ಕರ್ನಾಟಕ

karnataka

ETV Bharat / state

ಮದುವೆ ಮಾಡಿಕೊಂಡಾಗಿದೆ: ಗಂಡೋ, ಹೆಣ್ಣೋ ಒಟ್ಟಿನಲ್ಲಿ ಮಗುವಾದ್ರೆ ಸಾಕು ಅಂದ್ರು ಶಾಸಕ ಆನಂದ ಸಿಂಗ್ - ಶಾಸಕ ಆನಂದ ಸಿಂಗ್

ವಿಜಯನಗರ ಕ್ಷೇತ್ರದ ಶಾಸಕ ಆನಂದ್​ ಸಿಂಗ್​ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತು ಮಾರ್ಮಿಕವಾಗಿ ಮಾತನಾಡಿರುವ ಅವರು, ಮದುವೆ ಮಾಡಿಕೊಂಡಾಗಿದೆ, ಮಗು ಗಂಡೋ, ಹೆಣ್ಣೋ ಒಟ್ಟಿನಲ್ಲಿ ಮಗು ಆದ್ರೆ ಸಾಕು ಎಂದು ಹೇಳಿದ್ದಾರೆ. ಇದೇ ವೇಳೆ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ತಂದಿರುವುದು ದೇಶದ ಒಳಿತಿಗಾಗಿ ಎಂದಿದ್ದಾರೆ.

MLA Anand Singh expressed confidence in becoming a minister
ಸಚಿವನಾಗುವ ವಿಶ್ವಾಸ ವ್ಯಕ್ತಪಡಿಸಿದ ಶಾಸಕ ಆನಂದ ಸಿಂಗ್

By

Published : Dec 26, 2019, 12:10 PM IST

Updated : Dec 26, 2019, 1:46 PM IST

ಹೊಸಪೇಟೆ:ಬಿಜೆಪಿ ನಾಯಕರು ವಿಜಯ ನಗರ ಉಪ ಚುನಾವಣೆಯಲ್ಲಿ ಶಾಸಕ ಆನಂದ ಸಿಂಗ್ ಗೆದ್ದ 24 ಗಂಟೆಗಳಲ್ಲಿ ಅವರನ್ನು ಸಚಿವರನ್ನಾಗಿ ಮಾಡುವ‌ ಭರವಸೆ ನೀಡಿದ್ದರು.ಆದರೆ, ಈರೆಗೂ ಸಚಿವರಾಗಿಲ್ಲ ಏಕೆ ಎಂದು ಮಾಧ್ಯಮದವರು ಪ್ರಶ್ನಿಸಿದ್ದಕ್ಕೆ ಶಾಸಕ ಆನಂದ್​ ಸಿಂಗ್​ ಮಾರ್ಮಿಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಶಾಸಕ ಆನಂದ್​ ಸಿಂಗ್​ ಮಾರ್ಮಿಕ ಪ್ರತಿಕ್ರಿಯೆ

ನಗರದಲ್ಲಿ ಮಾತನಾಡಿದ ಅವರು, ಮದುವೆ ಮಾಡಿಕೊಂಡಾಗಿದೆ. ಗಂಡೋ, ಹೆಣ್ಣೋ ಒಟ್ಟಿನಲ್ಲಿ ಮಗುವಾದ್ರೆ ಸಾಕು ಎನ್ನುತ್ತ ಸಚಿವ ಸ್ಥಾನ ಕೊಡಿ ಎಂಬುದನ್ನು ಪರೋಕ್ಷವಾಗಿ ಹೇಳಿದ್ರು.

ಇನ್ನು, ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ತಂದಿರುವುದು ದೇಶದ ಒಳಿತಿಗಾಗಿ. ಇದರ ಬಗ್ಗೆ ನಾನು ಹೆಚ್ಚೇನು ತಿಳಿದುಕೊಂಡಿಲ್ಲ. ಆದರೆ, ದೇಶದಲ್ಲಿರುವ ಪ್ರಜೆಗಳಿಗೆ ಇದರಿಂದ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಈ ಕಾಯ್ದೆಯನ್ನು ಏಕೆ ವಿರೋಧಿಸಲಾಗ್ತಿದೆ ಅನ್ನೋದು ಸಹ ತಿಳಿಯುತ್ತಿಲ್ಲ ಎಂದರು.

ಬಳಿಕ ನಗರದ ತಾಲೂಕು ಕ್ರೀಡಾಂಗಣದಲ್ಲಿ‌ ನಡೆದ ಶ್ರೀ ಮಹಾಸತ್ ಚಂಡಿಕಾ ಯಜ್ಞ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು.

Last Updated : Dec 26, 2019, 1:46 PM IST

ABOUT THE AUTHOR

...view details