ಕರ್ನಾಟಕ

karnataka

By

Published : Aug 11, 2023, 10:13 AM IST

Updated : Aug 11, 2023, 3:39 PM IST

ETV Bharat / state

20 ಪ್ರಕರಣಗಳಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಆರೋಪಿ ಅರೆಸ್ಟ್​!

ಚಿನ್ನದ ಸರ ಕಸಿದುಕೊಂಡು ಪರಾರಿ ಆಗಲು ಯತ್ನಿಸಿದ ಹಾಗೂ 20 ಕೇಸ್​ಗಳಲ್ಲಿ ಬೇಕಿದ್ದ ಮೋಸ್ಟ್ ವಾಂಟೆಡ್ ಆರೋಪಿ ಶಿವಕುಮಾರ್ ಎಂಬಾತನನ್ನು ಸೂರ್ಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

arrest
ಆರೋಪಿ ಶಿವಕುಮಾರ್ ಅರೆಸ್ಟ್​

ಆನೇಕಲ್ : ಕ್ಯಾಂಟರ್ ವಾಹನ ಚಾಲಕನನ್ನು ಬೆದರಿಸಿ 8 ಗ್ರಾಂ ಚಿನ್ನದ ಸರ ಕಸಿದುಕೊಂಡು ಪರಾರಿ ಆಗಲು ಯತ್ನಿಸಿದ ಆರೋಪಿಯನ್ನು ಬಂಧಿಸುವಲ್ಲಿ ಸೂರ್ಯನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮುಳ್ಳಳ್ಳಿಯ ಶಿವಕುಮಾರ್ (32) ಬಂಧಿತ ಆರೋಪಿ.

ಕಾರುಗಳ ಮಾರಾಟ ಮಾಡುವ ಕೆಲಸ ಮಾಡಿಕೊಂಡಿದ್ದ ಶಿವಕುಮಾರ್, ಆಗಾಗ ದರೋಡೆ ಮಾಡಲು ಹೊಸ ಹೊಸ ಪ್ಲಾನ್​ ಮಾಡುತ್ತಿದ್ದ. ರಾಮನಗರ, ಕಮಕಪುರ, ತಲಘಟ್ಟಪುರ, ಜಿಗಣಿ, ಸೂರ್ಯನಗರ, ತುಮಕೂರಿನ ಕ್ಯಾತಸಂದ್ರ, ಬೆಂಗಳೂರಿನ ಮೈಕೋ ಲೇಔಟ್, ಸುಭ್ರಮಣ್ಯಪುರ ಪೊಲೀಸ್ ಠಾಣಾ ಪರಿಧಿಗಳಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಮೋಸ್ಟ್ ವಾಂಟೆಡ್ ಆಗಿದ್ದ ಶಿವಕುಮಾರ್, ಸಿಸಿಬಿ ಪೊಲೀಸರಿಗೂ ಹಲವು ಪ್ರಕರಣಗಳಲ್ಲಿ ಬೇಕಾದವನಾಗಿದ್ದ. ಸೂರ್ಯನಗರ ಠಾಣಾ ವ್ಯಾಪ್ತಿಯಲ್ಲಿ ದರೋಡೆಗೆ ಸಂಚು ರೂಪಿಸಿ ಪರಾರಿಯಾಗಲು ಯತ್ನಿಸಿದಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ಇದನ್ನೂ ಓದಿ :5 ಲಕ್ಷದ ಚೆಕ್​ ಅನ್ನು 65 ಲಕ್ಷವೆಂದು ತಿದ್ದಿದ ಭೂಪ.. ಹಣ ಡ್ರಾ ಮಾಡುವಾಗ ತಗಲಾಕಿಕೊಂಡ ಖದೀಮ

ಹಣ ವಸೂಲಿ :ಇನ್ನು ಪೊಲೀಸರ ಹೆಸರಿನಲ್ಲಿ ಕ್ಯಾತಸಂದ್ರ ಸೇರಿದಂತೆ ಇನ್ನಿತರ ಠಾಣಾ ವ್ಯಾಪ್ತಿಯಲ್ಲಿನ ನಿರ್ಜನ ಬಡಾವಣೆಗಳು ಹಾಗೂ ಪೊದೆಗಳ ಮಧ್ಯೆ ಸಮಯ ಕಳೆಯುತ್ತಿದ್ದ ಜೋಡಿಗಳನ್ನು ಬೇಟೆಯಾಡಿ, ಅವರಿಂದ ಹಣ ಪಡೆದು ಪರಾರಿಯಾಗುತ್ತಿದ್ದ ಎಂದು ಆರೋಪಿಯು ಪೊಲೀಸರ ಬಳಿ ಬಾಯ್ಬಿಟ್ಟಿದ್ದಾನೆ.

