ಬೆಂಗಳೂರು: ದೇವನಹಳ್ಳಿ ತಾಲೂಕಿನ ಅಧಿಕಾರಿಗಳ ಅಭಿವೃದ್ಧಿ ಕೆಲಸಗಳು ಸಮಾಧಾನ ತರದ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ದ ದೇವನಹಳ್ಳಿ ಶಾಸಕರು ಗರಂ ಆಗಿದ್ದಾರೆ.
ತಾಲೂಕು ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡ ಶಾಸಕ ನಿಸರ್ಗ ನಾರಾಯಣ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ನಿಸರ್ಗ ನಾರಾಯಣಸ್ವಾಮಿ, 2018-19 ರಲ್ಲಿ ಏನೆಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೀರಿ? ಯಾವ ಇಲಾಖೆಯಲ್ಲಿ ಸರ್ಕಾರ ಬಿಡುಗಡೆ ಮಾಡಿದ ಹಣವನ್ನು ಸದುಪಯೋಗ ಪಡಿಸಿಕೊಂಡಿದ್ದೀರಿ? ಎಷ್ಟು ಫಲಾನುಭವಿಗಳಿದ್ದಾರೆ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ್ರು.
ಇದಕ್ಕೆ ಕೆಲ ಅಧಿಕಾರಿಗಳು ನೀಡಿದ ಉತ್ತರ ಶಾಸಕರಿಗೆ ತೃಪ್ತಿದಾಯಕ ಎನ್ನಿಸಲಿಲ್ಲ. ಇದಕ್ಕೆ ಅಸಮಾಧಾನಗೊಂಡ ಶಾಸಕರು ಇನ್ನು ಹೆಚ್ಚು ಕೆಲಸ ಬಾಕಿ ಇದೆ. ಯಾವಾಗ ಕಂಪ್ಲೀಟ್ ಮಾಡ್ತೀರ ಎಂದು ಪ್ರಶ್ನೆಗಳ ಸುರಿಮಳೆಗೈದರು. ರೈತರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸರಿಯಾಗಿ ತಲುಪಿಸಿದ್ದೀರಾ? ಬರಗಾಲದಲ್ಲಿ ಸರಕಾರ ನೀಡುವ ನೆರವನ್ನು ನೀಡಿದ್ದಿರಾ? ಎಷ್ಟು ಫಲಾನುಭವಿಗಳು ಪಡೆದುಕೊಂಡಿದ್ದಾರೆ ಎಂದು ಕೃಷಿ ಇಲಾಖೆ ಅಧಿಕಾರಿಗೆ ಕ್ಲಾಸ್ ತೆಗೆದುಕೊಂಡರು.
ಹಲವು ರೈತರು ಅರ್ಜಿ ಹಾಕಿರಲಿಲ್ಲ ಎಂದಿದ್ದಕ್ಕೆ ಯೋಜನೆ ಕುರಿತು ಜನರಿಗೆ ಮಾಹಿತಿ ನೀವು ನೀಡಬೇಕು. ಮಾಹಿತಿ ನೀಡದಿದ್ದಾಗ ರೈತರಿಗೆ ಹೇಗೆ ಯೋಜನೆಗಳ ಬಗ್ಗೆ ತಿಳಿಯುತ್ತದೆ. ಇದರಿಂದ ಸರ್ಕಾರದ ಯೋಜನೆಗಳು ರೈತರಿಗೆ ಸರಿಯಾಗಿ ಸಿಗುತ್ತಿಲ್ಲ ಎಂದು ಗರಂ ಆದರು.
ಮುಂದಿನ ಪ್ರಗತಿ ಪರಿಶೀಲನೆ ಸಭೆಯ ವೇಳೆಗೆ ಎಲ್ಲಾ ಇಲಾಖೆಗಳು ತಮ್ಮ ತಮ್ಮ ಕೆಲಸವನ್ನು ಕಂಪ್ಲೀಟ್ ಮಾಡಿರಬೇಕು. ಜನರಿಗೆ ರೈತರಿಗೆ ಏನೆಲ್ಲಾ ಸೌಲಭ್ಯ ಸಿಗಬೇಕೋ ಅದೆಲ್ಲಾ ಸಿಗಬೇಕು. ಇಲ್ಲದಿದ್ದಲ್ಲಿ ಪರಿಣಾಮ ಬೇರೆಯಾಗಿರುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.