ದೇವನಹಳ್ಳಿ :ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಾತ್ ರೂಮ್‌ನಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದೆ. ಬೆಂಗಳೂರು ಏರ್ಪೋರ್ಟ್ನಿಂದ ಲಖನೌಗೆ ತೆರಳಲು ಆಗಮಿಸಿದ ಕಸ್ಟಮ್ಸ್ ಅಧಿಕಾರಿ ಮತ್ತು ಆತನ ಪತ್ನಿ ತಪಾಸಣೆ ವೇಳೆ ಸಿಕ್ಕಿ ಬಿದ್ದಿದ್ದಾರೆ.
ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದ ಕಸ್ಟಮ್ಸ್ ಅಧಿಕಾರಿ ಬಳಿ ಕಂತೆ ಕಂತೆ ಹಣ ಪತ್ತೆ.. ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದ ಕಸ್ಟಮ್ಸ್ ಅಧಿಕಾರಿ ಮೊಹ್ಮದ್ ಇರ್ಫಾನ್ ಅಹ್ಮದ್ ಇಂದು ಬೆಳಗ್ಗೆ ಲಖನೌಗೆ ತೆರಳಲು ಚೆನ್ನೈನಿಂದ ರಸ್ತೆ ಮೂಲಕ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. 9.20ಕ್ಕೆ ಬೋರ್ಡಿಂಗ್ ಸ್ಟಾಟ್ ಆಗುವ ವೇಳೆ ಸಿಐಎಸ್ಎಫ್ ಅಧಿಕಾರಿಗಳ ಪರಿಶೀಲನೆಗೆ ಈ ಅಧಿಕಾರಿ ಒಳಗಾಗಿದ್ದಾರೆ.
ಈ ವೇಳೆ ಅಧಿಕಾರಿಯ ಪತ್ನಿ ಸೂಟ್‌ಕೇಸ್ ತೆಗೆದುಕೊಂಡು ಬಾತ್ ರೂಮ್‌ನಲ್ಲಿ ₹10 ಲಕ್ಷ ಬಿಸಾಡುತ್ತಿದ್ದಾಗ ಸಿಐಎಸ್ಎಫ್ಗೆ ಅನುಮಾನ ಬಂದಿದೆ. ತಕ್ಷಣ ಈ ದಂಪತಿ ಬಳಿ ಇದ್ದ ಬ್ಯಾಗ್‌ನ ಸಂಪೂರ್ಣ ಪರಿಶೀಲಿಸಿದಾಗ ಸುಮಾರು ₹74 ಲಕ್ಷದ 81 ಸಾವಿರ 500 ಪತ್ತೆಯಾಗಿದೆ.
ಓದಿ:ಬೈಕ್ ಕದಿಯುತ್ತಿದ್ದ ಐನಾತಿ ಗಣಿ ಅಂದರ್
ಸೂಟ್ಕೇಸ್ನಲ್ಲಿ ಕಂತೆ ಕಂತೆ ಹಣ ಸೇರಿ ಎರಡು ಕಾಸ್ಟ್ಲಿ ಮೊಬೈಲ್, ಆ್ಯಪಲ್ ವಾಚ್ ಹಾಗೂ ಐದು ಚಿನ್ನದ ಓಲೆ, ಒಂದು ನೆಕ್ಲೆಸ್ ಸೇರಿ 200 ಗ್ರಾಂ ನಷ್ಟು ಚಿನ್ನವೂ ಕೂಡ ಬ್ಯಾಗ್ನಲ್ಲಿ ದೊರೆತಿವೆ. ಇಷ್ಟೆಲ್ಲಾ ಹಣ ಜಪ್ತಿ ಮಾಡಿದ ಸಿಐಎಸ್ಎಫ್ ಪೊಲೀಸರು ಈ ಕೇಸ್ನ ಐಟಿ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದು, ಅವರು ತನಿಖೆ ಆರಂಭಿಸಿದ್ದಾರೆ.