ಕರ್ನಾಟಕ

karnataka

ETV Bharat / state

ಕೊರೊನಾ ವಾರಿಯರ್ ಆಗಿ ಸೇವೆ ಮಾಡುತ್ತಿದ್ದಾರೆ ಒಂಬತ್ತು ತಿಂಗಳ ತುಂಬು ಗರ್ಭಿಣಿ ನರ್ಸ್!! - ಮಾದರಿ ಕೊರೊನಾ ವಾರಿಯರ್

ಕೋವಿಡ್ ಸೋಂಕಿತ ಗರ್ಭಿಣಿಯ ಹೆರಿಗೆ ಮಾಡುವ ಸಮಯದಲ್ಲಿ ವೈದ್ಯರಿಗೆ ಸಹಾಯಕರಾಗಿ ಸೇವೆ ಮಾಡಿದ್ದಾರೆ. ಮದ್ದೂರಮ್ಮಳ ಸೇವಾ ಮನೋಭಾವ ವೈದ್ಯರು ಮತ್ತು ಸಿಂಬ್ಬದಿ ಮೆಚ್ಚುಗೆಗೆ ಪಾತ್ರವಾಗಿದೆ. ಆಕೆಗೆ ಸ್ವ್ಯಾಬ್ ಟೆಸ್ಟ್ ಮತ್ತು ವ್ಯಾಕ್ಸಿನೇಷನ್​ಗೆ ಬರುವ ವ್ಯಕ್ತಿಗಳ ನೋಂದಣಿ ಮಾಡುವ ಕೆಲಸವನ್ನು ಈಗ ನೀಡಿದ್ದಾರೆ. ಆಸ್ಪತ್ರೆಯ ಸಿಂಬ್ಬದಿಯೇ ಆಕೆಗೆ ಸೀಮಂತ ಮಾಡಿ ಹಾರೈಸಿದ್ದಾರೆ. ಇದರ ಜೊತೆಗೆ ಆಕೆಯ ಚೊಚ್ಚಲ ಹೆರಿಗೆಯನ್ನು ಇದೇ ಆಸ್ಪತ್ರೆಯಲ್ಲಿ ಮಾಡುವ ಆಸೆಯನ್ನು ಹೊಂದಿದ್ದಾರೆ..

nine-months-pregnant-nurse-serving-as-corona-warrior
nine-months-pregnant-nurse-serving-as-corona-warrior

By

Published : Jun 26, 2021, 10:17 PM IST

Updated : Jun 28, 2021, 12:51 PM IST

ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ):ಒಂಬತ್ತು ತಿಂಗಳ ತುಂಬು ಗರ್ಭಿಣಿ, ಇನ್ನೆರಡು ದಿನದಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ. ಹೆತ್ತವರ ಆರೈಕೆಯಲ್ಲಿ ಮನೆಯಲ್ಲಿರಬೇಕಾದ ಗರ್ಭಿಣಿ ಆಕೆ. ಆದರೆ, ಕಾಯಕದಲ್ಲಿ ನರ್ಸ್ ಆಗಿರುವ ಅವರು ಕೊರೊನಾ ವಾರಿಯರ್ ಆಗಿ ಆಸ್ಪತ್ರೆಯಲ್ಲಿ ಸೇವೆ ಮಾಡುತ್ತಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಜಿ.ಹೊಸಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದ ನರ್ಸ್ ಆಗಿ ಸೇವೆ ಮಾಡುತ್ತಿರುವ ಕೊರೊನಾ ವಾರಿಯರ್ ಮದ್ದೂರಮ್ಮ, ಕಳೆದ ಮೂರು ವರ್ಷದಿಂದ ಇದೇ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮದುವೆಯಾಗಿರುವ ಮದ್ದೂರಮ್ಮ ಈಗ 9 ತಿಂಗಳ ತುಂಬು ಗರ್ಭಿಣಿ. ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರು ಜೂನ್ 28ರಂದು ಹೆರಿಗೆಯಾಗುವ ಡೇಟ್ ನೀಡಿದ್ದಾರೆ.

ಕೊರೊನಾ ವಾರಿಯರ್ ಆಗಿ ಸೇವೆ ಮಾಡುತ್ತಿದ್ದಾರೆ ಒಂಬತ್ತು ತಿಂಗಳ ತುಂಬು ಗರ್ಭಿಣಿ ನರ್ಸ್!!

