ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಜಮೀನು ವ್ಯಾಜ್ಯದ ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿಯ ಬರ್ಬರ ಹತ್ಯೆ - ಮಾದನಾಯಕನಹಳ್ಳಿ ಪೊಲೀಸ್​ ಠಾಣೆ

ಜಮೀನು ವ್ಯಾಜ್ಯದ ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಿದ ಸಿದ್ದಗಂಗಪ್ಪ ಎಂಬ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕು ಕಡಬಗೆರೆ ಗ್ರಾಮದ ರಾಜರಾಜೇಶ್ವರಿ ಲೇಔಟ್​ನಲ್ಲಿ ನಡೆದಿದೆ.

Murder  in Bangalore
ವ್ಯಕ್ತಿಯ ಬರ್ಬರ ಹತ್ಯೆ

By

Published : Apr 22, 2021, 9:24 PM IST

ನೆಲಮಂಗಲ:ಜಮೀನು ವಿಚಾರವಾಗಿ ವೃದ್ಧನ ಕುತ್ತು ಸೀಳಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕು ಕಡಬಗೆರೆ ಗ್ರಾಮದ ರಾಜರಾಜೇಶ್ವರಿ ಲೇಔಟ್​ನಲ್ಲಿ ನಡೆದಿದೆ.

ವ್ಯಕ್ತಿಯ ಬರ್ಬರ ಹತ್ಯೆ

ಸಿದ್ದಗಂಗಪ್ಪ (67) ಮೃತ ವ್ಯಕ್ತಿ. ಮುಂಜಾನೆ ತಮ್ಮ ಮನೆ ಬಳಿಯ ಬಡಾವಣೆಯಲ್ಲಿ ವಾಕ್ ಮಾಡುತ್ತಿದ್ದ ಈ ವೇಳೆ ನಾಲ್ಕು ಮಂದಿ ಹಂತಕರು ಕುತ್ತಿಗೆ ಸೀಳಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಿದ್ದಗಂಗಪ್ಪನನ್ನು ಕುಟುಂಬಸ್ಥರು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರೂ ಸಹ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಸಿದ್ದಗಂಗಪ್ಪರ ಜಮೀನಿಗೆ ಹೊಂದಿಕೊಂಡಂತೆ ಇರುವ ಬಡಾವಣೆಯನ್ನು ಬೆಂಗಳೂರು ಮೂಲದ ಪಾಪಣ್ಣ ಹಾಗೂ ಉಮೇಶ್ ಎಂಬುವರು ಅಭಿವೃದ್ಧಿಪಡಿಸಿ ಸೈಟ್ ಮಾಡಿ ಮಾರಲು ಅಗ್ರಿಮೆಂಟ್ ಹಾಕಿಸಿಕೊಂಡಿದ್ದರಂತೆ. ಆದರೆ 3-4 ವರ್ಷ ಕಳೆದರು ಬಡಾವಣೆ ಅಭಿವೃದ್ಧಿಪಡಿಸದೆ ಸಿದ್ದಗಂಗಪ್ಪನ ಜಮೀನಿನ 15 ಗುಂಟೆ ಜಾಗವನ್ನು ಹಣ ನೀಡದೆ ಮತ್ತೊಬ್ಬರಿಗೆ ನೋಂದಣಿ ಮಾಡಿದ್ದರು ಎನ್ನಲಾಗ್ತಿದೆ.

ಪಾಪಣ್ಣ ಮತ್ತು ಉಮೇಶ್ ತನ್ನ ಜಮೀನು ಒತ್ತುವರಿ ಮಾಡಿದ್ದಾರೆಂದು ಸಿದ್ದಗಂಗಪ್ಪ ನೆಲಮಂಗಲದ ಜೆ‌ಎಂ‌ಎಫ್‌ಸಿ ನ್ಯಾಯಾಲಯದ ಮೆಟ್ಟಿಲೇರಿದ್ರು. ಆದರೆ ಸೂಕ್ತ ದಾಖಲೆ ಒದಗಿಸದ ಕಾರಣ ಕೇಸ್ ಖುಲಾಸೆಗೊಂಡಿದೆ. ಈ ಸಂಬಂಧ ಸಿದ್ದಗಂಗಪ್ಪ ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್‌‌ನಲ್ಲಿ ಕೇಸ್ ಫೈಲ್ ಮಾಡಿದ್ದರು. ಈ ವಿಚಾರಕ್ಕೆ ಪಾಪಣ್ಣ, ಉಮೇಶ್ ಹಾಗೂ ಕೊಲೆಯಾದ ಸಿದ್ದಗಂಗಪ್ಪ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಹೀಗಾಗಿ ಇವರಿಬ್ಬರೇ ಕೊಲೆ ಮಾಡಿದ್ದಾರೆಂದು ಮೃತನ‌ ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details