ಕರ್ನಾಟಕ

karnataka

ETV Bharat / state

ಶ್ರೀಮಂತಿಕೆ ತೊರೆದು ಜೈನ ದೀಕ್ಷೆಯತ್ತ ಮುಖ ಮಾಡಿದ ಯುವತಿ! - undefined

ಹೆಣ್ಣು ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಮದುವೆಯಾಗಿ ಗಂಡನ ಮನೆ ಸೇರಿ ಸುಖ ಸಂಸಾರ ನಡೆಸುವ ಕನಸು ಕಾಣುತ್ತಾರೆ. ಆದ್ರೆ, ಇಲ್ಲೊಬ್ಬ ಯುವತಿಯ ಆಸಕ್ತಿಯೇ ವಿಭಿನ್ನ. ಕೈ ತುಂಬಾ ಸಂಬಳ ತಂದುಕೊಡುವ ಕೆಲಸ, ಶ್ರೀಮಂತಿಕೆ ಎಲ್ಲಾ ಬಿಟ್ಟು, ಲೌಕಿಕ ಸುಖಭೋಗಗಳಿಂದ ದೂರವಿರುವುದಕ್ಕೆ ನಿರ್ಧರಿಸಿದ್ದಾರೆ.

ಜೈನ ಸನ್ಯಾಸ ದೀಕ್ಷೆ ಪಡೆಯುತ್ತಿರುವ ಯುವತಿ

By

Published : Apr 14, 2019, 4:10 PM IST

Updated : Apr 14, 2019, 6:25 PM IST

ದೊಡ್ಡಬಳ್ಳಾಪುರ: ಕಠಿಣ ಸವಾಲುಗಳಿಂದ ಕೂಡಿರುವ ಸನ್ಯಾಸ ದೀಕ್ಷೆ ಪಡೆಯಲು ಸಾಮಾನ್ಯವಾಗಿ ಜನರು ಮನಸ್ಸು ಮಾಡೋದಿಲ್ಲ. ಅದರೆ ದೊಡ್ಡಬಳ್ಳಾಪುರದ ಯುವತಿಗೆ ತನ್ನ 24ನೇ ವಯಸ್ಸಿಗೆ ಲೌಕಿಕ ಜಗತ್ತಿನ ಸುಖಭೋಗಗಳು ಇಷ್ಟವಾಗಿಲ್ಲ. ಆಕೆ ಜೈನದೀಕ್ಷೆ ಪಡೆದು ಭಗವಂತ ಧ್ಯಾನದಲ್ಲಿ ಜೀವನ ಕಳೆಯುವುದಕ್ಕೆ ನಿರ್ಧರಿಸಿದ್ದಾರೆ.

ದೊಡ್ಡಬಳ್ಳಾಪುರದ ಗಾಂಧಿ ನಗರದ ಜೈನ ಕುಟುಂಬದ ಮಗಳು ಗಿರಿಷ್ಮಾ ಮುಕಾಣ ಬಿಬಿಎಂ ವ್ಯಾಸಂಗ ಮಾಡಿರುವ ಯುವತಿ. ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸಕ್ಕೆ ಸೇರಿ, ಕೈ ತುಂಬ ಸಂಬಳ ಪಡೆಯುತ್ತಿದ್ದಾರೆ. ಮದುವೆಯ ವಯಸ್ಸು ಬೇರೆ. ಸುಖ ಸಂಸಾರ ನಡೆಸಬಹುದಿತ್ತು. ಮನೆಯಲ್ಲಿ ಶ್ರೀಮಂತಿಕೆ ಇದ್ದರೂ ಅದರ ವ್ಯಾಮೋಹ ಅವರಿಗಿಲ್ಲ. ಹಾಗಾಗಿ ಜೈನ ಸನ್ಯಾಸ ದೀಕ್ಷೆ ಪಡೆಯಲು ಅವರು ತಯಾರಿ ನಡೆಸಿದ್ದಾರೆ.

10 ವಯಸ್ಸಿನಲ್ಲಿಯೇ ಸನ್ಯಾಸದತ್ತ ಒಲವು ತೋರಿದ್ದ ಗಿರಿಷ್ಮಾ ಮುಕಾಣ, ಚಿನ್ನಾಭರಣ ವ್ಯಾಪಾರ ಮಾಡುವ ಮನೆತನದ ಯುವತಿ. ಈ ಕುಟುಂಬದ ನಾಲ್ವರು ಮಕ್ಕಳಲ್ಲಿ ಈಕೆಯೇ ಕಿರಿಯ ಮಗಳು. ಶ್ರಿಮಂತಿಕೆ ತುಂಬಿರುವ ಮನೆಯಲ್ಲಿ ಈಕೆಯ ಸಹೋದರಿಯರು ಮದುವೆಯಾಗಿ ಗಂಡನ ಮನೆ ಸೇರಿ ಸುಖಸಂಸಾರ ನಡೆಸುತ್ತಿದ್ದಾರೆ. ಸಹೋದರ ಕೂಡಾ ಮದುವೆಯಾಗಿ ಸುಖೀ ಜೀವನ ನಡೆಸುತ್ತಿದ್ದಾರೆ. ಅದರೆ ಸಾಂಸಾರಿಕ ಜೀವನದ ಬಗ್ಗೆ ಗಿರಿಷ್ಮಾಗೆ ಬಾಲ್ಯದಿಂದಲೂ ಆಸಕ್ತಿ ಕಡಿಮೆ ಇತ್ತು.

