ಕರ್ನಾಟಕ

karnataka

ETV Bharat / state

ಪಟ್ಟಣದಲ್ಲಿ ಹೆಚ್ಚಾದ ಪುಂಡರ ಹಾವಳಿ: ಬೆವರಿಳಿಸಿದ ನೆಲಮಂಗಲ ಪೊಲೀಸರು - ಎಚ್ಚರಿಕೆ

ಬೆಂಗಳೂರು ಗ್ರಾಮಾಂತರ ನೂತನ ಎಸ್ಪಿ ರವಿ ಡಿ. ಚೆನ್ನಣ್ಣನವರ್ ಬಂದ ನಂತರ ಜಿಲ್ಲೆಯಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದೆ. ಇದೀಗ  ಪುಂಡರ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ  ಎಸ್ಪಿ ಆದೇಶದ ಮೇರೆಗೆ ನೆಲಮಂಗಲ ಪೊಲೀಸರು ಪುಂಡರ ಬೆವರಿಳಿಸಿದ್ದಾರೆ.

ನೆಲಮಂಗಲ ಪಟ್ಟಣದಲ್ಲಿ ಹೆಚ್ಚಾದ ಪುಂಡರ ಹಾವಳಿ; ಬೆವರಿಳಿಸಿದ ನೆಲಮಂಗಲ ಪೊಲೀಸರು

By

Published : Aug 29, 2019, 9:29 PM IST

ನೆಲಮಂಗಲ:ಬೆಂಗಳೂರು ಗ್ರಾಮಾಂತರ ನೂತನ ಎಸ್ಪಿ ರವಿ ಡಿ. ಚೆನ್ನಣ್ಣನವರ್ ಬಂದ ನಂತರ ಜಿಲ್ಲೆಯಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದೆ. ಇದೀಗ ಪುಂಡರ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಎಸ್ಪಿ ಆದೇಶದ ಮೇರೆಗೆ ನೆಲಮಂಗಲ ಪೊಲೀಸರು ಪುಂಡರ ಬೆವರಿಳಿಸಿದ್ದಾರೆ.

ನೆಲಮಂಗಲ ಪಟ್ಟಣದಲ್ಲಿ ಹೆಚ್ಚಾದ ಪುಂಡರ ಹಾವಳಿ: ಬೆವರಿಳಿಸಿದ ನೆಲಮಂಗಲ ಪೊಲೀಸರು

ನೆಲಮಂಗಲ ವ್ಯಾಪ್ತಿಯಲ್ಲಿ ಪುಂಡರ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ರವಿ ಡಿ. ಚೆನ್ನಣ್ಣನವರ್​​ರಿಂದ ಪುಂಡರಿಗೆ ಬ್ರೇಕ್ ಹಾಕುವ ಆದೇಶ ಬಂದಿದೆ. ಹೀಗಾಗಿ ನೆಲಮಂಗಲ ಟೌನ್ ಠಾಣೆ ಪಿಎಸ್​ಐ ಮಂಜುನಾಥ್ ಪುಂಡರ ಬೇಟೆಗೆ ಇಳಿದಿದ್ದು, ರಸ್ತೆ ಬದಿಯಲ್ಲಿ ನಿಂತು ಸಿಗರೇಟ್ ಸೇದುವ, ಖಾಲಿ ಜಾಗಗಳಲ್ಲಿ ಮದ್ಯ ಸೇವಿಸಿ, ಗುಂಪು ಗುಂಪಾಗಿ ನಿಂತು ಕಾಲೇಜುಗಳ ಬಳಿ ಹೆಣ್ಣುಮಕ್ಕಳನ್ನು ರೇಗಿಸುವ ಪುಂಡರನ್ನು ವಶಕ್ಕೆ ಪಡೆದು ಅವರನ್ನು ಸ್ಟೇಷನ್​​ಗೆ ಕರೆದೊಯ್ದು ಎಚ್ಚರಿಕೆ ನೀಡಿದ್ದಾರೆ.

ಅಲ್ಲದೇ ನೆಲಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯ 70 ಜನ ಪುಂಡರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದು, ವಾರ್ನಿಂಗ್ ಮಾಡಿದ ಬಳಿಕ ಗುರುತಿನ ಚೀಟಿ ಪಡೆದು ಅಪರಾಧ ಕೃತ್ಯದಲ್ಲಿ ತೊಡಗದಂತೆ ಎಚ್ಚರಿಕೆ ನೀಡಿದ್ದಾರೆ. ಹಾಗೆಯೇ ಅವರನ್ನೆಲ್ಲ ಮರಳಿ ಕಳುಹಿಸಿದ್ದಾರೆ.

ABOUT THE AUTHOR

...view details