ಕರ್ನಾಟಕ

karnataka

ETV Bharat / state

ನೆಲಮಂಗಲ: ಒಣಗಿದ ತೆಂಗಿನಮರ ಬಿದ್ದು ಗೃಹಿಣಿ ಸಾವು - Nelamangala Latest Crime News

ಗಾಳಿಯ ರಭಸಕ್ಕೆ ಒಣಗಿದ್ದ ತೆಂಗಿನಮರ ಬಿದ್ದು ಗೃಹಿಣಿಯೋರ್ವಳು ಮೃತಪಟ್ಟ ಘಟನೆ ನೆಲಮಂಗಲದಲ್ಲಿ ನಡೆದಿದೆ.

House wife dies falling coconut tree
ಗಾಳಿಗೆ ಒಣ ತೆಂಗಿನ ಮರ ಬಿದ್ದು ಗೃಹಿಣಿ  ಸಾವು

By

Published : Apr 18, 2020, 10:22 PM IST

ನೆಲಮಂಗಲ: ಗಾಳಿಯ ರಭಸಕ್ಕೆ ಒಣಗಿದ್ದ ತೆಂಗಿನಮರ ಬಿದ್ದು ಪಾತ್ರೆ ತೊಳೆಯುತ್ತಿದ್ದ ಗೃಹಿಣಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನೆಲಮಂಗಲದ ಕೆರೆ ಏರಿ ಹಿಂಭಾಗದ ಎಲೆ ತೋಟದಲ್ಲಿ ನಡೆದಿದೆ.

ರತ್ನಮ್ಮ(31) ಮೃತ ಗೃಹಿಣಿ. ಮನೆ ಬಾಗಿಲ ಬಳಿ ಪಾತ್ರೆ ತೊಳೆಯುತ್ತಿದ್ದ ರತ್ನಮ್ಮಳ ತಲೆ ಮೇಲೆ ತೆಂಗಿನಮರ ಬಿದ್ದಿದೆ. ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಆಕೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ. ಇನ್ನು ಒಣ ತೆಂಗಿನಮರ ಬಿದ್ದ ರಭಸಕ್ಕೆ ಎರಡು ಲೈಟ್ ಕಂಬಗಳು ಕೂಡ ಮುರಿದು ಬಿದ್ದಿವೆ ಎನ್ನಲಾಗಿದೆ.

ಈ ಸಂಬಂಧ ನೆಲಮಂಗಲ ನಗರಸಭೆ ಪೌರಾಯುಕ್ತ ಮಂಜುನಾಥ್ ಹಾಗೂ ನೆಲಮಂಗಲ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details