ಕರ್ನಾಟಕ

karnataka

ETV Bharat / state

ಸಿಡಿ ಪ್ರಕರಣ‌ದಲ್ಲಿ ರಾಜಕೀಯ ಒತ್ತಡ ಹಾಕುವ ಪರಿಸ್ಥಿತಿ ಇಲ್ಲ: ಎಂಟಿಬಿ

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಭಾಗವಹಿಸಿ ನಂತರ ಮಾಧ್ಯಮ‌ಗಳೊಂದಿಗೆ ಸಚಿವ ಎಂಟಿಬಿ ನಾಗರಾಜ್ ಮಾತನಾಡಿದರು.

MTB Nagraj reaction over Ramesh jarkiholi cd case
ಎಂಟಿಬಿ ನಾಗರಾಜ್ ಪ್ರತಿಕ್ರಿಯೆ

By

Published : Apr 7, 2021, 7:28 AM IST

ದೇವನಹಳ್ಳಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನು ಎಸ್​ಐಟಿ ತಂಡ ನಿಷ್ಪಕ್ಷಪಾತ‌ವಾಗಿ ತನಿಖೆ ಮಾಡುತ್ತಿದೆ. ತನಿಖೆ‌ಯಲ್ಲಿ ಯಾರೂ ಮೂಗು ತೂರಿಸುವ ಮತ್ತು ರಾಜಕೀಯ ಒತ್ತಡ ಹಾಕುವ ಪರಿಸ್ಥಿತಿ ಉಂಟಾಗುವುದಿಲ್ಲ ಎಂದು ಪೌರಾಡಳಿತ ಮತ್ತು ಸಕ್ಕರೆ ಸಚಿವ ಎಂಟಿಬಿ ನಾಗರಾಜ್ ಹೇಳಿದ್ರು.

ಎಂಟಿಬಿ ನಾಗರಾಜ್ ಪ್ರತಿಕ್ರಿಯೆ

ಈ ಪ್ರಕರಣ‌ದಲ್ಲಿ ಎಸ್​ಐಟಿ ಅಧಿಕಾರಿಗಳು ಈಗಾಗಲೇ ಅರ್ಧ ತನಿಖೆ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ ವಿಚಾರಣೆ‌ಗೆ ಎಸ್‌ಐಟಿ ಇನ್ನೂ ನೋಟಿಸ್ ನೀಡಿಲ್ಲ. ಅಷ್ಟರಲ್ಲಿ ಅವರಿಗೆ ಕೊರೊನಾ ಪಾಸಿಟಿವ್ ಬಂದು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ‌ರುವುದು ಮಾಧ್ಯಮ‌ದಿಂದ ನನಗೆ ಗೊತ್ತಾಯ್ತು ಎಂದರು.

ಎಸ್​ಐಟಿ ತಂಡ ಕೇವಲ ಸಂತ್ರಸ್ತೆಯನ್ನು ವಿಚಾರಣೆ ಮಾಡುತ್ತಿರುವ ಬಗ್ಗೆ ಮಾತನಾಡಿದ ಅವರು, ಅಧಿಕಾರಿಗಳು ನಿಷ್ಪಕ್ಷಪಾತ ತನಿಖೆ ಮಾಡಬೇಕು. ಇದರಲ್ಲಿ ಯಾರೇ ತಪ್ಪು ಮಾಡಿದ್ರೂ ಅವರು ವಿರುದ್ಧ ಕಾನೂನಿನ ಚೌಕಟ್ಟಿನೊಳಗೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಇದನ್ನೂ ಓದಿ:ಪ್ರಯಾಣಿಕರೇ ಗಮನಿಸಿ, ಪರ್ಯಾಯ ವ್ಯವಸ್ಥೆ ಹೀಗಿದೆ..

ABOUT THE AUTHOR

...view details