ಕರ್ನಾಟಕ

karnataka

ಬೆಡ್​ ಬ್ಲಾಕಿಂಗ್​ ಕುರಿತು ಧ್ವನಿಯೆತ್ತಿದ್ದಕ್ಕಾಗಿ ನಮ್ಮ ಮೇಲೆಯೇ ಆರೋಪ: ಶಾಸಕ ಸತೀಶ್ ರೆಡ್ಡಿ

By

Published : May 6, 2021, 6:50 PM IST

Updated : May 6, 2021, 7:21 PM IST

ಅಧಿಕಾರಿಗಳು ಅಧಿಕಾರ ದುರುಪಯೋಗ ಮಾಡಿ ತಮ್ಮ ತಪ್ಪನ್ನು ಮುಚ್ಚಿಹಾಕಲು ನನ್ನ ಹೆಸರನ್ನು ತರುತ್ತಿದ್ದಾರೆ ಎಂದು ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಶಾಸಕ ಸತೀಶ್ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.

mla-sathish-reddy
ಶಾಸಕ ಸತೀಶ್ ರೆಡ್ಡಿ

ಬೆಂಗಳೂರು: ಎರಡು ದಿನಗಳಿಂದ ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣ ಚರ್ಚೆಯಲ್ಲಿರುವಾಗಲೇ ಇದೀಗ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಹೆಸರು ಕೇಳಿ ಬಂದಿದೆ. ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಅವರು ಪ್ರಕರಣದಿಂದ ಕೈತೊಳೆದುಕೊಳ್ಳಲು ಯತ್ನಿಸಿದ್ದಾರೆ.

ಈ ಪ್ರಕರಣದ ಕುರಿತು ಇಂದು ಪ್ರತಿಕ್ರಿಯಿಸಿರುವ ಅವರು, ಅಧಿಕಾರಿಗಳು ಅಧಿಕಾರ ದುರುಪಯೋಗ ಮಾಡಿ ತಮ್ಮ ತಪ್ಪನ್ನು ಮುಚ್ಚಿಹಾಕಲು ನನ್ನ ಹೆಸರನ್ನು ತರುತ್ತಿದ್ದಾರೆ. ಒಬ್ಬ ಐಎಎಸ್ ಅಧಿಕಾರಿ ಏಜೆನ್ಸಿಗಳಿಗೆ ಆ ಜವಾಬ್ದಾರಿಯನ್ನು ಕೊಟ್ಟಿದ್ದು, ಕೋಟಿ ಕೋಟಿ ಹಣ ಲೂಟಿ ಮಾಡಿದ್ದಾರೆ. ಈ ಪ್ರಕರಣದ ಕುರಿತು ನಾವು ಧ್ವನಿಯೆತ್ತಿದ್ದಕ್ಕಾಗಿ ನಮ್ಮ ಮೇಲೆಯೇ ಆರೋಪ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಬೆಡ್​ ಬ್ಲಾಕಿಂಗ್​ ಕುರಿತು ಶಾಸಕ ಸತೀಶ್ ರೆಡ್ಡಿ ಪ್ರತಿಕ್ರಿಯೆ

ನನ್ನ ಕ್ಷೇತ್ರದ ಮತದಾರರು ಸಹಾಯಕ್ಕಾಗಿ ನನ್ನ ಬಳಿ ಬಂದಾಗ ನಾನು ಅವರಿಗೆ ಸಹಾಯ ಮಾಡಿದ್ದೇನೆ. ಅಧಿಕಾರಿಗಳಿಗೆ ಕರೆ ಮಾಡಿ ಬೆಡ್ ವ್ಯವಸ್ಥೆ ಮಾಡಿಸಿದ್ದೇನೆ. ಇದನ್ನೇ ಬೆಡ್ ಬುಕ್ಕಿಂಗ್ ಎಂದು, ಅದನ್ನು ನಾನೇ ಮಾಡಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಸರಿಯಾದ ಸಾಕ್ಷಿಗಳನ್ನು ಒದಗಿಸಿ ಎಂದು ಸವಾಲು ಹಾಕಿದ್ದಾರೆ.

ಸತೀಶ್ ರೆಡ್ಡಿ ಅರೆಸ್ಟ್ ಮಾಡಲು ಒತ್ತಾಯಿಸುತ್ತಿರುವ ಕಾಂಗ್ರೆಸ್ ನಾಯಕರು ಬ್ಲಾಕಿಂಗ್ ದಂಧೆ ಹೊರಬಂದಾಗ ಅಭಿನಂದಿಸಿದ್ದರು. ಇದೀಗ ಉಲ್ಟಾ ಹೊಡೆಯುತ್ತಿದ್ದಾರೆ ಎಂದರು.

ಓದಿ:ನೀವು ಯಡಿಯೂರಪ್ಪ ಅವರಿಗೆ ರಾಜೀನಾಮೆ ಕೇಳಬೇಕು ಅಲ್ವಾ?: ತೇಜಸ್ವಿಗೆ ಜಮೀರ್ ಅಹ್ಮದ್ ಪ್ರಶ್ನೆ!

Last Updated : May 6, 2021, 7:21 PM IST

For All Latest Updates

ABOUT THE AUTHOR

...view details