ಕರ್ನಾಟಕ

karnataka

ETV Bharat / state

ಬ್ಯಾಂಕ್​ನಲ್ಲಿ ಕಳ್ಳತನ: ಗ್ರಾಹಕರು ಮತ್ತು ಬ್ಯಾಂಕ್ ಅಧಿಕಾರಿಗಳ ನಡುವೆ ಸಂಧಾನ ಸಭೆ.. - ಕರ್ನಾಟಕ ಗ್ರಾಮೀಣ ಬ್ಯಾಂಕಿ

ಹೊಸಹಳ್ಳಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ 3.50 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು 14 ಲಕ್ಷ ನಗದು ಕಳವು - ಈ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಹಕರು ಮತ್ತು ಬ್ಯಾಂಕ್ ಅಧಿಕಾರಿಗಳ ನಡುವೆ ಸಂಧಾನ ಸಭೆ.

Etv BharatNegotiation between customer and bank officials
ಬ್ಯಾಂಕ್​ನಲ್ಲಿ ಕಳ್ಳತನ: ಗ್ರಾಹಕರು ಮತ್ತು ಬ್ಯಾಂಕ್ ಅಧಿಕಾರಿಗಳ ನಡುವೆ ಸಂಧಾನ ಸಭೆ

By

Published : Feb 11, 2023, 10:57 PM IST

Updated : Feb 11, 2023, 11:04 PM IST

ಗ್ರಾಹಕರು ಮತ್ತು ಬ್ಯಾಂಕ್ ಅಧಿಕಾರಿಗಳ ನಡುವೆ ಸಂಧಾನ ಸಭೆ

ದೊಡ್ಡಬಳ್ಳಾಪುರ:ತಾಲೂಕಿನ ಹೊಸಹಳ್ಳಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕಿಗೆ ನುಗ್ಗಿದ ಕಳ್ಳರು 3.50 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು 14 ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ. ಗ್ರಾಹಕರು ಅಡವಿಟ್ಟಿದ್ದ 12 ಕೆಜಿ ಚಿನ್ನಾಭರಣ ಕಳ್ಳರ ಪಾಲಾಗಿದೆ, ದರೋಡೆ ನಡೆದು ತಿಂಗಳುಗಳೇ ಕಳೆದರು ಚಿನ್ನಾಭರಣದ ಬಗ್ಗೆ ಬ್ಯಾಂಕ್​​ನವರು ಯಾವುದೇ ಮಾಹಿತಿ ಕೊಡುತ್ತಿಲ್ಲ. ಇದರಿಂದ ಆತಂಕಗೊಂಡ ಗ್ರಾಹಕರು ಕಳೆದ ಎರಡು ಬಾರಿ ಬ್ಯಾಂಕ್​ಗೆ ಮುತ್ತಿಗೆ ಹಾಕಿ ತಮ್ಮ ಒಡವೆಗಳನ್ನ ಹಿಂದಿರುಗಿಸುವಂತೆ ಒತ್ತಾಯಿಸಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಹಕರು ಮತ್ತು ಬ್ಯಾಂಕ್ ಅಧಿಕಾರಿಗಳ ನಡುವೆ ಸಂಧಾನ ಸಭೆಯನ್ನ ನಡೆಸಲಾಯಿತು.

ಹೊಸಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ನಡೆದ ಸಂಧಾನ ಸಭೆಯಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕಿನ ರಿಜಿನಲ್ ಆಫೀಸರ್ ಮಂಜುನಾಥ್, ಸೆಕ್ಯೂರಿಟಿ ಆಫೀಸರ್ ರವೀಂದ್ರ, ರಿಜಿನಲ್ ವ್ಯವಸ್ಥಾಪಕ ರಾಮ್ ರಾಜ್, ಹೊಸಹಳ್ಳಿ ಬ್ಯಾಂಕಿನ ವ್ಯವಸ್ಥಾಪಕ ತನುಚೌಬೆ, ತಾಪಂ ಮಾಜಿ ಅಧ್ಯಕ್ಷ ಹೆಚ್.ಎಸ್. ಅಶ್ವಥ್ ನಾರಾಯಣ ಕುಮಾರ್ ನೇತೃತ್ವದಲ್ಲಿ ಸಂಧಾನ ಸಭೆ ನಡೆಸಲಾಯಿತು. ಈ ವೇಳೆ, ಬ್ಯಾಂಕಿನಲ್ಲಿ ಕಳ್ಳತನ ನಡೆದು ಹಲವು ತಿಂಗಳು ಕಳೆದರು, ಚಿನ್ನಾಭರಣಗಳನ್ನು ಅಡವಿಟ್ಟಿದ್ದ ಗ್ರಾಹಕರಿಗೆ ಬ್ಯಾಂಕ್ ಸಿಬ್ಬಂದಿ ಯಾವುದೇ ಉತ್ತರ ನೀಡುತ್ತಿಲ್ಲ. ನಮಗೆ ಹಣ ಹಿಂತಿರುಗಿಸುವರೋ, ಚಿನ್ನಾಭರಣಗಳನ್ನು ಹಿಂತಿರುಗಿಸುವರೋ ತಿಳಿಯದಾಗಿದೆ ಎಂದು ಗ್ರಾಹಕರು ತಮ್ಮ ನೋವು ತೊಡಿಕೊಂಡರು.

ಸಭೆಯಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿನ ಬೆಲೆಯನ್ನು ಚಿನ್ನದ ಒಡವೆಯ ತೂಕಕ್ಕೆ ನಿಗದಿ ಪಡಿಸುವುದು, ಇನ್ಸುರೆನ್ಸ್ ಹಣವನ್ನು ಗ್ರಾಹಕನಿಗೆ ನೀಡುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಅಲ್ಲದೆ ಬ್ಯಾಂಕಿನ ಅಧ್ಯಕ್ಷರೊಂದಿಗೆ ಗ್ರಾಹಕರು ಸಭೆ ನಡೆಸಲು ವ್ಯವಸ್ಥೆ ಮಾಡಲು ಸೂಚಿಸಲಾಯಿತು. ಈ ಬೇಡಿಕೆಗಳ ಪಟ್ಟಿಯನ್ನು ಬರೆದುಕೊಂಡ ಅಧಿಕಾರಿಗಳು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ನೀಡುವುದಾಗಿ ಭರವಸೆ ನೀಡಿದರು.

ಬ್ಯಾಂಕ್ ಗ್ರಾಹಕರಾದ ಅಶ್ವಥ್ ನಾರಾಯಣ್ ಮಾತನಾಡಿ, 50 ಗ್ರಾಂಗಿಂತ ಕಡಿಮೆ ಚಿನ್ನಾಭರಣಗಳನ್ನು ಅಡವಿಟ್ಟಿದ್ದ ಗ್ರಾಹಕರಿಗೆ ಸೆಟ್ಲ್ ಮೆಂಟ್ ಮಾಡುವ ಸಲುವಾಗಿ ಬ್ಯಾಂಕ್ ನಿಂದ ನೋಟೀಸ್ ಕಳಿಸಲಾಗಿದೆ, ಆದರೆ ಸಣ್ಣ ಮೊತ್ತ ಅಥವಾ ದೊಡ್ಡ‌ ಮೊತ್ತ ಎಂದು ಬೇರೆ ಬೇರೆಯಾಗಿ ನೋಡದೇ, ಎಲ್ಲಾ‌ ಗ್ರಾಹಕರೂ ಒಂದೇ ಎನ್ನುವ ರೀತಿಯಲ್ಲಿ ಬಾಕಿ ಚುಕ್ತಾ ಮಾಡಬೇಕು ಎಂದು ಒತ್ತಾಯಿಸಿದರು, ಗ್ರಾಹಕರ ಮಾತಿಗೆ ಒಪ್ಪಿದ ಅಧಿಕಾರಿಗಳು ನೋಟಿಸ್ ವಾಪಸ್ ಪಡೆಯುವುದ್ದಾಗಿ ಹೇಳಿದರು. ಅಲ್ಲದೆ ಗ್ರಾಹಕರ ಪರವಾಗಿ ಐದು ಜನ ಪ್ರತಿನಿಧಿಗಳು ಮತ್ತು ಬ್ಯಾಂಕ್ ಅಧ್ಯಕ್ಷರ ಜೊತೆ ಮಾತುಕತೆಯನ್ನ ನಡೆಸಿ ಗ್ರಾಹಕರ ಸಮಸ್ಯೆಯನ್ನ ಪರಿಹರಿಸುವುದಾಗಿ ಹೇಳಿದರು.

ಗ್ರಾಹಕ ನವೀನ್​ ಕುಮಾರ್ ಮಾತನಾಡಿ, ಗ್ರಾಹಕರ ಒತ್ತಾಯದೆ ಮೇರೆಗೆ ಅಧಿಕಾರಿಗಳು 200ಕ್ಕೂ ಹೆಚ್ಚು ಗ್ರಾಹಕರೊಂದಿಗೆ ಸಂಧಾನ ಸಭೆ ನಡೆಸಿದರು, ಅಧಿಕಾರಿಗಳು ಈ ಉನ್ನತ ಅಧಿಕಾರಿಗಳಿಗೆ ವರದಿ ನೀಡುವುದಾಗಿ ಹೇಳಿದ್ದಾರೆ. ಎರಡು ತಿಂಗಳ ಒಳಗಾಗಿ ವಿಮೆ ಹಣ ಮತ್ತು ಒಡೆಯ ಹಣ ನೀಡುವುದಾಗಿ ಒಪ್ಪಿಕೊಂಡಿದ್ದಾರೆ ಎಂದರು.

ಇದನ್ನೂ ಓದಿ:ಕಿರುತೆರೆ ನಟಿ ಚಾಹತ್ ಖನ್ನಾಗೆ ನೋಟಿಸ್ ಕಳುಹಿಸಿದ ಸುಖೇಶ್ ಚಂದ್ರಶೇಖರ್..!

Last Updated : Feb 11, 2023, 11:04 PM IST

ABOUT THE AUTHOR

...view details