ದೇವನಹಳ್ಳಿ: ನೂತನ ಸಚಿವರಿಗೆ ಖಾತೆ ಹಂಚಿಕೆ ವಿಚಾರಕ್ಕೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಯಾವ ಖಾತೆ ಕೊಟ್ರೇನಂತೆ ಸಾರ್ವಜನಿಕರಿಗೆ ಸ್ಪಂದಿಸುವ ಕೆಲಸ ಮಾಡ್ಬೇಕು ಎಂದಿದ್ದಾರೆ.
ಯಾವ ಖಾತೆ ಕೊಟ್ರೇನಂತೆ ಸಾರ್ವಜನಿಕರಿಗೆ ಸ್ಪಂದಿಸುವ ಕೆಲಸ ಮಾಡ್ಬೇಕು: ಸಚಿವ ಎಸ್.ಟಿ.ಸೋಮಶೇಖರ್ - ದೇವನಹಳ್ಳಿ
ಯಾವ ಖಾತೆ ಕೊಟ್ರೇನಂತೆ ಸಾರ್ವಜನಿಕರಿಗೆ ಸ್ಪಂದಿಸುವ ಕೆಲಸ ಮಾಡ್ಬೇಕು. ಖಾತೆ ಬದಲಾವಣೆಯಿಂದ ಹೊಸ ಹೊಸ ಅನುಭವ ಬರುತ್ತೆ. ಒಂದೇ ಖಾತೆಯಿಂದ ಹೊಸತನ ಕಲಿಯಲು ಸಾಧ್ಯವಿಲ್ಲ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಎಸ್ಟಿ ಸೋಮಶೇಖರ್
ದೇವನಹಳ್ಳಿ ಪಟ್ಟಣದ ಜಿಲ್ಲಾ ಸಹಕಾರ ಸಂಘಕ್ಕೆ ಭೇಟಿ ನೀಡಿ ರೈತರಿಗೆ ನೀಡುತ್ತಿರುವ ಸಾಲದ ಬಗ್ಗೆ ಪರಿಶೀಲನೆ ನಡೆಸಿ ಬಳಿಕ ಮಾತನಾಡಿದ ಅವರು, ಯಾವ ಖಾತೆ ಕೊಟ್ರೇನಂತೆ ಸಾರ್ವಜನಿಕರಿಗೆ ಸ್ಪಂದಿಸುವ ಕೆಲಸ ಮಾಡ್ಬೇಕು. ಖಾತೆ ಬದಲಾವಣೆಯಿಂದ ಹೊಸ ಹೊಸ ಅನುಭವ ಬರುತ್ತೆ. ಒಂದೇ ಖಾತೆಯಿಂದ ಹೊಸತನ ಕಲಿಯಲು ಸಾಧ್ಯವಿಲ್ಲ ಎಂದರು.
ಖಾತೆ ಹಂಚಿಕೆಯಲ್ಲಿ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗಿದೆ ಎಂಬ ಕೂಗು ಕೇಳಿ ಬಂದಿದೆ ಎಂಬುದನ್ನು ಅಲ್ಲಗೆಳೆದ ಸಚಿವರು, ಸಿಎಂ ಯಡಿಯೂರಪ್ಪ ಒಕ್ಕಲಿಗ, ಹಿಂದುಳಿದ ವರ್ಗ ಅಂತಾ ತಾರತಮ್ಯ ಮಾಡಿಲ್ಲವೆಂದರು.