ನೆಲಮಂಗಲ:ನಡು ರಸ್ತೆಯಲ್ಲೇ ಗ್ರಾಮ ಪಂಚಾಯತ್ ಸದಸ್ಯನೋರ್ವನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ನೆಲಮಂಗಲ ಸಮೀಪದ ಮಾಚೋಹಳ್ಳಿಯಲ್ಲಿನಡೆದಿದೆ.
ನಡು ರಸ್ತೆಯಲ್ಲೇ ಗ್ರಾಮ ಪಂಚಾಯತ್ ಸದಸ್ಯನ ಬರ್ಬರ ಕೊಲೆ - undefined
ನಡು ರಸ್ತೆಯಲ್ಲೇ ಗ್ರಾಮ ಪಂಚಾಯತ್ ಸದಸ್ಯನನ್ನ ಅಟ್ಟಾಡಿಸಿದ ಹತ್ತು ಜನರ ಗ್ಯಾಂಗ್ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ.
ಗ್ರಾಮ ಪಂಚಾಯತಿ ಸದಸ್ಯ ಕೊಲೆ
ಮಾಚೋಹಳ್ಳಿ ಗ್ರಾಮ ಪಂಚಾಯತ್ ಸದಸ್ಯ ಲಕ್ಷ್ಮೀನಾರಾಯಣ (40) ಕೊಲೆಯಾಗೀಡಾಗಿರುವ ವ್ಯಕ್ತಿ. ನಡು ರಸ್ತೆಯಲ್ಲಿ ಅಟ್ಟಾಡಿಸಿದ ಹತ್ತು ಜನರ ಗ್ಯಾಂಗ್ವೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದೆ. ಹತ್ಯೆ ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಸರ್ಕಾರಿ ನಿವೇಶನದ ವಿಚಾರಕ್ಕೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.