ಕರ್ನಾಟಕ

karnataka

ETV Bharat / state

ಜನ ಕಟ್ಟಿರೋ ತೆರಿಗೆ ವಾಪಸ್ ತರ್ತಾರೆ, ಯಾರೂ ಅವರ ಅಪ್ಪನ ಹಣ ತರಲ್ಲ: ಎಂಟಿಬಿಗೆ ಸಂಸದ ಬಚ್ಚೇಗೌಡ ತಿರಗೇಟು - MP BN Bacchegowda

ಯಾರೂ ಅವರಪ್ಪನ ಹಣ ತಂದು ಕೆಲಸ ಮಾಡಿಸಲ್ಲ, ಜನ ತೆರಿಗೆ ಕಟ್ಟಿರುವ ಹಣದಲ್ಲಿ ಅಭಿವೃದ್ಧಿ ಮಾಡ್ತಾರೆ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಿರುದ್ಧ ಸಂಸದ ಬಿ.ಎನ್.ಬಚ್ಚೇಗೌಡ ವಾಗ್ದಾಳಿ ನಡೆಸಿದರು.

ಅನರ್ಹ ಶಾಸಕ ಎಂಟಿಬಿ ನಾಗರಾಜ್​ ವಿರುದ್ಧ ಹರಿಹಾಯ್ದ ಸಂಸದ ಬಿ.ಎನ್​.ಬಚ್ಚೇಗೌಡ

By

Published : Oct 3, 2019, 3:50 AM IST

ಬೆಂಗಳೂರು ಗ್ರಾಮಾಂತರ:ಏನೋ ಬಾಯಿಗೆ ಬಂದಂತೆ ಮಾತನಾಡಿದರೆ ನಾವು ಕೇಳೋದಕ್ಕೆ ಆಗಲ್ಲ. ಸರ್ಕಾರ ಎಷ್ಟು ‌ಹಣ ಬಿಡುಗಡೆ ಮಾಡುತ್ತೋ ಅದನ್ನ ಎಲ್ಲಾ ಕೆಲಸಕ್ಕೆ ಹಂಚಲಾಗುತ್ತದೆ. ಯಾರೂ ಅವರಪ್ಪನ ಹಣವನ್ನು ತಂದು ಕೊಡಲ್ಲ. ಜನ ತೆರಿಗೆ ಕಟ್ಟಿರುತ್ತಾರೆ. ಆ ಹಣವನ್ನು ಸರ್ಕಾರ ‌ನಮಗೆ ವಾಪಸ್​ ಕೊಡುತ್ತೆ ಅಷ್ಟೇ. ಯಾರೂ ತಮ್ಮ ಮನೆ ದುಡ್ಡು ತಂದು ಕೊಡಲ್ಲ ಎಂದು ಎಂಟಿಬಿ ನಾಗರಾಜ್​ ವಿರುದ್ಧಚಿಕ್ಕಬಳ್ಳಾಪುರ ಸಂಸದ ಬಿ.ಎನ್.ಬಚ್ಚೇಗೌಡರು ಕಿಡಿಕಾರಿದ್ದಾರೆ.

ಅನರ್ಹ ಶಾಸಕ ಎಂಟಿಬಿ ನಾಗರಾಜ್​ ವಿರುದ್ಧ ಹರಿಹಾಯ್ದ ಸಂಸದ ಬಿ.ಎನ್​.ಬಚ್ಚೇಗೌಡ

ನನಗೆ ಆಶೀರ್ವಾದ ಮಾಡಿದ್ರೆ ಪ್ರಭಾವಿ ಸಚಿವನಾಗಿ ಹೆಚ್ಚಿನ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿಪಡಿಸುವುದಾಗಿ ತಿಳಿಸಿದ್ದ ಅನರ್ಹ ಶಾಸಕ ಎಂಟಿಬಿ ನಾಗರಾಜ್​ ಹೇಳಿಗೆ ಸಂಸದರು ತಿರುಗೇಟು ನೀಡಿದರು.

ಹೊಸಕೋಟೆಯ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಯವರ ಜಯಂತಿ ಕಾರ್ಯಾಕ್ರಮವನ್ನ ಸಂಸದ ಬಚ್ಚೇಗೌಡರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಗಾಂಧೀಜಿಯವರ ಕನಸನ್ನ ನನಸು ಮಾಡಲು ಇಂದಿನ ಪ್ರಧಾನಿ ಮೋದಿಯವರು ಶ್ರಮಿಸುತ್ತಿದ್ದಾರೆ. ಅವರ ಕನಸಿನ ಸ್ವಚ್ಛ ಭಾರತ, ಬಯಲು ಶೌಚಮುಕ್ತ ಭಾರತಕ್ಕಾಗಿ ದೇಶದಾದ್ಯಂತ 9 ಕೋಟಿ ಶೌಚಾಲಯಗಳನ್ನು ಕೇಂದ್ರ ಸರ್ಕಾರ ಕಟ್ಟಿಸಿಕೊಟ್ಟಿದೆ. ಪ್ರಪಂಚವೇ ಭಾರತದ ಕಡೆ ನೋಡುವ ಹಾಗೆ ಮೋದಿ ಕೆಲಸ ಮಾಡುತ್ತಿದ್ದಾರೆ ಎಂದರು.

ತಾಲೂಕು ರಾಜಕೀಯದ ಬಗ್ಗೆ ಮಾತನಾಡಿ, ಕಾರ್ಯಕರ್ತರ, ಮತದಾರರ ಅಭಿಪ್ರಾಯಕ್ಕೆ ನಾವು ಬದ್ಧರಾಗಿರುತ್ತೇವೆ. ಅವರು ತಿಳಿಸಿದಂತೆ ನಡೆಯುತ್ತೇವೆ. ಇದು ನನ್ನ ಕೊನೆಯ ಚುನಾವಣೆ. ಇನ್ಮುಂದೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ನನಗೆ ವಯಸ್ಸಾಗಿದೆ ಸಾಕು ಚುನಾವಣೆ. ಆದರೆ ನನ್ನ ಕೊನೆ ಉಸಿರಿರುವರೆಗೆ ರಾಜಕೀಯದಲ್ಲಿ ಇರುವೆ. ನನ್ನ ‌ಕಾರ್ಯಕರ್ತರಿಗೋಸ್ಕರ ಮುಂದಿನ‌‌ ದಿನಗಳಲ್ಲಿ ಕೆಲಸ ಮಾಡುತ್ತೆನೆ ಎಂದು ತಿಳಿಸಿದರು.

ABOUT THE AUTHOR

...view details