ಕರ್ನಾಟಕ

karnataka

ETV Bharat / state

14 ಮಹಿಳಾ ಅಗ್ನಿಶಾಮಕ ಸಿಬ್ಬಂದಿಯಿಂದ ಅಣಕು ಪ್ರದರ್ಶನ - Bangalore International Airport

ಸಾಮಾನ್ಯವಾಗಿ ಅಗ್ನಿಶಾಮಕ ದಳದಲ್ಲಿ ಕೇವಲ ಪುರುಷರು ಮಾತ್ರ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಅಗ್ನಿಶಾಮಕ ದಳದಲ್ಲೂ ನಾವು ಕೆಲಸ ಮಾಡಬಲ್ಲೆವು ಎಂದು ಮಹಿಳೆಯರು ಬೆಂಗಳೂರಿನಲ್ಲಿ ತೋರಿಸಿಕೊಟ್ಟಿದ್ದಾರೆ.

dsdd
14 ಮಹಿಳಾ ಅಗ್ನಿಶಾಮಕ ಸಿಬ್ಬಂದಿಯಿಂದ ಏಷ್ಯಾದಲ್ಲೆ ಹೊಸ ಇತಿಹಾಸ!

By

Published : Mar 3, 2020, 11:25 PM IST

ದೇವನಹಳ್ಳಿ:ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 14 ಮಂದಿ ಮಹಿಳಾ ಅಗ್ನಿಶಾಮಕ ಸಿಬ್ಬಂದಿ ಅಣಕು ಅಗ್ನಿಶಾಮಕ ಪ್ರದರ್ಶನ ನೀಡಿ ಗಮನ ಸೆಳೆದರು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆ ನೋಡಿಕೊಳ್ಳುತ್ತಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ(ಕೆಐಎಎಲ್) ಹೊಸ ಇತಿಹಾಸಕ್ಕೆ ಕೈ ಹಾಕಿ ಸೈ ಎನಿಸಿಕೊಂಡಿದೆ. ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ವಿಶೇಷವಾಗಿ ಆಚರಿಸಲು ಸಂಪೂರ್ಣ ಮಹಿಳಾ ಸಿಬ್ಬಂದಿ ಒಳಗೊಂಡ ಅಗ್ನಿಶಾಮಕ ದಳ ರನ್ ವೇಯಲ್ಲಿ ಬೆಂಕಿ ನಂದಿಸುವ ಅಣಕುಕಾರ್ಯಾಚರಣೆ ನಡೆಸಿದರು. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಕೋಲ್ಕತ್ತಾದಲ್ಲಿರುವ ಅಗ್ನಿಶಾಮಕ ತರಬೇತಿ ಕೇಂದ್ರದಲ್ಲಿ ವಿಶೇಷ ತರಬೇತಿ ಪಡೆದ 14 ಮಹಿಳೆಯರು ತಮ್ಮ ಸಾಮರ್ಥ್ಯ ಪ್ರದರ್ಶನ ನೀಡಿ ಎಲ್ಲಾ ಕ್ಷೇತ್ರದಲ್ಲೂ ನಾವು ಸಾಧಿಸಬಲ್ಲವೆಂದು ಸಾರಿ ಹೇಳಿದರು.

14 ಮಹಿಳಾ ಅಗ್ನಿಶಾಮಕ ಸಿಬ್ಬಂದಿಯಿಂದ ಅಣಕು ಪ್ರದರ್ಶನ

ಎಆರ್​ಎಫ್‍ಎಫ್ ತಂಡದ ಭಾಗವಾಗಿರುವ ಮಹಿಳಾ ಅಗ್ನಿಶಾಮಕ ದಳ ಉತ್ತರ ಮತ್ತು ದಕ್ಷಿಣ ರನ್‍ ವೇ ನಿಭಾಯಿಸುತ್ತದೆ. ಎಆರ್​​​ಎಫ್‍ಎಫ್ ಪಡೆಗೆ ಸೇರ್ಪಡೆಗೊಂಡು ಒಂದು ವರ್ಷದ ತರಬೇತಿ ಪಡೆದಿದ್ದರು. ಈಗ ಮಹಿಳಾ ಅಗ್ನಿಶಾಮಕ ಸಿಬ್ಬಂದಿ ತುರ್ತು ರಕ್ಷಣೆ ಸೇವೆಗೆ ತಾವು ಸಿದ್ಧರಿದ್ದೇವೆ ಎಂದು ಅಣಕು ಅಗ್ನಿಶಾಮಕ ಪ್ರದರ್ಶನದಲ್ಲಿ ತೋರಿಸಿಕೊಟ್ಟರು. ಅಣಕು ಅಗ್ನಿಶಾಮಕ ಪ್ರದರ್ಶನದಲ್ಲಿ ತಮ್ಮ ಶಕ್ತಿ, ನಾಯಕತ್ವವನ್ನು ಮಹಿಳಾ ಸಿಬ್ಬಂದಿ ಪ್ರದರ್ಶಿಸಿದರು. ಬಿಐಎಎಲ್ ತನ್ನ ಸಂಘಟನೆಯಲ್ಲಿ ಮಹಿಳೆಯರ ಅನುಪಾತವನ್ನು ಹೆಚ್ಚಿಸುವತ್ತ ಸಕ್ರಿಯವಾಗಿ ಶ್ರಮಿಸುತ್ತಿದೆ. ಪ್ರಸ್ತುತ ಮಹಿಳಾ ಸಿಬ್ಬಂದಿ ಶೇ. 15ರಷ್ಟಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಮೂಲಕ ಮಹಿಳಾ ದಿನಾಚರಣೆಗೆ ರಾಜ್ಯಕ್ಕೆ ಮತ್ತೊಂದು ಕೊಡುಗೆ ನೀಡಿದ್ದಾರೆ.

For All Latest Updates

ABOUT THE AUTHOR

...view details