ಕರ್ನಾಟಕ

karnataka

ETV Bharat / state

ಪಾದದ ಕೆಳಗೆ ಬ್ಯಾಂಡೇಜ್ ಕಟ್ಟಿಕೊಂಡು ಚಿನ್ನದ ಕಳ್ಳಸಾಗಣೆ: 5.42 ಲಕ್ಷ ಮೌಲ್ಯದ ಚಿನ್ನ ವಶ

ಬೆಂಗಳೂರಿನ ಕೆಂಪೇಗೌಡ ಇಂಟರ್​ನ್ಯಾಷನಲ್​ ಏರ್​ಪೋರ್ಟ್​​ನಲ್ಲಿ ಪಾದದ ಕೆಳಗೆ ಬ್ಯಾಂಡೇಜ್ ಕಟ್ಟಿಕೊಂಡು ಅದರೊಳಗೆ ಚಿನ್ನವನ್ನಿಟ್ಟು ಸಾಗಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಮಹಿಳೆಯೊಬ್ಬರು ತನ್ನ ಚಿನ್ನದ ತಾಳಿ ಮತ್ತು ಕಾಲುಂಗುಕ್ಕೆ ಬೆಳ್ಳಿ ಲೇಪನ ಮಾಡಿ ಚಿನ್ನದ ಕಳ್ಳ ಸಾಗಾಣಿಕೆ ಮಾಡುತ್ತಿದ್ದುದು ಪತ್ತೆಯಾಗಿದೆ.

Coustms officials arrests smuglers
ಅಕ್ರಮ ಚಿನ್ನ ಸಾಗಾಣಿಕೆ

By

Published : Apr 12, 2021, 3:00 PM IST

ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಯಶಸ್ವಿ ಕಾರ್ಯಾಚರಣೆ ನಡೆಸಿ ಪಾದದ ಕೆಳಗೆ ಬ್ಯಾಂಡೇಜ್ ಕಟ್ಟಿಕೊಂಡು ಅದರೊಳಗೆ ಚಿನ್ನದ ಕಳ್ಳ ಸಾಗಣೆ ಮಾಡುತ್ತಿದ್ದ ಪ್ರಯಾಣಿಕರನನ್ನ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ವಿದೇಶದಿಂದ ಚಿನ್ನದ ಕಳ್ಳಸಾಗಾಣಿಕೆಗಾಗಿ ಸ್ಮಗ್ಲರ್ ಗಳು ಹೊಸ ಹೊಸ ತಂತ್ರಗಳಿಗೆ ಮೊರೆ ಹೋಗುತ್ತಿದ್ದಾರೆ, ಸ್ಮಗ್ಲರ್ ಗಳು ಚಾಪೆಯೊಳಗೆ ತೂರಿದರೆ ಕಸ್ಟಮ್ಸ್ ಅಧಿಕಾರಿಗಳು ರಂಗೋಲಿ ಕೆಳಗೆ ತೂರುವ ಚಾಲಕಿಗಳು, ಅದಕ್ಕೆ ತಾಜಾ ಉದಾಹರಣೆ ಈ ಕೇಸ್. ದುಬೈನಿಂದ ಬೆಂಗಳೂರಿನ ಬಂದ ಪ್ರಯಾಣಿಕ ತನ್ನೊಂದಿಗೆ ಚಿನ್ನ ಕಳ್ಳಸಾಗಣೆ ಸಹ ಮಾಡಿದ್ದ, ತನ್ನ ಕಾಲಿನ ಪಾದದ ಕೆಳಗೆ ಬ್ಯಾಂಡೇಜ್ ಕಟ್ಟಿಕೊಂಡು ಅದರೊಳಗೆ 5.42 ಲಕ್ಷ ಮೌಲ್ಯದ ಚಿನ್ನ ಇಟ್ಟುಕೊಂಡು ಬಂದಿದ್ದ. ಪ್ರಯಾಣಿಕನನ್ನ ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು ಚಿನ್ನವನ್ನ ವಶಕ್ಕೆ ಪಡೆದು ಆರೋಪಿ ವಿಚಾರಣೆ ನಡೆಸುತ್ತಿದ್ದಾರೆ.

ಚಿನ್ನದ ತಾಳಿ ಮತ್ತು ಕಾಲುಂಗುರಕ್ಕೆ ಬೆಳ್ಳಿ ಲೇಪನ ಮಾಡಿ ಚಿನ್ನದ ಕಳ್ಳ ಸಾಗಣೆ:

ವಿದೇಶದಿಂದ ಬೆಂಗಳೂರಿನ ಕೆಂಪೇಗೌಡ ಏರ್​ಪೋರ್ಟ್​ಗೆ ಆಗಮಿಸಿದ ಅನುಮಾನಸ್ಪದ ಮಹಿಳೆಯನ್ನ ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ನಡೆಸಿದಾಗ ಆಕೆ ತನ್ನ ಚಿನ್ನದ ತಾಳಿ ಮತ್ತು ಕಾಲುಂಗು ರಕ್ಕೆ ಬೆಳ್ಳಿ ಲೇಪನ ಮಾಡಿ ಚಿನ್ನದ ಕಳ್ಳ ಸಾಗಣೆ ಮಾಡುತ್ತಿದ್ದುದು ಪತ್ತೆಯಾಗಿದೆ. ಆರೋಪಿಯನ್ನು ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದಾರೆ.

ಅಕ್ರಮ ಚಿನ್ನ ಸಾಗಾಣಿಕೆ

ಮತ್ತೊಂದು ಪ್ರಕರಣದಲ್ಲಿ ವಿದೇಶದಿಂದ ಸಿಗರೇಟ್ ಖರೀದಿ ಮಾಡಿ ಬೆಂಗಳೂರಿನಲ್ಲಿ ಮಾರಲು ತರುತ್ತಿದ್ದ ವ್ಯಕ್ತಿಯನ್ನ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಲಗೇಜ್ ತಪಾಸಣೆ ಮಾಡುವ ವೇಳೆ 'ಕಾರ್ಟೂನ್' ಹೆಸರಿನ ವಿದೇಶಿ ಸಿಗರೇಟ್ ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ. ಇವುಗಳ ಒಟ್ಟು ಮೌಲ್ಯ 5.44 ಲಕ್ಷವಾಗಿದೆ.

'ಕಾರ್ಟೂನ್' ಹೆಸರಿನ ವಿದೇಶಿ ಸಿಗರೇಟ್ ಪತ್ತೆ

ABOUT THE AUTHOR

...view details