ದೇವನಹಳ್ಳಿ:ರಾಮನಗರದಲ್ಲಿ ಸೋಮವಾರ ನಡೆದದ್ದು ಸರ್ಕಾರಿ ಕಾರ್ಯಕ್ರಮವಾಗಿರದೇ ಬಿಜೆಪಿ ಕಾರ್ಯಕ್ರಮವಾಗಿತ್ತು. ಬಿಜೆಪಿ ಇತರೆ ಪಕ್ಷದ ಶಾಸಕ, ಸಂಸದರನ್ನು ಕಡೆಗಣಿಸುತ್ತಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಆರೋಪಿಸಿದರು.
ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾರ್ಯಕ್ರಮಗಳಿಗೆ ಬಿಜೆಪಿ ಸರ್ಕಾರ ಪ್ರೋಟೋಕಾಲ್ ಪಾಲನೆ ಮಾಡ್ತಿಲ್ಲ. ಯಾವ ಜಿಲ್ಲೆಯಲ್ಲಿಯೂ ಸರಿಯಾಗಿ ಉಸ್ತುವಾರಿ ಸಚಿವರನ್ನು ನೇಮಕ ಮಾಡಿಲ್ಲ. ಸ್ಥಳೀಯ ಮಟ್ಟದಲ್ಲಿ ಶಾಸಕರು, ಸಂಸದರನ್ನ ಬಿಜೆಪಿ ಕಡೆಗಣಿಸುತ್ತಿದೆ. ಸೋಮವಾರ ನಡೆದಿದ್ದು ಪಕ್ಷದ ಕಾರ್ಯಕ್ರಮವಲ್ಲ, ಇದೊಂದು ಸರ್ಕಾರಿ ಕಾರ್ಯಕ್ರಮವಾಗಿತ್ತು. ಇಂತಹ ಕಾರ್ಯಕ್ರಮದಲ್ಲಿ ಏಕಾಧಿಪತ್ಯ ತರಲು ಬಿಜೆಪಿ ಹೊರಟಿದೆ ಎಂದು ವಾಗ್ದಾಳಿ ನಡೆಸಿದರು.