ಕರ್ನಾಟಕ

karnataka

ETV Bharat / state

ಗ್ಯಾಸ್ ಗೀಸರ್​​ ತಂದ ಆಪತ್ತು.. ಅನಿಲ ಸೋರಿಕೆಯಿಂದ ಬೆಂಗಳೂರಲ್ಲಿ ತಾಯಿ-ಮಗಳು ಉಸಿರುಗಟ್ಟಿ ಸಾವು - ನೆಲಮಂಗಲದಲ್ಲಿ ತಾಯಿ-ಮಗಳು ಉಸಿರುಗಟ್ಟಿ ಸಾವು

ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರದಲ್ಲಿ ಗ್ಯಾಸ್​​​ ಗೀಸರ್​ನಿಂದ ಅನಿಲ ಸೋರಿಕೆಯಾಗಿ ತಾಯಿ-ಮಗಳು ಸಾವನ್ನಪ್ಪಿದ್ದಾರೆ.

Mother and Daughter died leaking of gas from geyser
ಗ್ಯಾಸ್​​​ ಗೀಸರ್​ನಿಂದ ಅನಿಲ ಸೋರಿಕೆಯಾಗಿ ತಾಯಿ-ಮಗು ಸಾವು

By

Published : Jan 16, 2022, 9:15 PM IST

ನೆಲಮಂಗಲ :ಗ್ಯಾಸ್​​​ ಗೀಸರ್​ನಿಂದ ಅನಿಲ ಸೋರಿಕೆ ಪರಿಣಾಮ ಉಸಿರುಗಟ್ಟಿ ತಾಯಿ ಮತ್ತು ಮಗಳು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರದಲ್ಲಿ ಸಂಭವಿಸಿದೆ.

ಮಂಗಳ(35) ಮತ್ತು ಗೌತಮಿ(07) ಮೃತ ತಾಯಿ-ಮಗು ಎಂದು ಗುರುತಿಸಲಾಗಿದೆ. ಗಂಡ ನರಸಿಂಹಮೂರ್ತಿ ಕೆಲಸಕ್ಕೆ ತೆರಳಿದ ಸಮಯದಲ್ಲಿ ತಾಯಿ-ಮಗಳು ಸ್ನಾನಕ್ಕೆಂದು ತೆರಳಿದಾಗ ಈ ದುರ್ಘಟನೆ ಸಂಭವಿಸಿದೆ. ಮನೆ ಮಾಲೀಕರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಸೊಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ಅಚ್ಚರಿ.. ನೇಣು ಹಾಕಿಕೊಂಡ ವರ್ಷದ ಬಳಿಕ ವ್ಯಕ್ತಿ ಮೃತದೇಹ ಪತ್ತೆ!

For All Latest Updates

TAGGED:

ABOUT THE AUTHOR

...view details