ಆನೇಕಲ್: ಚೆನ್ನಮಲ್ಲ ನಿಡುಮಾಮಿಡಿ ಸ್ವಾಮೀಜಿಯ ಆಶೀರ್ವಚನದಲ್ಲಿ ತಾಲೂಕಿನ ಡಿ. ಮಹದೇಶ್ ಪುತ್ರಿ ಅನುಪಮಾ ಎಂ ಮತ್ತು ಗಿರೀಶ್ ಹೆಚ್. ಬಿ. ಅಂತರ್ಜಾತಿ ವಿವಾಹವನ್ನು ಸರಳ-ಸುಂದರವಾಗಿ ರಾಷ್ಟ್ರಕವಿ ಕುವೆಂಪು ಆಶಯದಂತೆ ಮಂತ್ರ ಮಾಂಗಲ್ಯದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಜೋಡಿಗಳ ದಾಂಪತ್ಯಕ್ಕೆ ಮಂತ್ರ ಮಾಂಗಲ್ಯವೇ ಸಾಕ್ಷಿ... ಸರಳ ಅಂತರ್ಜಾತಿ ವಿವಾಹ ಮಾಡಿಸಿದ್ರು ಸ್ವಾಮೀಜಿ - undefined
ಆಡಂಬರ ಮದುವೆಗಳಿಗಿಂತ ಸರಳ ಮಂತ್ರ ಮಾಂಗಲ್ಯ ಮದುವೆಗಳು ಇಂದು ಅತ್ಯಗತ್ಯ ಎಂದು ನಿಡುಮಾಮಿಡಿ ಸ್ವಾಮೀಜಿ ಹೇಳಿದರು. ಅಲ್ಲದೆ ಸರಳವಾಗಿ ನೆರವೇರಿದ ಅಂತರ್ಜಾತಿ ವಿವಾಹಕ್ಕೆ ಸ್ವಾಮೀಜಿ ಇಂದು ಸಾಕ್ಷಿಯಾದರು.
ಮಂತ್ರ ಮಾಂಗಲ್ಯದ ಮೂಲಕ ಸರಳ ಅಂತರ್ಜಾತಿ ವಿವಾಹ
ಮದುವೆಯ ತಾಂಬೂಲ ಬದಲಾಗಿ ಜಸ್ಟೀಸ್ ನಾಗಮೋಹನ್ ದಾಸ್ ಬರೆದಿರುವ ಪ್ರೀತಿ ಉಕ್ಕಿತು ಸಾಗರದಂಗೆ ಹಾಗೂ ಸಂವಿಧಾನ ಓದು ಎಂಬ ಪುಸ್ತಕವನ್ನು ನೀಡಿ ಒಂದು ಅರ್ಥಗರ್ಭಿತ ಮದುವೆಯಾಗಿ ಉಳಿಯುವಂತೆ ನೋಡಿಕೊಳ್ಳಲಾಯಿತು.
ಶಾಸ್ತ್ರ ಸಂಪ್ರದಾಯಗಳನ್ನು ಬದಿಗೊತ್ತಿ ಎಲ್ಲರಿಗೂ ಅರ್ಥವಾಗುವ ಹಾಗೆ ಮಾದರಿ ಮದುವೆ ಇದಾಗಿದೆ. ಎಲ್ಲರೂ ಪಾಲಿಸುವ ಅಗತ್ಯವಿದೆ ಎಂದು ನಿಡುಮಾಮಿಡಿ ಸ್ವಾಮೀಜಿ ಕರೆ ನೀಡಿದರು.