ಜೈನ ಸನ್ಯಾಸ ದೀಕ್ಷೆ ಪಡೆಯುತ್ತಿರುವ ಯುವತಿ

ಪ್ರತಿವರ್ಷ ನಗರಕ್ಕೆ ಬರುತ್ತಿದ್ದ ಜೈನ ಗುರುಗಳ ಪ್ರವಚನ ಕೇಳಿ ಪ್ರಭಾವಿತಳಾದ ಈಕೆ ಸನ್ಯಾಸ ದೀಕ್ಷೆ ಪಡೆಯುವ ತೀರ್ಮಾನಕ್ಕೆ ಬಂದರು. ಜೈನ ಮುನಿಗಳಂತೆ ರಾತ್ರಿ ಊಟ ಮಾಡದಿರುವುದು, ಊಟದಲ್ಲಿ ಈರುಳ್ಳಿ, ಬೆಳ್ಳುಳಿ ಸೇವನೆ ಮಾಡದಿರುವುದು, ಸ್ನಾನ ಮಾಡದಿರೋದು, ಪ್ರವಚನಗಳ ಪುಸ್ತಕ ಓದುವುದವನ್ನು ಈಕೆ ಬೆಳೆಸಿಕೊಂಡಿದ್ದಾರೆ.

ಈಕೆಯ ಜನ್ಮ ಜಾತಕದಲ್ಲೂ ಈ ಯುವತಿ ದೊಡ್ಡವಳಾದ ಮೇಲೆ ಸನ್ಯಾಸ ದೀಕ್ಷೆ ಪಡೆಯುವ ವಿಚಾರವಿದೆಯಂತೆ. ಮನೆಯಲ್ಲಿ ಸನ್ಯಾಸಿಯಂತೆ ಇದ್ದ ಮಗಳನ್ನು ನೋಡಿ ಮನೆಯವರಿಗೆ ಕೊಂಚ ಆತಂಕ ಉಂಟಾಗಿತ್ತು. ಪೋಷಕರು ಮಗಳ ಮನವೊಲಿಕೆಗೆ ಪ್ರಯತ್ನ ಪಟ್ಟರೂ ಪ್ರಯೋಜನವಾಗಲಿಲ್ಲ. ಸನ್ಯಾಸ ಲೋಕದಲ್ಲಿ ಮುಳುಗಿ ಹೋಗಿದ್ದ ಗಿರಿಷ್ಮಾ, ಮನೆಯರ ಮಾತು ಒ ಪ್ಪಲೇ ಇಲ್ಲ. ಅಂತಿಮವಾಗಿ ಮಗಳ ಸಂತೋಷವೇ ನಮ್ಮ ಸಂತೋಷವೆಂದು ತಿಳಿದ ಪೋಷಕರು ಮಗಳನ್ನು ಜೈನ ಭಾಗವತಿ ದೀಕ್ಷೆ ಪಡೆಯಲು ಕಳುಹಿಸುತ್ತಿದ್ದಾರೆ.

ಛತ್ತೀಸ್​ಘಡದಲ್ಲಿ ಸನ್ಯಾಸ ದೀಕ್ಷೆ ಪಡೆಯಲಿರುವ ಗಿರಿಷ್ಮಾ

ಛತ್ತಿಸ್​ಘಡದಲ್ಲಿರುವ ಆಚಾರ್ಯ ಶ್ರೀವಿಜಯರಾಜ್ಮುಮ್ಯಾರಸ ಗುರುಗಳ ಸಮ್ಮುಖದಲ್ಲಿ, ಇದೇ ತಿಂಗಳ ಏಪ್ರಿಲ್ 26 ರಂದು ಗಿರಿಷ್ಮಾ ಸನ್ಯಾಸ ದೀಕ್ಷೆ ಪಡೆಯಲ್ಲಿದ್ದಾರೆ. ಅಲ್ಲಿಂದ ಅವರ ಜೀವನ ಪದ್ಧತಿ ಸಂಪೂರ್ಣವಾಗಿ ಬದಲಾಗುತ್ತದೆ. ಮೊಬೈಲ್ ಬಳಸುವಂತಿಲ್ಲ. ಕಾಲ್ನಡಿಗೆಯಲ್ಲಿಯೇ ಜೀವನ ಪೂರ್ತಿ ಸಂಚಾರ ನಡೆಸಬೇಕು. ಸದಾ ಬಿಳಿ ವಸ್ತ್ರವನ್ನು ಧರಿಸಬೇಕು. ಸೂರ್ಯಾಸ್ತದ ನಂತರ ಆಹಾರ ಸೇವನೆ ಮಾಡುವಂತಿಲ್ಲ. ಭಿಕ್ಷೆ ಆಹಾರಪದ್ಧತಿಯನ್ನು ಅವರು ಅನುಸರಿಲೇಬೇಕು. ಇಂತಹ ಕಠಿಣ ಮಾರ್ಗವನ್ನು ಗಿರಿಷ್ಮಾ ಆಯ್ಕೆ ಮಾಡಿಕೊಂಡಿದ್ದಾರೆ.

Last Updated : Apr 14, 2019, 6:25 PM IST

For All Latest Updates

TAGGED:

ABOUT THE AUTHOR

...view details