ಕರ್ನಾಟಕ

karnataka

ETV Bharat / state

ಹೇಳಿದ ಮಾತು ಕೇಳುವುದಿಲ್ಲ ಎಂದು ಮಗಳ ಮುಖಕ್ಕೆ ಬರೆ ಹಾಕಿದ ತಾಯಿ - ನೆಲಮಂಗಲ ತಾಲೂಕಿನ  ಕಣೇಗೌಡನಹಳ್ಳಿ  ಗ್ರಾಮ

ಕೆಲಸ ಮಾಡುತ್ತಿಲ್ಲ, ಹೇಳಿದ ಮಾತು ಕೇಳುವುದಿಲ್ಲವೆಂದು ಮನೆಯ ಮಾಲೀಕ ಚಂದ್ರಮ್ಮಳಿಗೆ ದೂರು ನೀಡಿದ್ದು, ಇದರಿಂದ ಕೋಪಗೊಂಡ ಚಂದ್ರಮ್ಮ ಮಗಳ ಮುಖಕ್ಕೆ ಚಾಕುವಿನಿಂದ ಬರೆ ಹಾಕಿದ್ದಾಳೆ.

mother-knife-burn-to-the-daughter-face-nelamangala
ಹೇಳಿದ ಮಾತು ಕೇಳುವುದಿಲ್ಲವೆಂದು ಮಗಳ ಮುಖಕ್ಕೆ ಬರೆ ಹಾಕಿದ ತಾಯಿ..

By

Published : Oct 31, 2020, 8:17 PM IST

ನೆಲಮಂಗಲ: ಹೇಳಿದ ಮಾತು ಕೇಳುತ್ತಿಲ್ಲ ಎಂದು ಹೆತ್ತ ತಾಯಿ ಮಗಳ ಮುಖಕ್ಕೆ ಚಾಕುವಿನಿಂದ ಬರೆ ಹಾಕಿರುವ ಘಟನೆ ನೆಲಮಂಗಲ ತಾಲೂಕಿನ ಕಣೇಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗಂಡನಿಂದ ದೂರವಾಗಿದ್ದ ಚಂದ್ರಮ್ಮ, ತನ್ನ 8 ವರ್ಷ ವಯಸ್ಸಿನ ಮಗಳಾದ ಅಶ್ವಿನಿ ಜೊತೆ ವಾಸವಾಗಿದ್ದಳು. ಗಂಡನ ಮೇಲಿನ ಕೋಪವನ್ನ ತನ್ನ ಮಗಳ ಮೇಲೆ ತೀರಿಸಿಕೊಳ್ಳುತ್ತಿದ್ದು, ಮಗಳಿಗೆ ಸರಿಯಾಗಿ ಊಟ ಸಹ ಹಾಕದೇ ಮಾನಸಿಕ ಕಿರುಕುಳ ಕೊಡುತ್ತಿದ್ದಳು. ತಾನು ವಾಸವಾಗಿದ್ದ ಮನೆಯ ಮಾಲೀಕರ ಹಸುಗಳನ್ನು ನೋಡಿಕೊಳ್ಳಲು ತನ್ನ ಮಗಳನ್ನು ಕಳುಹಿಸುತ್ತಿದ್ದಳು.

ಕೆಲಸ ಮಾಡುತ್ತಿಲ್ಲ, ಹೇಳಿದ ಮಾತು ಕೇಳುವುದಿಲ್ಲ ಎಂದು ಮನೆಯ ಮಾಲೀಕ ಚಂದ್ರಮ್ಮಳಿಗೆ ದೂರು ನೀಡಿದ್ದು, ಇದರಿಂದ ಕೋಪಗೊಂಡ ಚಂದ್ರಮ್ಮ ಮಗಳ ಮುಖಕ್ಕೆ ಚಾಕುವಿನಿಂದ ಬರೆ ಹಾಕಿದ್ದಾಳೆ. ದೇವಸ್ಥಾನದ ಅರ್ಚಕರೊಬ್ಬರು ಬಾಲಕಿಯ ರಕ್ಷಣೆ ಮಾಡಿ ನೆಲಮಂಗಲ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details