ಕರ್ನಾಟಕ

karnataka

ETV Bharat / state

ದೆಹಲಿಯಲ್ಲಿ ಗಣರಾಜ್ಯೋತ್ಸವ ಪರೇಡ್​: ಎನ್​​ಸಿಸಿ ಕೆಡೆಟ್‌ಗಳಿಗೆ ವಿಶೇಷ ತರಬೇತಿ

ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‌ಗೆ ದೊಡ್ಡಬಳ್ಳಾಪುರದ ಜೂನಿಯರ್ ಕಾಲೇಜ್​​ನಲ್ಲಿ ಎನ್​​ಸಿಸಿ ಕೆಡೆಟ್ ಗಳಿಗೆ ಕಟ್ಟುನಿಟ್ಟಿನ ತರಬೇತಿ ನೀಡಲಾಗುತ್ತಿದೆ.

By

Published : Oct 18, 2019, 9:05 AM IST

ಗಣರಾಜ್ಯೋತ್ಸವ ಪೆರೇಡ್

ದೊಡ್ಡಬಳ್ಳಾಪುರ: ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‌ಗೆ ದೊಡ್ಡಬಳ್ಳಾಪುರದ ಜೂನಿಯರ್ ಕಾಲೇಜಿನಲ್ಲಿ ಎನ್​​ಸಿಸಿ ಕೆಡೆಟ್‌ಗಳಿಗೆ ಕಟ್ಟುನಿಟ್ಟಿನ ತರಬೇತಿ ನೀಡಲಾಗುತ್ತಿದೆ.

ಕರ್ನಾಟಕ ಮತ್ತು ಗೋವಾ ಸೇರಿ ಒಂದು ತಂಡವಾಗಿ ದೆಹಲಿ ಪರೇಡ್​​ನಲ್ಲಿ ಭಾಗವಹಿಸುತ್ತದೆ. ಒಟ್ಟು 106 ವಿದ್ಯಾರ್ಥಿಗಳನ್ನು ಅಂತಿಮವಾಗಿ ಜನವರಿ 26ರಂದು ದೆಹಲಿಯಲ್ಲಿ ನಡೆಯುವ ಪೆರೇಡ್‌ಗೆ ಆಯ್ಕೆ ಮಾಡಲಾಗುತ್ತಿದೆ. ಅದಕ್ಕೂ ಮುನ್ನ ಕೆಡೆಟ್‌ಗಳು ಹಲವು ಪೂರ್ವಸಿದ್ಧತಾ ಕ್ಯಾಂಪ್‌ಗಳಲ್ಲಿ ಭಾಗವಹಿಸಬೇಕು. ಅಲ್ಲಿ ಯಾರು ಡ್ರಿಲ್, ಪೆರೇಡ್, ಫೈರಿಂಗ್, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಡ್ರಾಯಿಂಗ್ ಪ್ರಕಾರಗಳಲ್ಲಿ ಉತ್ತಮ ಪ್ರದರ್ಶನ ಕೊಡುವ ವಿದ್ಯಾರ್ಥಿಗಳು ದೆಹಲಿ ಕ್ಯಾಂಪ್​​ಗೆ ಆಯ್ಕೆಯಾಗುತ್ತಾರೆ. ಈ ಹಿನ್ನೆಲೆ ಅಕ್ಟೋಬರ್ 10 ರಂದು ಪ್ರಾರಂಭವಾಗಿರುವ ಕ್ಯಾಂಪ್ 19ರಂದು ಕೊನೆಗೊಳ್ಳಲಿದೆ.

ಕಳೆದ ಬಾರಿ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕ ಮತ್ತು ಗೋವಾ ತಂಡಕ್ಕೆ ಪ್ರಧಾನಿ ಬ್ಯಾನರ್ ಪ್ರಶಸ್ತಿ ಗಳಿತ್ತು.

ಗಣರಾಜ್ಯೋತ್ಸವ ಪರೇಡ್‌ಗೆ ತರಬೇತಿ

ಕ್ಯಾಂಪ್‌ನಲ್ಲಿ ಭಾಗವಹಿಸಿದವರು ನಮ್ಮ ದೇಶದ ಸಂಸ್ಕೃತಿ, ಕಲೆ ಮತ್ತು ಸಂಪ್ರದಾಯಗಳ ಬಗ್ಗೆ ಹೆಚ್ಚಿನ ಜ್ಞಾನ ಸಂಪಾದಿಸುತ್ತಾರೆ.

ABOUT THE AUTHOR

...view details