ETV Bharat Karnataka

ಕರ್ನಾಟಕ

karnataka

ETV Bharat / state

ಸೋಂಕಿತರನ್ನು ಗುರುತಿಸುವ ಫೀವರ್ ಕ್ಲಿನಿಕ್​​ಗೆ ಚಾಲನೆ ನೀಡಿದ ಶಾಸಕ ಶರತ್ ಬಚ್ಚೇಗೌಡ - ಕೊರೊನಾ ಸೋಂಕು ಹೊಸಕೋಟೆ

ಕೊರೊನಾ ಸೋಂಕು ಹೊಸಕೋಟೆ ತಾಲೂಕಿನಲ್ಲಿ ಹೆಚ್ಚು ಹರಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಶಾಸಕ ಮತ್ತು ಅಧಿಕಾರಿಗಳು ಸಾಕಷ್ಟು ಪ್ರಯತ್ನಗಳನ್ನ ಮಾಡುತ್ತಿದ್ದಾರೆ. ಇಂದು ರಾಜ್ಯದಲ್ಲೇ ಮೊದಲ ಬಾರಿಗೆ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡುವ ಮತ್ತು ಕೊರೊನಾ ಕಟ್ಟಿಹಾಕಲು ಗ್ರಾಮಗಳಲ್ಲಿ ಫೀವರ್ ಕ್ಲಿನಿಕ್ ಗಳಿಗೆ ಚಾಲನೆ ನೀಡಿದರು.

mla-sharat-bachegowda
ಶಾಸಕ ಶರತ್ ಬಚ್ಚೇಗೌಡ
author img

By

Published : May 19, 2021, 10:57 PM IST

ಹೊಸಕೋಟೆ:ಗ್ರಾಮಗಳಲ್ಲಿಯೇ ಸೋಂಕಿತರನ್ನು ಗುರುತಿಸುವ ಫೀವರ್ ಕ್ಲಿನಿಕ್ ಗೆ ಶಾಸಕ ಶರತ್ ಬಚ್ಚೇಗೌಡ ಚಾಲನೆ ನೀಡಿದರು.

ಓದಿ: ರಾಜ್ಯದಲ್ಲಿಂದು 34,281 ಮಂದಿಗೆ ವೈರಸ್​ ದೃಢ: 468 ಸೋಂಕಿತರು ಬಲಿ

ಕೊರೊನಾ ಸೋಂಕು ಹೊಸಕೋಟೆ ತಾಲೂಕಿನಲ್ಲಿ ಹೆಚ್ಚು ಹರಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಶಾಸಕ ಮತ್ತು ಅಧಿಕಾರಿಗಳು ಸಾಕಷ್ಟು ಪ್ರಯತ್ನಗಳನ್ನ ಮಾಡುತ್ತಿದ್ದಾರೆ. ಇಂದು ರಾಜ್ಯದಲ್ಲೇ ಮೊದಲ ಬಾರಿಗೆ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡುವ ಮತ್ತು ಕೊರೊನಾ ಕಟ್ಟಿಹಾಕಲು ಗ್ರಾಮಗಳಲ್ಲಿ ಫೀವರ್ ಕ್ಲಿನಿಕ್ ಗಳಿಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡುವ ಕಾರ್ಯವನ್ನು ರಾಜ್ಯದಲ್ಲಿಯೇ ಮೊದಲು ಹೊಸಕೋಟೆ ತಾಲೂಕಿನಲ್ಲಿ ಆರಂಭಿಸಲಾಗಿದೆ. ಸೋಂಕು ತಗುಲಿ ಅದು ಹೆಚ್ಚಿನ ಹಂತಕ್ಕೆ ತಲುಪುವ ತನಕ ಗ್ರಾಮೀಣ ಭಾಗದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿಲ್ಲ. ಈ ಬಗ್ಗೆ ಅರಿವಿಲ್ಲದ ಕಾರಣ ಪ್ರತಿ ಗ್ರಾಮಗಳಿಗೆ ತೆರಳಿ ಪ್ರತಿಯೊಬ್ಬರನ್ನು ಪರೀಕ್ಷೆಗೆ ಒಳಪಡಿಸಿ ಸೋಂಕು ತಗುಲಿರುವ ಮತ್ತು ಕೊರೊನಾ ಲಕ್ಷಣಗಳು ಕಂಡುಬಂದರೆ ತಕ್ಷಣದಿಂದಲೇ ಅವರಿಗೆ ಚಿಕಿತ್ಸೆ ದೊರಕುವಂತಾದರೆ ಸೋಂಕು ಹರಡದಂತೆ ತಡೆಗಟ್ಟಬಹುದು ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಎಂವಿಜೆ ಆಸ್ಪತ್ರೆ ವೈದ್ಯರ ಸಹಯೋಗದೊಂದಿಗೆ ಹೊಸಕೋಟೆ ತಾಲೂಕಿನ ಪ್ರತಿ ಗ್ರಾಮಗಳಲ್ಲೂ 15 ತಂಡಗಳಾಗಿ, ವೈದರು ಫೀವರ್ ಕ್ಯಾಂಪ್ ಮಾಡಿ ಸೋಂಕಿತರನ್ನು ಗ್ರಾಮಗಳಿಂದಲೇ ಗುರುತಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ಗ್ರಾಮಗಳಲ್ಲಿ ಕಂಡುಬರುವ ಸೋಂಕಿತರನ್ನ ಗುರುತಿಸಿ ಅವಶ್ಯಕತೆ ಇದ್ದರೆ ಆಸ್ಪತ್ರೆಗೆ ಸೇರಿಸಲಾಗುವುದು. ಇಲ್ಲದಿದ್ದರೆ ಅವರನ್ನ ಕೋವಿಡ್ ಕೇರ್ ಸೆಂಟರ್ ಗಳಿಗೆ ಕಳುಹಿಸಿ ಉತ್ತಮ ಗುಣಮಟ್ಟದ ಆರೈಕೆ ನೀಡಲಾಗುತ್ತದೆ. ಫೀವರ್ ಕ್ಲಿನಿಕ್ ಸ್ಥಪನೆಯಿಂದ ಆಸ್ಪತ್ರೆಗಳ ಮೇಲೆ ಒತ್ತಡ ಕಡಿಮೆ ಆಗುತ್ತದೆ ಬೆಡ್ ಗಳ ಕೊರತೆ ಕಡಿಮೆಯಾಗುತ್ತದೆ. ಅವಶ್ಯಕತೆ ಇರುವ ಸೋಂಕಿತ ವ್ಯಕ್ತಿಗಳಿಗೆ ಆಸ್ಪತ್ರೆಯಲ್ಲಿ ಬೆಡ್ ಸಿಗುತ್ತದೆ ಎಂದು ತಿಳಿಸಿದರು.

ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ಅಟ್ಟೂರು ಗ್ರಾಮದಲ್ಲಿ ಫೀವರ್ ಕ್ಯಾಂಪಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಹೋಬಳಿಯ ಮುಗಬಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೋಂ ಕ್ವಾರಂಟೈನಲ್ಲಿರುವಂತಹ ಸೋಂಕಿತರಿಗೆ ಉಚಿತ ಔಷಧಗಳನ್ನು ನೀಡಿದರು.

ABOUT THE AUTHOR

...view details