ಇದನ್ನೂ ಓದಿ :ತಂದೆಯ ಪಿಂಚಣಿಗಾಗಿ 'ಪತ್ನಿ'ಯಾದ ಮಗಳು.. ಬರೋಬ್ಬರಿ 10 ವರ್ಷಗಳ ಬಳಿಕ ಪ್ರಕರಣ ಬೆಳಕಿಗೆ: ಆರೋಪಿ ಬಂಧನ

ಹಾರೋಹಳ್ಳಿಯ ನರಸಿಂಹಯ್ಯನ ದೊಡ್ಡಿ ನಿವಾಸಿ ಹಾಗೂ ಮಾಜಿ ಗೃಹ ರಕ್ಷಕ ದಳ ಸಿಬ್ಬಂದಿ ರಘು (38) ಎಂಬಾತನ ಸ್ನೇಹ ಬೆಳಸಿಕೊಂಡು ಇಬ್ಬರೂ ಬೈಕ್​ನಲ್ಲಿ ನಿರ್ಜನ ಬಡಾವಣೆಗಳ ಪೊದೆಗಳಲ್ಲಿ ಏಕಾಂತದಲ್ಲಿರುವ ಜೋಡಿಗಳನ್ನು ಗುರಿಯಾಗಿಸಿಕೊಂಡು ಹಣ ಕೀಳುತ್ತಿದ್ದರು. ಇವರ ಬಳಿ ಒಂದು ಕಾರು, ಬೈಕ್ ಹಾಗೂ ಕೈ ಕೋಳಗಳಿದ್ದು, ಪೊಲೀಸರೆಂದು ಹೇಳಿ ಬೆದರಿಸುತ್ತಿದ್ದರು. ಹಣ ಕಳೆದುಕೊಂಡ ಜೋಡಿಗಳು ಮರ್ಯಾದೆಗೆ ಅಂಜಿ ಪೊಲೀಸ್ ಠಾಣೆಗಳಿಗೆ ದೂರು ನೀಡುತ್ತಿರಲಿಲ್ಲ. ರಘು ಮೇಲೆಯೂ 20 ಪ್ರಕರಣಗಳು ದಾಖಲಾಗಿದ್ದು, ಶಿವಕುಮಾರ್ ಬಂಧನದ ಬಳಿಕ ತಲೆ ಮರೆಸಿಕೊಂಡಿದ್ದಾನೆ. ಹೀಗಾಗಿ, ಏಳೆಂಟು ಠಾಣಾ ಪೊಲೀಸರು ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಇದನ್ನೂ ಓದಿ :ಹುಬ್ಬಳ್ಳಿ ಕಾಲೇಜು ವಿದ್ಯಾರ್ಥಿನಿಯರ ಅಸಭ್ಯ ಫೋಟೋ ಪೋಸ್ಟ್ ಪ್ರಕರಣ : ಆರೋಪಿ ಬಂಧನ

ಅಂತಾರಾಜ್ಯ ಕಾರು ಕಳ್ಳನ ಬಂಧನ :ಕಳೆದ 2 ದಿನದ ಹಿಂದೆ ಅಂತಾರಾಜ್ಯ ಕಾರು ಕಳ್ಳತನದ ಆರೋಪಿಯನ್ನು ಬಂಧಿಸುವಲ್ಲಿ ಹಾಸನ ಪೊಲೀಸರು ಯಶಸ್ವಿಯಾಗಿದ್ದರು. ಕೇರಳದ ಕಣ್ಣೂರು ಜಿಲ್ಲೆಯ ಕೆ ಎಸ್ ದಿಲೀಪ್ (39) ಬಂಧಿತ ಆರೋಪಿಯಾಗಿದ್ದು, ಈತನಿಂದ ಸುಮಾರು 8.18 ಲಕ್ಷ ಮೌಲ್ಯದ ನಗದು ಸೇರಿದಂತೆ ವಾಹನಗಳನ್ನು ವಶಕ್ಕೆ ಪಡೆಯಲಾಗಿತ್ತು.

ಇದನ್ನೂ ಓದಿ :ಕಾರು ಕಳ್ಳತನ ಪ್ರಕರಣ.. ಹಾಸನದಲ್ಲಿ ಅಂತಾರಾಜ್ಯ ಖದೀಮನ ಬಂಧನ

Last Updated : Aug 11, 2023, 3:39 PM IST

ABOUT THE AUTHOR

...view details