ದೊಡ್ಡಬಳ್ಳಾಪುರ:ಕಾರಿನ ಆಯಿಲ್ ಸೋರುತ್ತಿದೆ ಎಂದು ಹೇಳಿ ಗಮನ ಬೇರೆಡೆ ಸೆಳೆದು 5.9 ಲಕ್ಷ ರೂಪಾಯಿ ಹಣ ಎಗರಿಸಿದ ಘಟನೆ ದೊಡ್ಡಬಳ್ಳಾಪುರದ ಸರ್ಕಾರಿ ನೌಕರರ ಭವನ ಸಮೀಪದ ಉರ್ದು ಶಾಲೆ ಮುಂದೆ ನಡೆದಿದೆ. ಕಾರಿನ ಹಿಂಬದಿ ಸೀಟ್ನಲ್ಲಿ ಇಟ್ಟ ಹಣವನ್ನು ಕಳ್ಳರು ದೋಚಿದ್ದಾರೆ.
ನಾಗರಾಜ್ ಎಂಬುವರು ಜಮೀನು ನೋಂದಣಿಗಾಗಿ ನಗರದ ಉಪನೋಂದಣಿ ಅಧಿಕಾರಿಗಳ ಕಚೇರಿಗೆ ಬಂದಿದ್ದರು. ಆದರೆ ತಾಂತ್ರಿಕ ತೊಂದರೆಯಿಂದ ಜಮೀನು ನೋಂದಣಿಯಾಗದೇ, ಹಣದೊಂದಿಗೆ ಕಾರಿನ ಬಳಿಗೆ ಬಂದು ಹಿಂಬದಿಯ ಸೀಟ್ನಲ್ಲಿ ಬ್ಯಾಗ್ ಇಟ್ಟಿದ್ದಾರೆ. ಆಗ ಕಾರು ಹತ್ತುವ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಕಾರಿನಿಂದ ಆಯಿಲ್ ಸೋರುತ್ತಿದೆ ಎಂದು ನಾಗರಾಜ್ ಅವರ ಗಮನ ಬೇರೆಡೆ ಸೆಳೆದು ಹಣದ ಬ್ಯಾಗ್ ಎತ್ತಿಕೊಂಡು ಪರಾರಿಯಾಗಿದ್ದಾನೆ.