ನೆಲಮಂಗಲ: ಸಾಲಕ್ಕೆ ಸಿಗರೇಟ್ ಕೊಡಲ್ಲ ಎಂದ ಪ್ರಾವಿಷನ್ ಸ್ಟೋರ್ ಮಾಲೀಕನ ಮೇಲೆ ದುಷ್ಕರ್ಮಿಗಳು ಹಲ್ಲೆ ಎಸಗಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.
ಸಾಲಕ್ಕೆ ಸಿಗರೇಟ್ ಕೊಡದ ಅಂಗಡಿ ಮಾಲೀಕನ ಮೇಲೆ ಹಲ್ಲೆ: ಸಿಸಿಟಿವಿಯಲ್ಲಿ ಸೆರೆ - ಸಾಲಕ್ಕೆ ಸಿಗರೇಟ್ ಕೊಡದ ಮಾಲೀಕನ ಮೇಲೆ ಹಲ್ಲೆ
ಹಣ ಕೊಡದೇ ಸಿಗರೇಟ್ ಕೊಡಲ್ಲ ಎಂದ ಪ್ರಾವಿಷನ್ ಸ್ಟೋರ್ ಮಾಲೀಕನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿರುವ ಘಟನೆ ನಡೆದಿದೆ.
ನೆಲಮಂಗಲದ ಅಡೇಪೇಟೆಯ ವಿರೇಶ್ ಪ್ರಾವಿಷನ್ ಸ್ಟೋರ್ನಲ್ಲಿ ಘಟನೆ ನಡೆದಿದ್ದು, ಸ್ಟೋರ್ ಮಾಲೀಕ ರುದ್ರೇಶ್ ಎಂಬುವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.
ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಸಿಗರೇಟ್ ಕೇಳಿದ್ದಾರೆ. ಸಿಗರೇಟ್ ಕೊಟ್ಟು ಹಣ ಕೇಳಿದಾಗ ಸಾಲ ಬರ್ಕೊಳಿ ಎಂದಿದ್ದಾರೆ, ಹಣ ಕೊಡದೆ ಸಿಗರೇಟ್ ಕೊಡಲು ಸಾಧ್ಯವಿಲ್ಲ ಎಂದು ಸ್ಟೋರ್ ಮಾಲೀಕ ಹೇಳಿದ್ದಕ್ಕೆ ಹಲ್ಲೆ ಮಾಡಿದ್ದಾರೆ. ಬಳಿಕ ದುಷ್ಕರ್ಮಿಗಳ ಮೇಲೆ ಮಾಲೀಕ ಪ್ರತಿದಾಳಿ ನಡೆಸಿದಾಗ ಪರಾರಿಯಾಗಿದ್ದಾರೆ. ಹಲ್ಲೆ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನೆಲಮಂಗಲ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.