ನೆಲಮಂಗಲ:ದೀಪಾವಳಿ ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್ಗಳಲ್ಲಿ ಪಟಾಕಿ ಸಾಗಣೆ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಹಿತದೃಷ್ಟಿಯಿಂದ ನೆಲಮಂಗಲ ಆರ್ಟಿಒ ಅಧಿಕಾರಿಗಳು ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ಗಳ ತಪಾಸಣೆ ನಡೆಸಿದರು.
ಬಸ್ಗಳಲ್ಲಿ ಪಟಾಕಿ ಸಾಗಣೆ: ನೆಲಮಂಗಲ ಆರ್ಟಿಒ ಅಧಿಕಾರಿಗಳಿಂದ ತಪಾಸಣೆ - crackers
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಖಾಸಗಿ ಬಸ್ಗಳಲ್ಲಿ ಪಟಾಕಿ ಸಾಗಣೆ ಮಾಡಲಾಗುವ ಹಿನ್ನೆಲೆಯಲ್ಲಿ ನೆಲಮಂಗಲ ಆರ್ಟಿಒ ಅಧಿಕಾರಿಗಳು ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ಗಳ ತಪಾಸಣೆ ನಡೆಸಿದರು.
ನೆಲಮಂಗಲ ಆರ್ಟಿಓ ಅಧಿಕಾರಿಗಳಿಂದ ತಪಾಸಣೆ
ನೆಲಮಂಗಲ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸುಮಾರು 50ಕ್ಕೂ ಹೆಚ್ಚು ಬಸ್ಗಳನ್ನು ತನಿಖೆ ನಡೆಸಿದ್ದಾರೆ. ಈ ವೇಳೆ 18ಕ್ಕೂ ಹೆಚ್ಚು ಬಸ್ಗಳ ರಹದಾರಿ ಉಲ್ಲಂಘನೆಗೆ ನೋಟಿಸ್ ನೀಡಿದ್ದು ತೆರಿಗೆ ಪಾವತಿ ಮಾಡದಿರುವ ಕಾರಣ ಒಂದು ಬಸ್ ವಶಕ್ಕೆ ಪಡೆದಿದ್ದಾರೆ.
ಸಾರಿಗೆ ಅಧಿಕಾರಿ ಗುರುಮೂರ್ತಿಯವರ ನಿರ್ದೇಶನದಲ್ಲಿ, ಜಂಟಿ ಸಾರಿಗೆ ಆಯುಕ್ತ ಮಲ್ಲಿಕಾರ್ಜುನರವರ ಆದೇಶದ ಮೇರೆಗೆ ಹಿರಿಯ ಮೋಟಾರು ವಾಹನ ನಿರೀಕ್ಷಕರಾದ ವಿವೇಕಾನಂದ ಮಲ್ಲೇಶ್, ಮಂಜುನಾಥ್ ಡಿ.ಎಸ್ ಒಡೆಯರ್ ಅವರ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.