ಜೂನ್ 26ರಂದು ಈಕೆ ಆಸ್ಪತ್ರೆಯಲ್ಲಿ ಸ್ವ್ಯಾಬ್‌ ಟೆಸ್ಟ್, ವ್ಯಾಕ್ಸಿನೇಷನ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲಸ ಮಾಡುತ್ತಿರುವಾಗಲೇ ಇದೇ ಆಸ್ಪತ್ರೆಯಲ್ಲಿ ತನ್ನ ಚೊಚ್ಚಲ ಹೆರಿಗೆಯಾಗಬೇಕೆನ್ನುವ ಆಸೆ ಆ ತುಂಬು ಗರ್ಭಿಣಿಯದು. ಜಿ.ಹೊಸಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿಯಾಗಿರುವ ಡಾ.ಶ್ವೇತಾ ನಾಯಕ್ ತಮ್ಮ ಸಿಬ್ಬಂದಿಯಾದ ಮದ್ದೂರಮ್ಮಳ ಬಗ್ಗೆ ಹೆಮ್ಮೆ ಪಡುತ್ತಾರೆ.

ಆಕೆ ಗರ್ಭಿಣಿಯಾದ ಸಮಯದಲ್ಲಿಯೇ ವೈದ್ಯಕೀಯ ಮಾರ್ಗದರ್ಶನ ಮಾಡಿದ್ದಾರೆ. 7 ತಿಂಗಳ ಗರ್ಭಿಣಿಯಾಗಿರುವಾಗಲೇ ಹೆರಿಗೆ ರಜೆ ತಗೊಂಡು ಮನೆಯಲ್ಲಿರುವಂತೆ ಸಲಹೆ ನೀಡಿದರೂ, ಆಕೆಗೆ ಕೋವಿಡ್ ಪರಿಸ್ಥಿತಿಯಲ್ಲಿ ಮನೆಯಲ್ಲಿರಲು ಮನಸು ಬಿಡಲಿಲ್ಲ. ಹೀಗಾಗಿ, ವೈದ್ಯರ ಮನವೊಲಿಸಿ ಆಸ್ಪತ್ರೆಯಲ್ಲಿ ಕೊರೊನಾ ವಾರಿಯರ್ ಆಗಿ ಸೇವೆ ಮಾಡುತ್ತಿದ್ದಾರೆ. ಈ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲೂ ಕೆಲಸ ಮಾಡುತ್ತಿದ್ದಾರೆ.

ಕೋವಿಡ್ ಸೋಂಕಿತ ಗರ್ಭಿಣಿಯ ಹೆರಿಗೆ ಮಾಡುವ ಸಮಯದಲ್ಲಿ ವೈದ್ಯರಿಗೆ ಸಹಾಯಕರಾಗಿ ಸೇವೆ ಮಾಡಿದ್ದಾರೆ. ಮದ್ದೂರಮ್ಮಳ ಸೇವಾ ಮನೋಭಾವ ವೈದ್ಯರು ಮತ್ತು ಸಿಂಬ್ಬದಿ ಮೆಚ್ಚುಗೆಗೆ ಪಾತ್ರವಾಗಿದೆ. ಆಕೆಗೆ ಸ್ವ್ಯಾಬ್ ಟೆಸ್ಟ್ ಮತ್ತು ವ್ಯಾಕ್ಸಿನೇಷನ್​ಗೆ ಬರುವ ವ್ಯಕ್ತಿಗಳ ನೋಂದಣಿ ಮಾಡುವ ಕೆಲಸವನ್ನು ಈಗ ನೀಡಿದ್ದಾರೆ. ಆಸ್ಪತ್ರೆಯ ಸಿಂಬ್ಬದಿಯೇ ಆಕೆಗೆ ಸೀಮಂತ ಮಾಡಿ ಹಾರೈಸಿದ್ದಾರೆ. ಇದರ ಜೊತೆಗೆ ಆಕೆಯ ಚೊಚ್ಚಲ ಹೆರಿಗೆಯನ್ನು ಇದೇ ಆಸ್ಪತ್ರೆಯಲ್ಲಿ ಮಾಡುವ ಆಸೆಯನ್ನು ಹೊಂದಿದ್ದಾರೆ ಎಂದು ಡಾ.ಶ್ವೇತಾ ನಾಯಕ್ ಹೇಳಿದ್ದಾರೆ.

ಒಂಬತ್ತು ತಿಂಗಳ ತುಂಬು ಗರ್ಭಿಣಿ ನರ್ಸ್

ಜಿ.ಹೊಸಹಳ್ಳಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಇಬ್ಬರ ಕೆಲಸವನ್ನು ಒಬ್ಬರು ಮಾಡುವ ಪರಿಸ್ಥಿತಿ ಇದೆ. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಮದ್ದೂರಮ್ಮಗೆ ಬರುವ ಸಂಬಳ ಕೂಡ ಕಡಿಮೆ ಇದ್ದರೂ, ತನ್ನ ವೃತ್ತಿಯ ಬಗ್ಗೆ ಹೆಮ್ಮೆ ಪಡುವ ಮದ್ದೂರಮ್ಮ ಕೊರೊನಾ ವಾರಿಯರ್​ಗಳಿಗೆ ಮಾದರಿಯಾಗಿದ್ದಾರೆ.

Last Updated : Jun 28, 2021, 12:51 PM IST

ABOUT THE AUTHOR

...view details