ನೆಲಮಂಗಲ: ಸೈಟ್ ಖರೀದಿಗೆಂದು ಇಟ್ಟಿದ್ದ ಹಣವನ್ನು ಕಳ್ಳರು ಎಗರಿಸಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಸಬ್ ರಿಜಿಸ್ಟರ್ ಕಚೇರಿ ಮುಂಭಾಗದಲ್ಲಿ ನಡೆದಿದೆ.
ಸೈಟ್ ಖರೀದಿಗೆಂದು ಇಟ್ಟಿದ್ದ ಹಣ ಕಳ್ಳರ ಪಾಲು! - ಸಬ್ ರಿಜಿಸ್ಟರ್ ಕಚೇರಿ
ಸೈಟ್ ಖರೀದಿಗೆಂದು ಇಟ್ಟಿದ್ದ ಹಣವನ್ನು ಕಳ್ಳರು ದೋಚಿರುವ ಘಟನೆ ನಡೆದಿದೆ.
ಗೊರಗುಂಟೆಪಾಳ್ಯ ಮೂಲದ ಪ್ರಕಾಶ್ ಎಂಬವರಿಗೆ ಸೇರಿದ್ದ ಹಣ ಕಳವಾಗಿದ್ದು, ಕೂಲಿ ಮಾಡಿ ಸೈಟ್ ಖರೀದಿಗೆಂದು ಹಣ ಕೂಡಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ನೆಲಮಂಗಲದ ಸಬ್ ರಿಜಿಸ್ಟರ್ ಆಫೀಸ್ಗೆ ಬಂದಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ನಾಮಫಲಕವಿದ್ದ ಸ್ಕೂಟರ್ನಲ್ಲಿ 3 ಲಕ್ಷದ 75 ಸಾವಿರ ರೂ. ಇಟ್ಟಿದ್ದರು. ಸ್ಕೂಟರ್ನಲ್ಲಿ ಹಣ ಇರುವ ಸುಳಿವು ಅರಿತ ಕಳ್ಳರು ಹಣ ದೋಚಿ ಪರಾರಿಯಾಗಿದ್ದಾರೆ.
ಇಡೀ ಜೀವನದ ಸಂಪಾದನೆಯನ್ನು ಕಳೆದುಕೊಂಡ ಪ್ರಕಾಶ್ ಕಣ್ಣೀರಿಡುತ್ತಿದ್ದಾರೆ. ನೆಲಮಂಗಲ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.