಂದು ಪಟ್ಟು ಹಿಡಿದಿರುವ ಗ್ರಾಮಸ್ಥರು, ವಸತಿ ಶಾಲೆಗೆ ಬೇಲಿ ಹಾಕಿ ಆಕ್ರೋಶ ಹೊರ ಹಾಕಿದ್ದಾರೆ.

Objections to quarantine for foreigners in residential school
ಬೇಲಿ ಹಾಕಿ ಗ್ರಾಮಸ್ಥರ ಅಕ್ರೋಶ

By

Published : May 13, 2020, 5:24 PM IST

ನೆಲಮಂಗಲ: ತಾಲೂಕಿನ ಬಾಣವಾಡಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ವಿದೇಶಿಗರಿಗೆ ಕ್ವಾರಂಟೈನ್​​ ಮಾಡುತ್ತಾರೆಂದು ತಿಳಿದ ಬಾಣವಾಡಿಯ ಗ್ರಾಮಸ್ಥರು, ವಸತಿ ಶಾಲೆಯ ಬಾಗಿಲಿಗೆ ಬೇಲಿ ಹಾಕಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ರಾತ್ರೋರಾತ್ರಿ ವಸತಿ ಶಾಲೆಗೆ ಬೇಲಿ ಹಾಕಿ ಅಸಮಾಧಾನ ಹೊರ ಹಾಕಿರುವ ಗ್ರಾಮಸ್ಥರು, ಯಾವುದೇ ಕಾರಣಕ್ಕೂ ಇಲ್ಲಿ ವಿದೇಶಿಗರ ಕ್ವಾರಂಟೈನ್​ಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು.

ಬೇಲಿ ಹಾಕಿ ಗ್ರಾಮಸ್ಥರ ಅಕ್ರೋಶ

ಈ ವೇಳೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು. ಸಭೆ ಬಳಿಕ ಮಾತನಾಡಿದ ಸಚ್ಚಿದಾನಂದ ಸ್ವಾಮೀಜಿ, ಜನವಸತಿ ಪ್ರದೇಶವಾದ ಬಾಣವಾಡಿಯಲ್ಲಿ ಕ್ವಾರಂಟೈನ್ ಬೇಡ. ಪಕ್ಕದ ಗುಡೇಮಾರನಹಳ್ಳಿಯ ನಮ್ಮ ಮಠದ ಮಾರುತಿ ಶಾಲೆಯನ್ನು ಬೇಕಾದರೆ ಬಳಸಿಕೊಳ್ಳಿ ಎಂದು ಹೇಳಿದರು. ಇದರಿಂದ ನಿಟ್ಟುಸಿರುವ ಬಿಟ್ಟ ಗ್ರಾಮರಸ್ಥರು, ಹಾಕಿದ್ದ ಬೇಲಿಯನ್ನು ತೆರವು ಮಾಡಿದರು.

ABOUT THE AUTHOR

...view details