ಆನೇಕಲ್:ಕ್ಷುಲ್ಲಕ ಕಾರಣಕ್ಕೆ ಗಂಡನೊಂದಿಗೆ ಜಗಳ ಮಾಡಿಕೊಂಡ ಹೆಂಡತಿ ತನ್ನ ಇಬ್ಬರೂ ಮಕ್ಕಳನ್ನು ಸಂಪಿಗೆ ನೂಕಿ, ತಾನೂ ಆತ್ಮಹತ್ಯೆಗೆ ಯತ್ನಿಸಿದ ಅವರನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ.
ಪತಿಯ ಅನುಮಾನ ಭೂತ: ಇಬ್ಬರು ಮಕ್ಕಳನ್ನು ಕೊಂದು, ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ - ಕ್ಷುಲ್ಲಕ ಕಾರಣಕ್ಕೆ ಜಗಳ
ಕ್ಷುಲ್ಲಕ ಕಾರಣಕ್ಕೆ ಗಂಡನೊಂದಿಗೆ ಜಗಳ ಮಾಡಿಕೊಂಡ ಹೆಂಡತಿ, ಏನೂ ಅರಿಯದ ಮುಗ್ಧ ಕಂದಮ್ಮಗಳನ್ನು ಸಂಪಿಗೆ ನೂಕಿ, ತಾನೂ ಆತ್ಮಹತ್ಯೆಗೆ ಯತ್ನಿಸಿದ ಆ ಮಹಿಳೆಯನ್ನು ಗ್ರಾಮಸ್ಥರು ಕಾಪಾಡಿದ್ದಾರೆ.
ಮುನಿರತ್ನಮ್ಮ ಕೃತ್ಯವೆಸಗಿದ ತಾಯಿ. ಚಂದನ್ (7) ಯುವರಾಣಿ (5) ಮೃತಪಟ್ಟ ಮಕ್ಕಳು. ಕುಟುಂಬ ಜಗಳದ ಹಿನ್ನೆಲೆ ಪತ್ನಿ ಮನನೊಂದು ನೀರಿನ ತೊಟ್ಟಿಗೆ ನೂಕಿದ ಕಾರಣ ತನ್ನ ಇಬ್ಬರೂ ಮಕ್ಕಳು ಮೃತಪಟ್ಟಿದ್ದಾರೆ. ಈ ಘಟನೆ ಸರ್ಜಾಪುರದ ದೊಮ್ಮಸಂದ್ರ ಚರ್ಚ್ ಬಳಿ ಸಂಭವಿಸಿದೆ.
ಮಕ್ಕಳನ್ನು ಸಂಪಿಗೆ ತಳ್ಳಿದ ಬಳಿಕ ತಾಯಿಯೂ ನೇಣಿಗೆ ಕೊರಳೊಡ್ಡಲು ಮುಂದಾಗಿದ್ದರು. ಈ ಘಟನೆ ಗ್ರಾಮಸ್ಥರ ಕಣ್ಣಿಗೆ ಬಿದ್ದ ಪರಿಣಾಮ ಆ ಮಹಿಳೆಯನ್ನು ಕಾಪಾಡಿದ್ದಾರೆ. ಪತಿಯ ಅನುಮಾನವೇ ಈ ದುರ್ಘಟನೆಗೆ ಕಾರಣವೆಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಗಂಡ ಮನೆಯಿಂದ ಹೊರ ಹೋದ ನಂತರ ಈ ದುರ್ಘಟನೆ ನಡೆದಿದೆ. ಸರ್ಜಾಪುರ ಪೋಲಿಸರು ದಂಪತಿಗಳನ್ನು ವಶಕ್ಕೆ ಪಡೆದಿದ್ದಾರೆ.