ಆನೇಕಲ್: ನಮ್ಮ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳು ಮೊದಲು ಕೋವಿಡ್ ಲಸಿಕೆ ತೆಗೆದುಕೊಂಡು ಜನರಿಗೆ ಹೇಳಬಹುದಿತ್ತು. ಆದರೆ ಅವರು ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿಲ್ಲ ಎಂದು ಕಾಂಗ್ರೆಸ್ ಶಾಸಕಿ ಸೌಮ್ಯರೆಡ್ಡಿ ಆರೋಪಿಸಿದ್ದಾರೆ.
ಬಿಜೆಪಿ ವಿರುದ್ಧ ಸೌಮ್ಯರೆಡ್ಡಿ ಆಕ್ರೋಶ ಬೊಮ್ಮನಹಳ್ಳಿಯಲ್ಲಿ ಆ್ಯಂಬುಲೆನ್ಸ್ ಸೇವೆ ಹಾಗೂ ದಿನನಿತ್ಯ ಊಟದ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ಇಡೀ ಪ್ರಪಂಚದಲ್ಲಿ ಅಲ್ಲಿನ ಪ್ರಧಾನಿಗಳು ಮೊದಲು ಲಸಿಕೆ ಪಡೆದು ಜನರಿಗೆ ಧೈರ್ಯ ತುಂಬಿದರು. ಇಂತಹ ಕೆಲಸ ಮಾಡದೆ ಕಾಂಗ್ರೆಸ್ ಕಡೆ ಬೊಟ್ಟು ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಶಾಸಕಿ ಹರಿಹಾಯ್ದಿದ್ದಾರೆ.
ಈಗಿನ ಸರ್ಕಾರ ಕೇವಲ ಎರಡು ಕೆಜಿ ಅಕ್ಕಿ ಕೊಡುತ್ತಿದೆ. ಇದರಿಂದ ಜನ ಅನ್ನಕ್ಕಾಗಿ ಪರಿತಪಿಸುವಂತಾಗಿದೆ. ಸಿದ್ದರಾಮಯ್ಯ ಸರ್ಕಾರವಿದ್ದಾಗ 7 ಕೆ.ಜಿ ಅಕ್ಕಿ ಕೊಡುತ್ತಿದ್ದರು. ಈಗ ಆಟೋ ಚಾಲಕರು, ದಿನಗೂಲಿ ನೌಕರರು ಪರದಾಡುತ್ತಿದ್ದಾರೆ. ವ್ಯಾಕ್ಸಿನೇಷನ್ ಕೂಡ ಸರಿಯಾಗಿ ಕೊಡುತ್ತಿಲ್ಲ. ವ್ಯಾಕ್ಸಿನ್ ಬೇರೆ ದೇಶಕ್ಕೆ ಕಳುಹಿಸಿಕೊಟ್ಟರು. ಕೊರೊನಾದಿಂದ ಲಕ್ಷಾಂತರ ಜನ ಮೃತಪಟ್ಟಿದ್ದಾರೆ. ಬಿಜೆಪಿ ಸರ್ಕಾರ ಸತ್ತು ಹೋಗಿದೆ. ಬಡವರನ್ನ ಮರೆತಿದೆ ಎಂದು ಶಾಸಕಿ ಸೌಮ್ಯರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
ಓದಿ:ಹೋಂ ಐಸೋಲೇಷನ್ ರದ್ದು: ಕೊರೊನಾದಿಂದ ಹಳ್ಳಿಗಳ ರಕ್ಷಣೆಗೆ ಮುಂದಾದ ಸರ್ಕಾರ!