ದೊಡ್ಡಬಳ್ಳಾಪುರ:ಸಚಿವ ಸಂಪುಟದಲ್ಲಿ ವಲಸಿಗರಿಗೆ ಸಚಿವ ಸ್ಥಾನ ಸಿಕ್ಕಿದೆ, ಇನ್ನುಳಿದ 105 ಬಿಜೆಪಿ ಶಾಸಕರು ಕಡುಬು ತಿನ್ಬೇಕಾ ಎಂದು ಹೇಳಿಕೆ ನೀಡಿರುವ ಮಾಜಿ ಸಿಎಂ ಕುಮಾರಸ್ವಾಮಿಗೆ ಎಂಎಲ್ಸಿ ತೇಜಸ್ವಿನಿ ರಮೇಶ್ ತಿರುಗೇಟು ನೀಡಿದ್ದಾರೆ.
ದೊಡ್ಡಬಳ್ಳಾಪುರದ ದೊಡ್ಡರಾಯಪ್ಪನಹಳ್ಳಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಎಂಎಲ್ಸಿ ತೇಜಸ್ವಿನಿ ರಮೇಶ್, ಕುಮಾರಸ್ವಾಮಿಯವರ ಹೇಳಿಕೆ ಅವರ ಅನುಭವದ ಮಾತು ಅಷ್ಟೇ. ಅವರು ಮೂಲ ಜೆಡಿಎಸ್ನವರನ್ನ ಕಾಳಜಿ ಮಾಡಿದ್ರೆ ಚೆಲುವನಾರಾಯಣಸ್ವಾಮಿ ಏಕೆ ಪಕ್ಷ ಬಿಟ್ಟು ಹೋಗುತ್ತಿದ್ದರು. ನಿನ್ನೆ ಸಚಿವರಾದ ಗೋಪಾಲಯ್ಯ ಜೆಡಿಎಸ್ ಬಿಟ್ಟು ನಮ್ಮ ಮನೆಗೆ ಏಕೆ ಬರ್ತಾ ಇದ್ರು. ಹೀಗೇ ಹೇಳುತ್ತಾ ಹೋದರೆ ದೊಡ್ಡ ಪಟ್ಟಿಯೇ ಇದೆ. ಮೊದಲು ಅವರು ಅವರ ಮನೆಯ ಸಮಸ್ಯೆ ಸರಿ ಮಾಡಿಕೊಂಡರೆ ಒಳಿತು ಎಂದು ತಿರುಗೇಟು ನೀಡಿದರು.