ದೊಡ್ಡಬಳ್ಳಾಪುರ: ಸಿಡಿ ಲೇಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಕಳೆದ 27 ದಿನಗಳಿಂದ ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡುತ್ತಿದ್ರೂ ಆಕೆಯನ್ನು ಪತ್ತೆ ಮಾಡುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಸಿಡಿ ಪ್ರಕರಣ ಮುಚ್ಚಿ ಹಾಕಲು ಸರ್ಕಾರದ ಜೊತೆ ಪೊಲೀಸ್ ಇಲಾಖೆ ಶಾಮೀಲಾಗಿದೆ ಎಂದು ದೊಡ್ಡಬಳ್ಳಾಪುರ ಶಾಸಕ ಟಿ ವೆಂಕಟರಮಣಯ್ಯ ವಾಗ್ದಾಳಿ ನಡೆಸಿದ್ರು.
ಸಿಡಿ ಪ್ರಕರಣ ಮುಚ್ಚಿಹಾಕಲು ಸರ್ಕಾರದ ಜೊತೆ ಪೊಲೀಸ್ ಇಲಾಖೆ ಶಾಮೀಲು: ಟಿ. ವೆಂಕಟರಮಣಯ್ಯ - ಶಾಸಕ ಟಿ. ವೆಂಕಟರಮಣಯ್ಯ
ಪೊಲೀಸ್ ಇಲಾಖೆ ಕಳೆದ 27 ದಿನಗಳಿಂದ ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡುತ್ತಿರುವ ಸಿಡಿ ಲೇಡಿಯನ್ನು ಪತ್ತೆ ಮಾಡುವಲ್ಲಿ ನಿಷ್ಕ್ರೀಯವಾಗಿದೆ ಎಂದು ದೊಡ್ಡಬಳ್ಳಾಪುರ ಶಾಸಕ ಟಿ ವೆಂಕಟರಮಣಯ್ಯ ಆರೋಪಿಸಿದ್ರು.
ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಟಿ ವೆಂಕಟರಮಣಯ್ಯ, ರಾಜ್ಯದ ಬಿಜೆಪಿ ಆಡಳಿತದಲ್ಲಿ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣ ಹಾದಿ ತಪ್ಪುತ್ತಿದೆ. ಈ ಪ್ರಕರಣದಿಂದಾಗಿ ಜನಪ್ರತಿನಿಧಿಗಳನ್ನ ಸಾರ್ವಜನಿಕರು ಕೆಟ್ಟ ದೃಷ್ಟಿಯಿಂದ ನೋಡುವಂತಾಗಿದೆ. ಈ ಸಿಡಿ ಪ್ರಕರಣ ಬೇಗ ಸುಖಾಂತ್ಯವಾಗಬೇಕಾದರೆ ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡುತ್ತಿರುವ ಯುವತಿಯನ್ನ ಪೊಲೀಸ್ ಇಲಾಖೆ ಪತ್ತೆ ಮಾಡಬೇಕಿದೆ. ಆದರೆ, ಪೊಲೀಸ್ ಇಲಾಖೆ ಕಳೆದ 27 ದಿನಗಳಿಂದ ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡುತ್ತಿರುವ ಯುವತಿ ಪತ್ತೆ ಮಾಡುವಲ್ಲಿ ನಿಷ್ಕ್ರೀಯವಾಗಿದೆ ಎಂದು ಆರೋಪಿಸಿದ್ರು.
ಪ್ರಕರಣವನ್ನ ಮುಚ್ಚಿ ಹಾಕಲು ಮತ್ತು ತನಿಖೆಯ ಹಾದಿ ತಪ್ಪಿಸಲು ಪೊಲೀಸ್ ಇಲಾಖೆ ಸರ್ಕಾರದ ಜೊತೆ ಶಾಮೀಲಾಗಿದೆ. ಚುನಾವಣಾ ಪ್ರಚಾರಕ್ಕೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬೆಳಗಾವಿಗೆ ಹೋದಾಗ ರಮೇಶ್ ಜಾರಕಿಹೊಳಿ ಬೆಂಬಲಿಗರು ಕಪ್ಪು ಬಾವುಟ ತೋರಿಸುವುದು, ಚಪ್ಪಲಿ ಎಸೆಯುವ ಮೂಲಕ ಅಸಭ್ಯವಾಗಿ ವರ್ತಿಸಿದ್ದಾರೆ. ಸಿಡಿ ಪ್ರಕರಣಕ್ಕೆ ರಮೇಶ್ ಬೆಂಬಲಿಗರ ವರ್ತನೆ ಖಂಡನೀಯ ಎಂದು ಹೇಳಿದರು.