ದೇವನಹಳ್ಳಿ :ಇಡೀ ದೇಶದಲ್ಲಿ ನಾಳೆ (ಜುಲೈ 21) ಬಕ್ರೀದ್ ಹಬ್ಬ ಆಚರಣೆ ಮಾಡಲಾಗುತ್ತದೆ. ಆದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಒಂದು ದಿನ ಮೊದಲೇ ಹಬ್ಬ ಆಚರಣೆ ಮಾಡಲಾಗಿದೆ.
ದೇವನಹಳ್ಳಿ ಪಟ್ಟಣದ ಜಾಮಿಯಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಮುಸ್ಲಿಂಮರು ಹಬ್ಬ ಆಚರಿಸಿದರು. ಕೋವಿಡ್ ಹಿನ್ನೆಲೆ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸಿದರು.
ಜಾಮಿಯಾ ಮಸೀದಿಯ ಆಡಳಿತ ಸಮಿತಿ ಸೌದಿ ಅರೇಬಿಯಾ ಮಾದರಿಯಲ್ಲಿ ಇಂದೇ ಬಕ್ರೀದ್ ಆಚರಿಸಲು ತೀರ್ಮಾನಿಸಿತ್ತು. ಅದರಂತೆ ಹಬ್ಬ ಆಚರಣೆ ಮಾಡಲಾಗಿದೆ.
ದೇವನಹಳ್ಳಿಯಲ್ಲಿ ಸರಳವಾಗಿ ಬಕ್ರೀದ್ ಆಚರಣೆ ಮಾಡಲಾಯಿತು ಓದಿ : ಜಾನುವಾರು ಸಾಗಾಟಕ್ಕೆ ನಿರಂತರ ತಡೆ ಹಿನ್ನೆಲೆ: ಬಕ್ರೀದ್ ಹಬ್ಬಕ್ಕಾಗಿ ಭಟ್ಕಳಕ್ಕೆ ಬಂದ ಸಾವಿರಾರು ಕುರಿಗಳು
ಚಂದ್ರ ದರ್ಶನವಾದ ಪ್ರಕಾರ ಅರಬ್ ರಾಷ್ಟ್ರಗಳಲ್ಲಿ ಇಂದು ಹಬ್ಬ ಆಚರಣೆ ಮಾಡಲಾಗ್ತಿದೆ. ಅದರಂತೆ ನಾವು ಮಾಡುತ್ತಿದ್ದೇವೆ. ಇಂದು ಹಬ್ಬದ ನಿಮಿತ್ತ ಖುರ್ಬಾನಿ ಕೊಡುತ್ತಿದ್ದೇವೆ ಎಂದು ಜಾಮಿಯಾ ಮಸೀದಿಯ ಅಧ್ಯಕ್ಷ ಅಬ್ದುಲ್ ಖುದ್ದುಸ್ ಪಾಷಾ ತಿಳಿಸಿದರು.